Fact Check: ಸರ್ಕಾರಿ ಆದೇಶದಂತೆ ಭಾರತದಲ್ಲಿ ರಾತ್ರಿ 11:30ರಿಂದ ಬೆಳಿಗ್ಗೆ 6ರವರೆಗೆ ವಾಟ್ಸ್​ಆಪ್​ ನಿಷೇಧ! ಈ ವೈರಲ್ ಸಂದೇಶದ ಸತ್ಯಾಸತ್ಯತೆಗಳೇನು?

ವಾಟ್ಸ್ ಆಪ್ಅನ್ನು ರಾತ್ರಿ 11:30 ರಿಂದ ಬೆಳಿಗ್ಗೆ 6ರವರೆಗೆ ಮುಚ್ಚಲಾಗುವುದು ಎಂಬ ವೈರಲ್ ಸಂದೇಶದ ಸತ್ಯಾಸತ್ಯತೆಗಳೇನು? ಎಂಬುದರ ಸಂಪೂರ್ಣ ಮಾಹಿತಿಗಾಗಿ ಈ ಸುದ್ದಿ ಓದಿ.

Fact Check: ಸರ್ಕಾರಿ ಆದೇಶದಂತೆ ಭಾರತದಲ್ಲಿ ರಾತ್ರಿ 11:30ರಿಂದ ಬೆಳಿಗ್ಗೆ 6ರವರೆಗೆ ವಾಟ್ಸ್​ಆಪ್​ ನಿಷೇಧ! ಈ ವೈರಲ್ ಸಂದೇಶದ ಸತ್ಯಾಸತ್ಯತೆಗಳೇನು?
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Oct 13, 2021 | 12:22 PM

ಭಾರತದಲ್ಲಿ ವಾಟ್ಸ್ ಆಪ್​ಅನ್ನು ರಾತ್ರಿರಿಂದ ಬೆಳಗಿನಜಾವದವರೆಗೆ ನಿಷೇಧಿಸಲಾಗುತ್ತದೆ ಈ ಕುರಿತಂತೆ ಸರ್ಕಾರ ಆದೇಶ ಹೊರಡಿಸಿದೆ ಎಂಬ ವೈರಲ್ ಸಂದೇಶವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ರಾತ್ರಿ 11:30 ರಿಂದ ಬೆಳಿಗ್ಗೆ 6ರವೆರೆಗೆ ವಾಟ್ಸ್ ಆಪ್ ಮುಚ್ಚಲಾಗುವುದು ಈ ಸಂದೇಶವನ್ನು ಪಾರ್ವರ್ಡ್ ಮಾಡದಿದ್ದಲ್ಲಿ ಅವರ ವಾಟ್ಸ್ ಆಪ್ ಖಾತೆಯನ್ನೇ ಮುಚ್ಚಲಾಗುವುದು ಎಂಬ ಸಂದೇಶವೊಂದು ಹರಿದಾಡುತ್ತಿದೆ. ಇದು ನಕಲಿ ಮತ್ತು ಬಳಕೆದಾರರನ್ನು ದಾರಿ ತಪ್ಪಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ಪ್ರೆಸ್ ಇನ್​ಫಾರ್ಮೇಶನ್​ ಬ್ಯರೋ (ಪಿಐಬಿ) ಹೇಳಿದೆ.

ನಕಲಿ ಸಂದೇಶವನ್ನು ವಜಾಗೊಳಿಸಲು, ಪಿಐಬಿ ಸತ್ಯ ಪರಿಶೀಲನೆಗೆ ಮುಂದಾಗಿದೆ. ವಾಟ್ಸ್ ಆಪ್ಅನ್ನು ರಾತ್ರಿ 11:30 ರಿಂದ ಬೆಳಿಗ್ಗೆ 6ರವರೆಗೆ ಮುಚ್ಚಲಾಗುವುದು ಎಂಬ ವೈರಲ್ ಸಂದೇಶ ನಕಲಿ. ಈ ರೀತಿ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಪಿಬಿಐ ಸ್ಪಷ್ಟನೆ ನೀಡಿದೆ. ಈ ರೀತಿಯಾದ ಸುಳ್ಳು ಮತ್ತು ಆಧಾರ ರಹಿತ ಮಾಹಿತಿಗಳನ್ನು ನಂಬದಂತೆ ಜನರಿಗೆ ಪಿಬಿಐ ಫ್ಯಾಕ್ಟ್ ಚೆಕ್ ಕೇಳಿಕೊಂಡಿದೆ.

ಪಿಬಿಐ ಫ್ಯಾಕ್ಟ್​ ಚೆಕ್​ ಟ್ವೀಟ್​;

ಇತ್ತೀಚೆಗೆ ವಾಟ್ಸ್ ಆಪ್, ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಳು ಗಂಟೆಗಳ ಕಾಲ ಸ್ಥಗಿತಗೊಂಡಿದ್ದವು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಇಂತಹ ಸುಳ್ಳು ಸಂದೇಶಗಳು ಹರಿದಾಡುತ್ತಿವೆ. ಡೌನ್ ಡಿಟೆಕ್ಟರ್ ಪ್ರಕಾರ, ಈ ಸಮಸ್ಯೆಗಳು ಅಕ್ಟೋಬರ್ 4ರಂದು ರಾತ್ರಿ 11:30ರ ದುಮಾರಿಗೆ ಎದುರಾದವು. ಇದು ಜಗತ್ತಿನಾದ್ಯಂತ ಬಳಕೆದಾರರ ಮೇಲೆ ಪರಿಣಾಮ ಬೀರಿತು.

ಇದನ್ನೂ ಓದಿ:

WhatsApp Tricks: ಇದೀಗ ಟೈಪ್ ಮಾಡದೇ ವಾಟ್ಸ್​ಆ್ಯಪ್​ನಲ್ಲಿ ಟೆಕ್ಸ್ಟ್​​​ ಮೆಸೇಜ್ ಕಳುಹಿಸಿ: ಇಲ್ಲಿದೆ ಟ್ರಿಕ್

WhatsApp ಯಾರ ಕಣ್ಣಿಗೂ ಕಾಣಿಸದಂತೆ ವಾಟ್ಸ್​​ಆಪ್ ಚಾಟ್ ಬಚ್ಚಿಡುವುದು ಹೇಗೆ? ಇಲ್ಲಿದೆ ಸುಲಭದ ಉಪಾಯ