ಮೊಬೈಲ್ (Mobile) ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಒಂದೊಂದು ಫೊನ್ಗಳನ್ನು ಬಿಡುಗಡೆ ಮಾಡುತ್ತಿರುವ ನೋಕಿಯಾ ನಿಧಾನವಾಗಿ ಕಮ್ಬ್ಯಾಕ್ ಮಾಡಲು ನೋಡುತ್ತಿದೆ. ಒಂದು ಕಾಲದಲ್ಲಿ ನಂಬರ್ ಒನ್ ಮೊಬೈಲ್ ಕಂಪನಿಯಾಗಿದ್ದ ನೋಕಿಯಾ ನಂತರ ಶವೋಮಿ (Xiaomi), ಒಪ್ಪೋ, ರಿಯಲ್ ಮಿ, ಒನ್ಪ್ಲಸ್ ಕಂಪನಿಗಳ ಹೊಡೆತಕ್ಕೆ ಸಿಲುಕಿ ಈಗ ಮೇಲೇಳಲು ಹರಸಾಹಸ ಪಡುತ್ತಿದೆ. ಇದರ ನಡುವೆಯೂ ಆಕರ್ಷಕವಾದ ಮೊಬೈಲ್ಗಳನ್ನು ಅಪರೂಪಕ್ಕೆ ಪರಿಚಯಿಸುತ್ತಿದೆ. ಇದೀಗ ನೋಕಿಯಾ ಭಾರತದ ಮಾರುಕಟ್ಟೆಯಲ್ಲಿ ನೋಕಿಯಾ 2660 ಫ್ಲಿಪ್ (Nokia 2660 Flip) ಫೋನನ್ನು ಅನಾವರಣ ಮಾಡಿದೆ. ಡ್ಯುಯಲ್ ಸ್ಕ್ರೀನ್ ಹೊಂದಿರುವ ಈ ಫೋನ್ನಲ್ಲಿ ಬಲವಾದ ಬ್ಯಾಟರಿ ನೀಡಲಾಗಿದೆ. ಇದರ ವಿನ್ಯಾಸಕ್ಕೆ ಜನರು ಮನಸೋತಿದ್ದಾರೆ. ಹಾಗಾದರೆ ನೋಕಿಯಾ 2660 ಫ್ಲಿಪ್ ಫೋನಿನ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡೋಣ.
ನೋಕಿಯಾ 2660 ಫ್ಲಿಪ್ ಒಂದು ಫೀಚರ್ ಫೋನಾಗಿದ್ದು ಇದರ ಬೆಲೆ ಭಾರತದಲ್ಲಿ 4,699 ರೂ. ಆಗಿದೆ. ಎಲ್ಲ ಇ ಕಾಮರ್ಸ್ ತಾಣ ಮತ್ತು ನೋಕಿಯಾ ವೆಬ್ಸೈಟ್ನಲ್ಲಿ ಇದು ಕಪ್ಪು, ನೀಲಿ ಮತ್ತು ಕೆಂಪು ಬಣ್ಣಗಳಲ್ಲಿ ಖರೀದಿಗೆ ಸಿಗುತ್ತಿದೆ. ಈ ಫೋನ್ ಕ್ಲಾಮ್‌ಶೆಲ್ ತರಹದ ವಿನ್ಯಾಸವನ್ನು ಹೊಂದಿದ್ದು ಡ್ಯುಯಲ್ ಸಿಮ್ ಬೆಂಬಲ ಪಡೆದುಕೊಂಡಿದೆ. ಹ್ಯಾಂಡ್ಸೆಟ್ ಎರಡು ಡಿಸ್ ಪ್ಲೇಗಳನ್ನು ಹೊಂದಿದೆ. ಇದರ ಒಳಭಾಗದಲ್ಲಿ 2.8-ಇಂಚಿನ QVGA ಡಿಸ್ ಪ್ಲೇ ಮತ್ತು ಹಿಂಭಾಗದಲ್ಲಿ 1.77-ಇಂಚಿನ QQVGA ಡಿಸ್ ಪ್ಲೇ ನೀಡಲಾಗಿದೆ.
ನೋಕಿಯಾ 2660 ಫ್ಲಿಪ್ ಫೋನಿನ ಅದ್ಭುತ ವೈಶಿಷ್ಟ್ಯವೆಂದರೆ ಅದರ ಬ್ಯಾಟರಿ. ಈ ಸಾಧನವು 1,450mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಅದು ಸ್ಟ್ಯಾಂಡ್‌ಬೈನಲ್ಲಿ 20 ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
Unisoc T107 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು 128MB ಅಂತರ್ಗತ ಸಂಗ್ರಹಣೆಯನ್ನು ಹೊಂದಿದೆ ಮತ್ತು ಇದನ್ನು ಮೈಕ್ರೋ SD ಕಾರ್ಡ್‌ನೊಂದಿಗೆ 32ಜಿಬಿ ಸಂಗ್ರಹಣೆಯನ್ನು ವಿಸ್ತರಿಸಬಹುದು. ಇದು ಇಯರ್‌ಫೋನ್‌ಗಳನ್ನು ಪ್ಲಗ್ ಮಾಡದೆಯೇ ಕಾರ್ಯನಿರ್ವಹಿಸುವ ಎಫ್‌ಎಂ ರೇಡಿಯೊವನ್ನು ಹೊಂದಿದೆ. ಫೋನ್ MP3 ಪ್ಲೇಯರ್ ಮತ್ತು VGA ಕ್ಯಾಮೆರಾವನ್ನು ಸಹ ಹೊಂದಿದೆ. 0.3 ಮೆಗಾಫಿಕ್ಸೆಲ್ನ ರಿಯರ್ ಕ್ಯಾಮೆರಾದೊಂದಿಗೆ ಎಲ್ಇಡಿ ಫ್ಲ್ಯಾಶ್ ನೀಡಲಾಗಿದೆ.