ನೋಕಿಯಾ (Nokia) ಕಂಪನಿಯ ಸ್ಮಾರ್ಟ್ಫೋನ್ಗಳಿಗೆ ಭಾರತದಲ್ಲಿ ಹಿಂದಿನ ರೀತಿ ದೊಡ್ಟ ಮಟ್ಟದ ಮಾರ್ಕೆಟ್ ಇಲ್ಲ. ಒಂದು ಕಾಲದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿದ್ದ ನೋಕಿಯಾ ಈಗ ಹೇಳಹೆಸರಿಲ್ಲದಂತಾಗಿದೆ. ಶವೋಮಿ (Xiaomi), ಸ್ಯಾಮ್ಸಂಗ್, ರಿಯಲ್ ಮಿ, ವಿವೋ ಬ್ರ್ಯಾಂಡ್ಗಳು ಬಂದ ಮೇಲೆ ನೋಕಿಯಾ ಮೊಬೈಲ್ಗಳ ಬೇಡಿಕೆ ಕುಸಿಯುತ್ತಾ ಬಂತು. ಹೀಗಿದ್ದರೂ ನೋಕಿಯಾ ಆಗಾಗ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ದೇಶದಲ್ಲಿ ಬಜೆಟ್ ಬೆಲೆಗೆ ನೋಕಿಯಾ ಕಂಪನಿ ಹೊಸ ನೋಕಿಯಾ ಸಿ 12 ಪ್ಲಸ್ (Nokia C12 Plus) ಫೋನನ್ನು ಅನಾವರಣ ಮಾಡಿದೆ. ಬೆಲೆಗೆ ತಕ್ಕಂತೆ ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್ಫೋನಿನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಭಾರತದಲ್ಲಿ ಸದ್ಯಕ್ಕೆ ಒಂದು ಸ್ಟೋರೆಜ್ ಆಯ್ಕೆಯಲ್ಲಿ ನೋಕಿಯಾ C12 ಪ್ಲಸ್ ಸ್ಮಾರ್ಟ್ಫೋನ್ ರಿಲೀಸ್ ಆಗಿದೆ. ಇದರ 2GB RAM ಮತ್ತು 32GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 7,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಯಾವಾಗಿನಿಂದ ಖರೀದಿಗೆ ಸಿಗಲಿದೆ ಎಂಬ ಬಗ್ಗೆ ಕಂಪನಿ ಇನ್ನೂ ಮಾಹಿತಿ ನೀಡಿಲ್ಲ.
boAt Lunar Connect Pro: ಸ್ಟೈಲಿಶ್ ಜತೆಗೆ ಸ್ಮಾರ್ಟ್ ವಾಚ್ ಪ್ರಿಯರಿಗಾಗಿ ಹೊಸ ಬೋಟ್ ವಾಚ್
ನೋಕಿಯಾ C12 ಪ್ಲಸ್ ಸ್ಮಾರ್ಟ್ಫೋನ್ 720*1,520 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.3-ಇಂಚಿನ ಹೆಚ್ಡಿ+ ಡಿಸ್ಪ್ಲೇ ಹೊಂದಿದೆ. ಇದು ವಾಟರ್ ಡ್ರಾಪ್ ಶೈಲಿಯ ಡಿಸ್ ಪ್ಲೇ ಆಗಿದೆ. ಆಕ್ಟಾ-ಕೋರ್ ಯುನಿಸೋಕ್ SoC ಪ್ರೊಸೆಸರ್ ಅನ್ನು ಪಡದುಕೊಂಡಿದ್ದು, ಆಂಡ್ರಾಯ್ಡ್ 12 (ಗೋ ಎಡಿಷನ್) ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಇದರಲ್ಲಿ 8 ಮೆಗಾಪಿಕ್ಸೆಲ್ ರಿಯಲ್ ಕ್ಯಾಮೆರಾ ಸೆನ್ಸಾರ್ ಇದೆ. ಇದು ಅಟೋಫೋಕಸ್ ಫೀಚರ್ ಹೊಂದಿದ್ದು ಮತ್ತು ಎಲ್ಇಡಿ ಫ್ಲ್ಯಾಶ್ ಅಳವಡಿಸಲಾಗಿದೆ. ಇದರ ಜೊತೆಗೆ ಸೆಲ್ಫಿ ಮತ್ತು ವಿಡಿಯೋ ಕಾಲ್ಗಳಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸೆಟಪ್ ನೀಡಲಾಗಿದೆ.
ವಿಶೇಷವಾಗಿ ಈ ಸ್ಮಾರ್ಟ್ಫೋನ್ 4000mAh ಬ್ಯಾಟರಿಯನ್ನು ಒಳಗೊಂಡಿದ್ದು 10W ಚಾರ್ಜಿಂಗ್ ಅನ್ನು ಬೆಂಬಲಿಸುವ ಸಾಧ್ಯತೆ ಇದೆ. ಕನೆಕ್ಟಿವಿಟ ಆಯ್ಕೆಗಳಲ್ಲಿ 4G LTE, ವೈಫೈ, ಬ್ಲೂಟೂತ್ v5.2, 3.5mm ಹೆಡ್ಫೋನ್ ಜ್ಯಾಕ್, FM ರೇಡಿಯೋ ಸೇರಿದಂತೆ ಬೇಸಿಕ್ ಆಯ್ಕೆಗಳಿವೆ.
ಇತ್ತೀಚೆಗಷ್ಟೆ ಬಿಡುಗಡೆ ಆದ ನೋಕಿಯಾ C12 ಸ್ಮಾರ್ಟ್ಫೋನ್ ಕೂಡ 6.3 ಇಂಚಿನ HD+ ಡಿಸ್ಪ್ಲೇ ಹೊಂದಿದೆ. 3000mAh ಬ್ಯಾಟರಿ ಮತ್ತು 5W ಚಾರ್ಜಿಂಗ್ ಸಾಮರ್ಥ್ಯದ ಈ ಸ್ಮಾರ್ಟ್ಫೋನ್, 2 GB RAM ಮತ್ತು 64 GB ಸ್ಟೋರೇಜ್ ಹೊಂದಿದೆ. ಜತೆಗೆ, Unisoc 9863A1 ಪ್ರೊಸೆಸರ್ ಬೆಂಬಲ ಪಡೆದುಕೊಂಡಿದೆ. ನೋಕಿಯಾ ಸಿ12 ಸ್ಮಾರ್ಟ್ಫೋನ್, ಡಾರ್ಕ್ ಕ್ಯಾನ್, ಮಿಂಟ್ ಲೈಮ್ ಮತ್ತು ಚಾರ್ಕೋಲ್ ಬಣ್ಣಗಳಲ್ಲಿ ಲಭ್ಯವಿದೆ. ಇಯರ್ಫೋನ್, ಚಾರ್ಜರ್ ಸಹಿತ ನೂತನ ನೋಕಿಯಾ C12 ಸ್ಮಾರ್ಟ್ಫೋನ್ ದೊರೆಯಲಿದೆ. ಅಮೆಜಾನ್ನಲ್ಲಿ ಇದರ ಬೆಲೆ 5,999 ರೂ. ಆಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Mon, 3 April 23