Nokia G11 Plus: ಬಜೆಟ್ ಬೆಲೆಗೆ ಬಂಪರ್ ಫೋನ್: ನೋಕಿಯಾದಿಂದ ಹೊಸ ಸ್ಮಾರ್ಟ್ಫೋನ್ ಬಿಡುಗಡೆ
ನೋಕಿಯಾ (Nokia) ಕಂಪೆನಿ ಸದ್ಯ ಟೆಕ್ ಮಾರುಕಟ್ಟೆಯಲ್ಲಿ ತನ್ನ ಹೊಸ ನೋಕಿಯಾ ಜಿ11 ಪ್ಲಸ್ (Nokia G 11 Plus) ಸ್ಮಾರ್ಟ್ಫೋನನ್ನು ಲಾಂಚ್ ಮಾಡಿದೆ. ಇದೊಂದು ಬಜೆಟ್ ಬೆಲೆಗೆ ಲಭ್ಯವಿರುವ ಆಕರ್ಷಕ ಮೊಬೈಲ್ ಆಗಿದೆ.
Nokia G11 Plus
TV9 Web Updated By: Vinay Bhat
Updated on:
Jun 30, 2022 | 3:43 PM
ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಈಗೀಗ ಆಕರ್ಷಕ ಫೀಚರ್ ಗಳುಳ್ಳ ಫೋನಗಳನ್ನು ಬಿಡುಗಡೆ ಮಾಡುತ್ತಿರುವ ನೋಕಿಯಾ (Nokia) ಕಂಪೆನಿ ಸದ್ಯ ಟೆಕ್ ಮಾರುಕಟ್ಟೆಯಲ್ಲಿ ತನ್ನ ಹೊಸ ನೋಕಿಯಾ ಜಿ11 ಪ್ಲಸ್ (Nokia G 11 Plus ) ಸ್ಮಾರ್ಟ್ಫೋನನ್ನು ಲಾಂಚ್ ಮಾಡಿದೆ . ಇದೊಂದು ಬಜೆಟ್ ಬೆಲೆಗೆ ಲಭ್ಯವಿರುವ ಆಕರ್ಷಕ ಮೊಬೈಲ್ ಆಗಿದೆ . ಕಂಪನಿ ಈ ಫೋನನ್ನು ಅನಾವರಣ ಮಾಡಿದೆಯಾದರೂ ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸಿಲ್ಲ . ಇದು ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ನೋಕಿಯಾ G11ನ ಅಪ್ಗ್ರೇಡ್ ವರ್ಷನ್ ಆಗಿದೆ ಎನ್ನಲಾಗಿದೆ . ಹಾಗಾದ್ರೆ ಸಿಕ್ಕಿರುವ ಮಾಹಿತಿ ಪ್ರಕಾರ ಈ ಫೋನಿನ ಫೀಚರ್ಸ್ ಏನು ಬೆಲೆ ಎಷ್ಟಿರಬಹುದು ಎಂಬುದನ್ನು ನೋಡೋಣ .
ನೋಕಿಯಾ G11 ಪ್ಲಸ್ ಸ್ಮಾರ್ಟ್ ಫೋನ್ 6.5 ಇಂಚಿನ ಹೆಚ್ ಡಿ ಪ್ಲಸ್ ಡಿಸ್ ಪ್ಲೇಯನ್ನು ಹೊಂದಿದೆ . ಈ ಡಿಸ್ ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ . ಈ ಡಿಸ್ ಪ್ಲೇ ಮೃದುವಾದ ಸ್ಮಾರ್ಟ್ ಫೋನ್ ಅನುಭವವನ್ನು ನೀಡಲಿದೆ .
ನೋಕಿಯಾ ಬ್ರ್ಯಾಂಡ್ ಪರವಾನಗಿ ಹೊಂದಿರುವ HMD ಗ್ಲೋಬಲ್ ನೋಕಿಯಾ G11 ಪ್ಲಸ್ ಸ್ಮಾರ್ಟ್ ಫೋನ್ ಯಾವ ಪ್ರೊಸೆಸರ್ ಹೊಂದಿದೆ ಅನ್ನೊದನ್ನ ಇನ್ನು ಬಹಿರಂಗಪಡಿಸಿಲ್ಲ . ಆದರೆ ಈ ಸ್ಮಾರ್ಟ್ ಫೋನ್ 4GB RAM ಮತ್ತು 64GB ಇಂಟರ್ ಸ್ಟೊರೇಜ್ ಹೊಂದಿದೆ .
ಈ ಸ್ಮಾರ್ಟ್ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ . ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ , ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಅನ್ನು ಹೊಂದಿದೆ .
ಇನ್ನು ಕ್ಯಾಮರಾ ಸೆಟಪ್ ಅನ್ನು ಎಲ್ಇಡಿ ಫ್ಲ್ಯಾಷ್ ನೊಂದಿಗೆ ಜೋಡಿಸಲಾಗಿದೆ . ಇದಲ್ಲದೆ ಸೆಲ್ಫಿ ಮತ್ತು ವೀಡಿಯೊ ಚಾಟ್ ಗಳಿಗಾಗಿ , 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ .
ನೋಕಿಯಾ G11 ಪ್ಲಸ್ ಸ್ಮಾರ್ಟ್ ಫೋನ್ ಬ್ಯಾಟರಿ ಪ್ಯಾಕಪ್ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ . ಆದರೆ ಈ ಸ್ಮಾರ್ಟ್ ಫೋನ್ ಸಿಂಗಲ್ ಚಾರ್ಜ್ ನಲ್ಲಿ ಮೂರು ದಿನಗಳ ಬ್ಯಾಟರಿ ಅವಧಿ ನೀಡಲಿದೆ ಎಂದು ಹೇಳಲಾಗಿದೆ .
ಈ ಸ್ಮಾರ್ಟ್ ಫೋನ್ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ . ಸದ್ಯ ಈ ಸ್ಮಾರ್ಟ್ ಫೋನ್ ನೋಕಿಯಾ ವೆಬ್ ಸೈಟ್ ನಲ್ಲಿ ಅನಾವರಣಗೊಂಡಿರುವುದರಿಂದ ಶೀಘ್ರದಲ್ಲೇ ಬೆಲೆಯ ವಿವರಗಳು ಬಹಿರಂಗವಾಗಲಿದೆ . ಮೂಲಗಳ ಪ್ರಕಾರ ಇದರ ಬೆಲೆ 15,000 ರೂ . ಒಳಗಡೆ ಇರಬಹುದು ಎನ್ನಲಾಗಿದೆ .
Tech Tips: ನಿಮ್ಮ ಸ್ಮಾರ್ಟ್ಫೋನ್ ಬ್ಯಾಟರಿ ಪವರ್ ಇನ್ನಷ್ಟು ಸ್ಟ್ರಾಂಗ್ ಆಗಬೇಕೇ?: ಇಲ್ಲಿದೆ ಟಿಪ್ಸ್
Published On - 3:24 pm, Thu, 30 June 22