Moto G52: ಭಾರತದಲ್ಲಿ ಧೂಳೆಬ್ಬಿಸಲು ಬರುತ್ತಿದೆ ಮೋಟೋ G52: ಬಿಡುಗಡೆಗೂ ಮೊದಲೇ ಸಖತ್ ಕ್ರೇಜ್

| Updated By: Vinay Bhat

Updated on: Apr 16, 2022 | 1:32 PM

ಮೋಟೋರೊಲಾ ಕಂಪನಿ ಇದೀಗ ಭಾರತದ ಮಾರುಕಟ್ಟೆಯಲ್ಲಿ ತನ್ನ ಹೊಸ ಮೋಟೋ ಜಿ52 (MOto G52) ಫೋನ್‌ ಅನ್ನು ಅನಾವರಣ ಮಾಡಲು ಸಿದ್ಧತ ನಡೆಸಿದೆ. ಬಿಡುಗಡೆಗೂ ಮೊದಲೇ ಈ ಫೋನ್ ಭರ್ಜರಿ ಸುದ್ದಿಯಲ್ಲಿದ್ದು ಕಂಪನಿಗೆ ಮತ್ತೊಂದು ಯಶಸ್ಸು ಸಿಗುವುದು ಖಚಿತ ಎನ್ನಲಾಗುತ್ತಿದೆ.

Moto G52: ಭಾರತದಲ್ಲಿ ಧೂಳೆಬ್ಬಿಸಲು ಬರುತ್ತಿದೆ ಮೋಟೋ G52: ಬಿಡುಗಡೆಗೂ ಮೊದಲೇ ಸಖತ್ ಕ್ರೇಜ್
Moto G52
Follow us on

ಭಾರತದಲ್ಲಿ ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ ಹಾಗೂ ಒನ್​ಪ್ಲಸ್​ ನಂತಹ ಘಟಾನುಘಟಿ ಸ್ಮಾರ್ಟ್​​ಫೋನ್ ಬ್ರ್ಯಾಂಡ್​​ಗಳು ತಲೆಯೆತ್ತಿ ಮೆರೆಯುತ್ತಿರುವಾಗ ಮೋಟೋರೊಲಾ (Motorola) ಸಂಸ್ಥೆ ತನ್ನದೆಯಾದ ವಿಶೇಷ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸು ಸಾಧಿಸುತ್ತಿದೆ. ಇದೀಗ ಮತ್ತೆ ಭಾರತದಲ್ಲಿ ಹೊಸ ಸ್ಮಾರ್ಟ್​​ಫೋನ್​ ಒಂದನ್ನು ರಿಲೀಸ್ ಮಾಡಲು ತಯಾರಿ ನಡೆಸಿದೆ. ಹೌದು ಮೋಟೋರೊಲಾ ಕಂಪನಿ ಇದೀಗ ಭಾರತದ ಮಾರುಕಟ್ಟೆಯಲ್ಲಿ ತನ್ನ ಹೊಸ ಮೋಟೋ ಜಿ52 (Moto G52) ಫೋನ್‌ ಅನ್ನು ಅನಾವರಣ ಮಾಡಲು ಸಿದ್ಧತ ನಡೆಸಿದೆ. ಬಿಡುಗಡೆಗೂ ಮೊದಲೇ ಈ ಫೋನ್ ಭರ್ಜರಿ ಸುದ್ದಿಯಲ್ಲಿದ್ದು ಕಂಪನಿಗೆ ಮತ್ತೊಂದು ಯಶಸ್ಸು ಸಿಗುವುದು ಖಚಿತ ಎನ್ನಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ ಈ ತಿಂಗಳಾಂತ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ವಿಶೇಷ ಎಂದರೆ ಇದು ಕಳೆದ ವರ್ಷ ಭಾರತದಲ್ಲಿ ರಿಲೀಸ್ ಆದ ಮೋಟೋ G51 ಮುಂದಿನ ಆವೃತ್ತಿ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಹೀಗಾಗಿ ಆಕರ್ಷಕ ಫೀಚರ್​ಗಳನ್ನು ನಿರೀಕ್ಷಿಸಲಾಗಿದೆ.

ಕಂಪನಿ ಇದುವರೆಗೆ ಈ ಫೋನಿನ ವಿಶೇಷತೆ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳ ಪ್ರಕಾರ ಮೋಟೋ G52 ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಫುಲ್‌ HD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ ಎನ್ನಲಾಗಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ ಹೊಂದಿರುವ ಸಾಧ್ಯತೆ ಇದ್ದು, ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುವುದು ಖಚಿತವಾಗಿದೆ. ಹಾಗೆಯೇ 4GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಸಾಮಾನ್ಯವಾಗಿ ಮೋಟೋರೊಲಾದ ಬಹುತೇಕ ಎಲ್ಲ  ಸ್ಮಾರ್ಟ್​​ಫೋನ್​ಗಳು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿವೆ. ಇದರಲ್ಲಿ ಕೂಡ ಅದನ್ನೇ ನಿರೀಕ್ಷಿಸಲಾಗಿದೆ. 30W ಟರ್ಬೋಪವರ್ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ IP52 ರೇಟಿಂಗ್ ಅನ್ನು ಹೊಂದಿದ್ದು, ಡಾಲ್ಬಿ ಅಟ್ಮೋಸ್‌ ಬೆಂಬಲವನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಲಿದೆ. ಮೋಟೋ G52 ಸ್ಮಾರ್ಟ್‌ಫೋನ್‌ ತನ್ನ ಏಕೈಕ 4GB + 128GB ಸ್ಟೋರೇಜ್ ರೂಪಾಂತರಕ್ಕಾಗಿ ಯುರೋಪ್‌ನಲ್ಲಿ EUR 249 ಬೆಲೆಯಲ್ಲಿ ಬಿಡುಗಡೆಯಾಗಿದೆ. ಅಂದರೆ ಇದರ ಬೆಲೆ ಭಾರತದಲ್ಲಿ ಅಂದಾಜಿ 20,000 ಇರಬಹುದು.

Infinix Hot 11 2022: ಕೇವಲ 8,999 ರೂ.: ಭಾರತದಲ್ಲಿ ಇನ್ಫಿನಿಕ್ಸ್‌ ಹಾಟ್‌ 11 2022 ಸ್ಮಾರ್ಟ್‌ಫೋನ್‌ ಬಿಡುಗಡೆ