ಪ್ರತಿಯೊಬ್ಬರಿಗೂ ಸ್ಮಾರ್ಟ್ಫೋನ್ನಲ್ಲಿ (Smartphone) ತುಂಬಾ ಕಿರಿ ಕಿರಿ ಎನಿಸುವ ವಿಷಯ ಎಂದರೆ ಹ್ಯಾಂಗ್ ಆಗುವುದು. ನಿಧಾನವಾಗಿರುವ ಮೊಬೈಲ್ ಅನ್ನು ಸ್ಪೀಡ್ ಮಾಡಬಹುದು ಬಹಳ ಕಷ್ಟ. ಫೋನ್ ಸ್ಟೋರೇಜ್ ಫುಲ್ ಆದಾಗ ಹೆಚ್ಚಾಗಿ ಈ ಸಮಸ್ಯೆ ಕಾಡುತ್ತದೆ. ಆಗ ನಿಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಅವಶ್ಯಕ ಫೋಟೋ ಅಥವಾ ವಿಡಿಯೋವನ್ನು (Video) ಸೇವ್ ಮಾಡಿಕೊಳ್ಳಲು ಆಗುವುದಿಲ್ಲ. ನೀವು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸ್ಟೋರೇಜ್ ಫುಲ್ (Storage Full) ಸಮಸ್ಯೆಯನ್ನು ಎದುರಿಸುತ್ತಿದ್ದರೆ ಕೆಲವೂ ಆ್ಯಪ್ಗಳನ್ನು ಡಿಲೀಟ್ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಕೆಲವರ ಸ್ಮಾರ್ಟ್ಫೋನ್ನಲ್ಲಿ ಮಕ್ಕಳಿಗೆ ಸಂಬಂಧಿಸಿದ ಆ್ಯಪ್ ಇರುತ್ತದೆ. ಅಥವಾ ಓಟಿಟಿ ಆ್ಯಪ್, ಕೆಲ ಅನಗತ್ಯ ಸೋಷಿಯಲ್ ಮೀಡಿಯಾ ಆ್ಯಪ್, ಉಪಯೋಗಿಸದ ವಿಡಿಯೋ ಎಡಿಟಿಂಗ್ ಅಥವಾ ಗೇಮಿಂಗ್ ಆ್ಯಪ್ ಇರುತ್ತದೆ. ಸಾಮಾನ್ಯವಾಗಿ ಈ ಆ್ಯಪ್ಗಳೇ ಹೆಚ್ಚು ಸ್ಟೋರೇಜ್ ಅನ್ನು ತಿನ್ನುತ್ತದೆ. ಇದನ್ನು ಅನ್ಸ್ಟಾಲ್ ಮಾಡುವ ಮೂಲಕ ಅಪಾರ ಜಾಗವನ್ನು ಮೊಬೈಲ್ನಲ್ಲಿ ಉಳಿಸಿಕೊಳ್ಳಬಹುದು. ನಿಮ್ಮ ಆಂಡ್ರಾಯ್ಡ್ ಅಥವಾ ಐಫೋನ್ನಲ್ಲಿ ಯಾವ ಆ್ಯಪ್ ಹೆಚ್ಚು ಸ್ಟೋರೇಜ್ ಅನ್ನು ಪಡೆದುಕೊಂಡಿದೆ ಎಂದು ನೋಡಲು ಈ ಸೂತ್ರ ಅನುಸರಿಸಿ.
ನಿಮ್ಮಲ್ಲಿ ಆಂಡ್ರಾಯ್ಡ್ ಫೋನ್ ಇದ್ದರೆ ಈ ಸೂತ್ರ ಅನುಸರಿಸಿ:
ಸ್ಮಾರ್ಟ್‌ಫೋನ್‌ನಲ್ಲಿರುವ ಓಎಸ್ ಮೇಲಿಂದ ಮೇಲೆ ಅಪ್‌ಡೇಟ್ ನೀಡುತ್ತಿರುತ್ತದೆ. ಅಪ್‌ಡೇಟ್ ಕೇಳಿದಾಗ ಮಾಡಿಕೊಳ್ಳಿರಿ, ಇದು ಸ್ಮಾರ್ಟ್‌ಫೋನ್ ವೇಗವನ್ನು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಹೊಸ ಫೀಚರ್ಸ್‌ಗಳಿದ್ದರೇ ಅವುಗಳು ಸಹ ಲಭ್ಯವಾಗುತ್ತವೆ. ಅಂತೆಯೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಜಂಕ್ ಫೈಲ್‌ಗಳು ಇದ್ದರೆ ಸ್ಮಾರ್ಟ್‌ಪೋನಿನ ಜೀವಿತಾವಧಿಯನ್ನು ಕುಂಠಿತಗೊಳಿಸುತ್ತವೆ. ಹಾಗಾಗಿ, ನಿಮ್ಮ ಫೋನಿನಲ್ಲಿರುವ ಕಡತಗಳನ್ನು ಆಗಾಗ್ಗೆ ಆಯಂಟಿ ವೈರಸ್ ಆ್ಯಪ್ ಮೂಲಕ ಸ್ವಚ್ಛಗೊಳಿಸಿ. ಸೆಟ್ಟಿಂಗ್ಸ್ ತೆರೆದು ಅಲ್ಲಿ ಕಾಣಿಸುವ ಕ್ಯಾಚೆಯನ್ನು ವಾರಕ್ಕೆ ಒಮ್ಮೆಯಾದರೂ ಕ್ಲೀನ್ ಮಾಡುವುದನ್ನು ಮರೆಯದೇ ಇದ್ದರೆ ಫೋನ್ ವೇಗ ಹೆಚ್ಚುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ