Shocking News! ಮನುಷ್ಯರ ಮೂತ್ರದಿಂದಲೂ ವಿದ್ಯುತ್ ಉತ್ಪಾದನೆ: ಇದು ಐಐಟಿ ಅದ್ಭುತ ಸೃಷ್ಟಿ

|

Updated on: Feb 16, 2024 | 10:35 AM

ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಪ್ರಸ್ತುತ ಮೊಬೈಲ್ ಫೋನ್ ಮತ್ತು ಲೈಟ್ ಎಲ್ಇಡಿ ಬಲ್ಬ್​ಗಳನ್ನು ಚಾರ್ಜ್ ಮಾಡಲು ಬಳಸಲಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಯೋಜನೆಯು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರದ ಇಕ್ವಿಟಿ ಎಂಪವರ್‌ಮೆಂಟ್ ಮತ್ತು ಡೆವಲಪ್‌ಮೆಂಟ್ ವಿಭಾಗದಿಂದ ಧನಸಹಾಯ ಪಡೆದಿದೆ.

Shocking News! ಮನುಷ್ಯರ ಮೂತ್ರದಿಂದಲೂ ವಿದ್ಯುತ್ ಉತ್ಪಾದನೆ: ಇದು ಐಐಟಿ ಅದ್ಭುತ ಸೃಷ್ಟಿ
ಮನುಷ್ಯರ ಮೂತ್ರದಿಂದಲೂ ವಿದ್ಯುತ್ ಉತ್ಪಾದನೆ: ಐಐಟಿ ಅದ್ಭುತ ಸೃಷ್ಟ
Follow us on

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – ಪಾಲಕ್ಕಾಡ್ ಸಂಶೋಧಕರು ಮಾನವ ಮೂತ್ರದಿಂದ ವಿದ್ಯುತ್ ಉತ್ಪಾದಿಸುವ ಹೊಸ ವಿಧಾನವನ್ನು ಕಂಡುಹಿಡಿದಿದ್ದಾರೆ. ವಿಶ್ವಾದ್ಯಂತ ಇಂಧನ ಹೆಚ್ಚುತ್ತಿರುವ ಬೇಡಿಕೆಗೆ ಉತ್ತವಾಗಿ ಐಐಟಿ ತಂಡ ಈ ಹೊಸ ಆವಿಷ್ಕಾರವನ್ನು ಮಾಡಿದೆ. ಇದರ ಭಾಗವಾಗಿ, ಎಲೆಕ್ಟ್ರೋಕೆಮಿಕಲ್ ರಿಸೋರ್ಸ್ ರಿಕವರಿ ರಿಯಾಕ್ಟರ್ (ERRR) ಅನ್ನು ವಿನ್ಯಾಸಗೊಳಿಸಲಾಗಿದೆ. ಈ ವಿಧಾನದಲ್ಲಿ ವಿದ್ಯುತ್ ಜೊತೆಗೆ ಜೈವಿಕ ಗೊಬ್ಬರವನ್ನು ಉತ್ಪಾದಿಸುತ್ತದೆ.

ಈ ಹೊಸ ತಂತ್ರಜ್ಞಾನದೊಂದಿಗೆ ಮೂತ್ರದ ಅಯಾನಿಕ್ ಬಲವನ್ನು ಬಳಸಲಾಗುತ್ತದೆ. ವಿದ್ಯುತ್ ಉತ್ಪಾದಿಸಲು ಎಲೆಕ್ಟ್ರೋಕೆಮಿಕಲ್ ಪ್ರತಿಕ್ರಿಯೆಗಳನ್ನು ಉತ್ತೇಜಿಸುತ್ತದೆ. ಅಲ್ಲದೆ ಸಾರಜನಕ, ರಂಜಕ ಮತ್ತು ಮೆಗ್ನೀಸಿಯಮ್ ಜೈವಿಕ ಗೊಬ್ಬರವನ್ನು ತಯಾರಿಸಲು ಉಪಯುಕ್ತವಾಗಿದೆ. ಈ ಸಂಯೋಜಿತ ತಂತ್ರಜ್ಞಾನವು ಎಲೆಕ್ಟ್ರೋಕೆಮಿಕಲ್ ರಿಯಾಕ್ಟರ್, ಅಮೋನಿಯಾ ಆಡ್ಸೋರ್ಪ್ಶನ್ ಕಾಲಮ್, ಡಿಕಲೋರೈಸೇಶನ್, ಕ್ಲೋರಿನೇಶನ್ ಚೇಂಬರ್, ಪ್ಲಂಬಿಂಗ್, ಎಲೆಕ್ಟ್ರಿಕಲ್ ಮ್ಯಾನಿಫೋಲ್ಡ್​​ಗಳನ್ನು ಒಳಗೊಂಡಿದೆ.

ಮೂತ್ರವನ್ನು ERR ಗೆ ನೀಡಲಾಗುತ್ತದೆ, ಎಲೆಕ್ಟ್ರೋಕೆಮಿಕಲ್ ಪ್ರತಿಕ್ರಿಯೆಗಳನ್ನು ಉತ್ತೇಜಿಸುತ್ತದೆ, ಅದು ಏಕಕಾಲದಲ್ಲಿ ವಿದ್ಯುತ್ ಮತ್ತು ಜೈವಿಕ ಗೊಬ್ಬರವನ್ನು ಉತ್ಪಾದಿಸುತ್ತದೆ. ಇದರಿಂದ ವಿದ್ಯುತ್ ಜತೆಗೆ ಜೈವಿಕ ಗೊಬ್ಬರ ಉತ್ಪಾದನೆಯಾಗುತ್ತದೆ. ಇದು ಸಸ್ಯಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಿಂದ ಕೃಷಿಗೆ ಉಪಯೋಗವಾಗಲಿದೆ ಎನ್ನುತ್ತಾರೆ ಸಂಶೋಧಕರು.

ಇದನ್ನೂ ಓದಿ:  ಇನ್ಮುಂದೆ ಹಣ ಬೇಕು ಅಂದ್ರೆ ಎಟಿಎಂಗೆ ಹೋಗಬೇಕಿಲ್ಲ: ಈ ಶಾಪ್​ನಲ್ಲಿ ಸಿಗುತ್ತದೆ

ERR ನಲ್ಲಿ, ಮೆಗ್ನೀಸಿಯಮ್ ಆನೋಡ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಗಾಳಿಯಲ್ಲಿ ಕಾರ್ಬನ್ ಕ್ಯಾಥೋಡ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಸಂಯೋಜಿತ ತಂತ್ರಜ್ಞಾನವು ಎಲೆಕ್ಟ್ರೋಕೆಮಿಕಲ್ ಪ್ರತಿಕ್ರಿಯೆಗಳನ್ನು ಉತ್ತೇಜಿಸಲು ಮೂತ್ರದಲ್ಲಿನ ಅಯಾನಿಕ್ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದರಿಂದಾಗಿ ವಿದ್ಯುತ್ ಉಂಟಾಗುತ್ತದೆ.

ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಪ್ರಸ್ತುತ ಮೊಬೈಲ್ ಫೋನ್ ಮತ್ತು ಲೈಟ್ ಎಲ್ಇಡಿ ಬಲ್ಬ್​ಗಳನ್ನು ಚಾರ್ಜ್ ಮಾಡಲು ಬಳಸಲಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಇದೇ ವೇಳೆ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ ಗಂಗಾಧರನ್, ಸಂಶೋಧನಾ ವಿದ್ವಾಂಸ ಸಂಗೀತ್ ವಿ, ಪ್ರಾಜೆಕ್ಟ್ ಸೈಂಟಿಸ್ಟ್ ಶ್ರೀಜಿತ್ ಪಿ.ಎಂ., ವಿಭಾಗದ ಸಂಶೋಧನಾ ಸಹಾಯಕ ರಿನು ಅಣ್ಣಾ ನೇತೃತ್ವದ ತಂಡ ಈ ತಂತ್ರಜ್ಞಾನಕ್ಕೆ ಪೇಟೆಂಟ್ ಸಲ್ಲಿಸಿದೆ. ಈ ಯೋಜನೆಯು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST), ಭಾರತ ಸರ್ಕಾರ (GOI) ನ ಇಕ್ವಿಟಿ ಎಂಪವರ್‌ಮೆಂಟ್ ಮತ್ತು ಡೆವಲಪ್‌ಮೆಂಟ್ (SEED) ವಿಭಾಗದಿಂದ ಧನಸಹಾಯ ಪಡೆದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:32 am, Fri, 16 February 24