Nokia XR20: ಮತ್ತೆರಡು ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ನೋಕಿಯಾ: ಏನಿದರ ವಿಶೇಷ, ಬೆಲೆ ಎಷ್ಟು?

| Updated By: ಝಾಹಿರ್ ಯೂಸುಫ್

Updated on: Jul 27, 2021 | 6:17 PM

Nokia XR20, Nokia C30: ಈ ಫೋನ್​ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು, ಅದರಂತೆ 13 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಒಳಗೊಂಡಿರಲಿದೆ.

Nokia XR20: ಮತ್ತೆರಡು ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ನೋಕಿಯಾ: ಏನಿದರ ವಿಶೇಷ, ಬೆಲೆ ಎಷ್ಟು?
Nokia smartphones
Follow us on

ನೀವು ಹೊಸ ನೋಕಿಯಾ ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸಿದ್ದೀರಾ? ಹಾಗಿದ್ರೆ ನೋಕಿಯಾ ಇದೀಗ ಮತ್ತೆರಡು ಹೊಸ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ Nokia XR20, C30 ಸ್ಮಾರ್ಟ್​ಫೋನ್ ಮತ್ತು Nokia 6310 ಹೆಸರಿನ ಫೀಚರ್ ಫೋನ್‌ಗಳು ಸೇರಿವೆ. ಇದರಲ್ಲಿ ನೋಕಿಯಾ 6310 ಅನ್ನು ಇದೇ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಕಂಪನಿ ತಿಳಿಸಿದೆ. ಆದರೆ, ಉಳಿದ ಎರಡು ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಯಾವಾಗ ಖರೀದಿಗೆ ಲಭ್ಯವಿರಲಿದೆ ಎಂಬುದರ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಈ ಸ್ಮಾರ್ಟ್​ಫೋನ್​ಗಳ ವೈಶಿಷ್ಟ್ಯಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ನೋಕಿಯಾ ಎಕ್ಸ್‌ಆರ್ 20 (Nokia XR20):
ನೋಕಿಯಾ ಎಕ್ಸ್‌ಆರ್ 20 ಸ್ಮಾರ್ಟ್‌ಫೋನ್ ಮೂರು ವರ್ಷಗಳ ಅಪ್​ಗ್ರೇಡ್​ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 6.67-ಇಂಚಿನ ಪೂರ್ಣ-ಎಚ್​​ಡಿ + ಐಪಿಎಸ್ ಎಲ್​ಸಿಡಿ ಡಿಸ್​ಪ್ಲೇಯನ್ನು ನೀಡಲಾಗಿದೆ. ಇನ್ನು ಸೆಲ್ಫಿಗಳಿಗಾಗಿ ಹೋಲ್-ಪಂಚ್ ಕಟೌಟ್ ಕ್ಯಾಮೆರಾ ಇದರಲ್ಲಿದೆ. ಹಾಗೆಯೇ ಈ ಸ್ಮಾರ್ಟ್​ಫೋನ್​ನ ಟಚ್ ಸ್ಕ್ರೀನ್ ಕೈಗವಸು ಧರಿಸಿದರೂ, ಬೆರಳುಗಳು ನೆನೆದಿದ್ದರೂ ವರ್ಕ್​ ಆಗಲಿದೆ. ಅಂದರೆ ನೀವು ಗ್ಲೌಸ್ ಧರಿಸಿ ಸ್ಕ್ರೀನ್ ಟಚ್ ಮಾಡಿದರೂ ಕಾರ್ಯನಿರ್ವಹಿಸುತ್ತದೆ. ಇನ್ನು ಇದರಲ್ಲಿ ಅಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್​ಡ್ರ್ಯಾಗನ್ (octa-core Qualcomm Snapdragon 480 SoC) 480 ಚಿಪ್​ಸೆಟ್ ನೀಡಲಾಗಿದೆ. ಹಾಗೆಯೇ 6 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ನೋಕಿಯಾ ಎಕ್ಸ್‌ಆರ್ 20 ಹೊಂದಿದೆ. ಇದನ್ನು ಸ್ಟೊರೇಜ್​ನ್ನು ಮೈಕ್ರೊ ಎಎಸ್​ಡಿ ಕಾರ್ಡ್ ಮೂಲಕ 256ಜಿಬಿವರೆಗೆ ವಿಸ್ತರಿಸಬಹುದಾಗಿದೆ.

ಡ್ಯುಯಲ್ ರಿಯರ್ ಕ್ಯಾಮೆರಾಗಳ ವಿನ್ಯಾಸ ಇದರಲ್ಲಿ ನೀಡಲಾಗಿದ್ದು, ಅದರಂತೆ ಹಿಂಬದಿಯಲ್ಲಿ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಇದರಲ್ಲಿರಲಿದೆ. ಇನ್ನು ಮುಂಭಾಗದಲ್ಲಿ, 8 ಮೆಗಾಪಿಕ್ಸೆಲ್ ಶೂಟರ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಫೋನ್‌ನ ಇತರ ಗಮನಾರ್ಹ ವೈಶಿಷ್ಟ್ಯಗಳೆಂದರೆ ಇದು ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸಲಿದ್ದು, 5 ಜಿ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 18W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆ ಇದರಲ್ಲಿ ನೀಡಲಾಗಿದೆ. ಹಾಗೆಯೇ ಇದರ ಬ್ಯಾಟರಿ ಸಾಮರ್ಥ್ಯ 4,630mAh.

ನೋಕಿಯಾ ಸಿ 30 (Nokia C30):
ನೋಕಿಯಾ ಸಿ 30, 6.82-ಇಂಚಿನ ಎಚ್‌ಡಿ + ಡಿಸ್​ಪ್ಲೇ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 (ಗೋ ಎಡಿಷನ್) ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಆಕ್ಟಾ-ಕೋರ್ ಯುನಿಸಾಕ್ ಎಸ್‌ಸಿ 9863 ಎ ಸೋಕ್ ಪ್ರೊಸೆಸರ್ ನೀಡಲಾಗಿದೆ. ಅನ್ನು 3 ಜಿಬಿ RAM ಮತ್ತು 64 ಜಿಬಿ ವರೆಗೆ ಆನ್‌ಬೋರ್ಡ್ ಸ್ಟೊರೇಜ್ ಇದರಲ್ಲಿರಲಿದೆ. ಇನ್ನು ಬಳಕೆದಾರರು ಮೈಕ್ರೊ ಎಸ್‌ಡಿ ಕಾರ್ಡ್ ಬಳಸಿ ಸ್ಟೊರೇಜ್ ಸಾಮರ್ಥ್ಯವನ್ನು 256ಜಿಬಿವರೆಗೆ ವಿಸ್ತರಿಸಬಹುದಾಗಿದೆ. ಈ ಫೋನ್​ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು, ಅದರಂತೆ 13 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಒಳಗೊಂಡಿರಲಿದೆ. ಇನ್ನು ಮುಂಭಾಗದಲ್ಲಿ ವಾಟರ್‌ಡ್ರಾಪ್ ಶೈಲಿಯ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ನೋಕಿಯಾ ಸಿ 30 ಯ ಇತರ ಗಮನಾರ್ಹ ವಿಶೇಷತೆಗಳೆಂದರೆ ಇದು 4 ಜಿ ಎಲ್ ಟಿಇ, ವೈ-ಫೈ 802.11 ಬಿ / ಜಿ / ಎನ್, ಬ್ಲೂಟೂತ್ ವಿ 4.2, 3.5 ಎಂಎಂ ಹೆಡ್ಫೋನ್ ಜ್ಯಾಕ್ ಮತ್ತು ಫಿಂಗರ್ಪ್ರಿಂಟ್ ಸೆನ್ಸಾರ್ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದರಲ್ಲಿ 6000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, 10W ವೈರ್ಡ್ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ.

ಸದ್ಯ ಯುರೋಪ್ ದೇಶಗಳಲ್ಲಿ ನೋಕಿಯಾ ನೂತನ ಸ್ಮಾರ್ಟ್​ಫೋನ್​ಗಳು ಖರೀದಿಗೆ ಲಭ್ಯವಿದ್ದು, ನೋಕಿಯಾ ಎಕ್ಸ್‌ಆರ್ 20 ಬೆಲೆ (Nokia XR20) 499 ಯುರೋ. ( ಸುಮಾರು 43,800 ರೂ.). ಹಾಗೆಯೇ ನೋಕಿಯಾ ಸಿ 30 (Nokia C30) ಸ್ಮಾರ್ಟ್​ಫೋನ್ 99 ಯುರೋಗೆ ಖರೀದಿಗೆ ಲಭ್ಯವಿದ್ದು, ಇದರ ಭಾರತೀಯ ಮೌಲ್ಯ ಸುಮಾರು 8700 ರೂ. ಇನ್ನು ನೋಕಿಯಾ 6310 ಫೀಚರ್ ಫೋನ್​ಗೆ 40 ಯುರೋ ನಿಗದಿಪಡಿಸಲಾಗಿದ್ದು, ಭಾರತದಲ್ಲಿ ಈ ಫೋನ್ 3500 ರೂ.ಗೆ ಖರೀದಿಗೆ ಲಭ್ಯವಿರಲಿದೆ.

 

ಇದನ್ನೂ ಓದಿ: Viral Story: ಟ್ರಾಫಿಕ್​ ಪೊಲೀಸ್​ ಮನೆಯಲ್ಲಿ ಚಿನ್ನದ ಟಾಯ್ಲೆಟ್

ಇದನ್ನೂ ಓದಿ: ಈವರೆಗೆ ಟೀಮ್ ಇಂಡಿಯಾ ಪರ ಎಷ್ಟು ಮಂದಿ ಆಡಿದ್ದಾರೆ ಗೊತ್ತಾ?

(Nokia XR20 Nokia C30 Smartphone Launched Price Specifications)