Nothing Phone 2: ನಥಿಂಗ್ ಫೋನ್ 2 ಭಾರತದ ಬೆಲೆ ಸೋರಿಕೆ: ಖರೀದಿಗೆ ಕ್ಯೂ ಗ್ಯಾರೆಂಟಿ

|

Updated on: Jul 07, 2023 | 1:23 PM

ಟಿಪ್​ಸ್ಟರ್ ಯೋಗೆಶ್ ಬ್ರಾರ್ ಟ್ವಿಟ್ಟರ್​ನಲ್ಲಿ ನಥಿಂಗ್ ಫೋನ್ 2 ಬೆಲೆಯನ್ನು ಬಹಿರಂಗ ಪಡಿಸಿದ್ದಾರೆ. ಭಾರತದಲ್ಲಿ ಇದರ ಆರಂಭಿಕ ಬೆಲೆ 42,000 ರೂ. ಅಥವಾ 43,000 ರೂ. ಇರಬಹುದು ಎಂದು ಹೇಳಿದ್ದಾರೆ. ಆದರೆ, ಅಧಿಕೃತ ಬೆಲೆಯಲ್ಲ.

Nothing Phone 2: ನಥಿಂಗ್ ಫೋನ್ 2 ಭಾರತದ ಬೆಲೆ ಸೋರಿಕೆ: ಖರೀದಿಗೆ ಕ್ಯೂ ಗ್ಯಾರೆಂಟಿ
Nothing Phone 2
Follow us on

ಟೆಕ್ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲು ತಯಾರಾಗಿರುವ ನಥಿಂಗ್ ಕಂಪನಿ ಹೊಸ ಸ್ಮಾರ್ಟ್​ಫೋನ್ ನಥಿಂಗ್ ಫೋನ್ 2 (Nothing Phone 2) ಬಗ್ಗೆ ಒಂದೊಂದು ಮಾಹಿತಿ ಹೊರಬೀಳುತ್ತಿದೆ. ಜುಲೈ 11 ರಂದು ಈ ಮೊಬೈಲ್ (Mobile) ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಈಗಾಗಲೇ ನಥಿಂಗ್ ಫೋನ್ 2 ಫೀಚರ್ಸ್ ಬಗ್ಗೆ ಕೆಲ ವಿಚಾರ ಸೋರಿಕೆ ಆಗಿದೆ. ಇದರ ನಡುವೆ ಇದೀಗ ಈ ಫೋನಿನ ಬೆಲೆ ಎಷ್ಟು ಎಂಬುದು ಬಹಿರಂಗವಾಗಿದೆ. ಮುಂದಿನ ತಲೆಮಾರಿನ ನಥಿಂಗ್ ಫೋನ್ 2 ಸ್ಮಾರ್ಟ್​ಫೋನ್ (Smartphone) 45,000 ರೂ. ಒಳಗೆ ಖರೀದಿಗೆ ಲಭ್ಯವಿದೆ.

ಟಿಪ್​ಸ್ಟರ್ ಯೋಗೆಶ್ ಬ್ರಾರ್ ಟ್ವಿಟ್ಟರ್​ನಲ್ಲಿ ನಥಿಂಗ್ ಫೋನ್ 2 ಬೆಲೆಯನ್ನು ಬಹಿರಂಗ ಪಡಿಸಿದ್ದಾರೆ. ಭಾರತದಲ್ಲಿ ಇದರ ಆರಂಭಿಕ ಬೆಲೆ 42,000 ರೂ. ಅಥವಾ 43,000 ರೂ. ಇರಬಹುದು ಎಂದು ಹೇಳಿದ್ದಾರೆ. ಆದರೆ, ಅಧಿಕೃತ ಬೆಲೆಯಲ್ಲ, ಕಂಪನಿ ಇನ್ನಷ್ಟೆ ನಥಿಂಗ್ ಫೋನ್ 2 ಬೆಲೆಯನ್ನು ಹೇಳಬೇಕಿದೆ. ಈ ಬೆಲೆ ನಿಜವಾದಲ್ಲಿ ನಥಿಂಗ್ ಫೋನ್ 2 ಮೊಬೈಲ್ ಗೂಗಲ್ ಪಿಕ್ಸೆಲ್ 7ಎ ಮತ್ತು ಒನ್​ಪ್ಲಸ್ 11ಆರ್ ಸ್ಮಾರ್ಟ್​ಫೋನ್​ಗಳಿಗೆ ಕಠಿಣ ಪೈಪೋಟಿ ನೀಡಲಿದೆ.

Threads: ಇಷ್ಟವಿಲ್ಲವೆಂದು ಥ್ರೆಡ್ಸ್ ಪ್ರೊಫೈಲ್​​ ಡಿಲೀಟ್ ಮಾಡಲು ಸಾಧ್ಯವಿಲ್ಲ; ಹಾಗೆ ಮಾಡುವುದಾದರೆ ಏನು ಮಾಡಬೇಕು?

ಇದನ್ನೂ ಓದಿ
Power Bank: ಪವರ್ ಬ್ಯಾಂಕ್ ಮೂಲಕ ಪದೇ ಪದೇ ಮೊಬೈಲ್ ಚಾರ್ಜ್ ಮಾಡುವುದು ಎಷ್ಟು ಸುರಕ್ಷಿತ?: ಬಂದಿದೆ ಹೊಸ ಮಾಹಿತಿ
Itel P40+: ಬಜೆಟ್ ದರಕ್ಕೆ ಭರ್ಜರಿ ಬ್ಯಾಟರಿ ಜತೆಗೆ ಐಟೆಲ್ ಫೋನ್
Threads: ಟ್ವಿಟರ್​ಗೆ ಸ್ಪರ್ಧೆ ಒಡ್ಡಲು ಇನ್​ಸ್ಟಾಗ್ರಾಂ ಪರಿಚಯಿಸಿದೆ ಥ್ರೆಡ್ಸ್
Galaxy M34 5G: 6,000mAh ಬ್ಯಾಟರಿ, ಅದ್ಭುತ ಕ್ಯಾಮೆರಾ: ಇಂದು ಭಾರತದಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ M33 5G ಫೋನ್ ಬಿಡುಗಡೆ

ನಥಿಂಗ್ ಫೋನ್ 2 ಈಗಾಗಲೇ ಫ್ಲಿಪ್​ಕಾರ್ಟ್​ನಲ್ಲಿ ಪ್ರೀ ಆರ್ಡರ್​ಗೆ ಲಭ್ಯವಿದೆ. ಸದ್ಯ ಔಟ್​ಆಫ್ ಸ್ಟಾಕ್ ಆಗಿದ್ದು, ಭರ್ಜರಿ ಆರ್ಡರ್ ಬರುತ್ತಿದೆ. ನಥಿಂಗ್ ಫೋನ್ 1 ಗೆ ಹೋಲಿಸಿದರೆ ನಥಿಂಗ್ ಫೋನ್ 2 ಅನೇಕ ವಿಶೇಷ ಆಯ್ಕೆಗಳನ್ನು ಹೊಂದಿದೆ. ತನ್ನ ಡಿಸೈನ್ ಮೂಲಕವೇ ಮೊಬೈಲ್ ಪ್ರಿಯರ ನಿದ್ದೆ ಕದ್ದಿದ್ದ ಈ ಫೋನ್​ನ ಎರಡನೇ ಆವೃತ್ತಿಯ ಹಿಂಭಾಗದಲ್ಲಿ ಬರೋಬ್ಬರಿ 33 ಎಲ್​ಇಡಿ ಲೈಟ್ ಅಳವಡಿಸಲಾಗಿದೆಯಂತೆ. ಸದ್ಯ ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ ಈ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ…

ನಥಿಂಗ್ ಫೋನ್ 2 ಪೂರ್ಣ-HD+ ರೆಸಲ್ಯೂಶನ್‌ನೊಂದಿಗೆ ದೊಡ್ಡ 6.7-ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಸಾಧ್ಯತೆ ಇದೆ. 120Hz ನಲ್ಲಿ ರಿಫ್ರೆಶ್​ರೇಟ್​ನಲ್ಲಿ ಇರಲಿದೆ. ಇದು ಆಂಡ್ರಾಯ್ಡ್ 13-ಆಧಾರಿತ ನಥಿಂಗ್ ಓಎಸ್ 2.0 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್ ಅಳವಡಿಸಲಾಗಿದೆ.

ಕ್ಯಾಮೆರಾ ಮಾಹಿತಿಯನ್ನು ಕಂಪನಿಯು ಇನ್ನೂ ಖಚಿತಪಡಿಸಿಲ್ಲ. ಆದರೆ, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ Sony IMX890 ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ. ಅಂತೆಯೆ ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ Samsung ISOCELL JN1 ಕ್ಯಾಮೆರಾ ಇರಲಿದೆ ಎಂಬ ಮಾತಿದೆ. ಮುಂಭಾಗ ಸೆಲ್ಫಿಗಳಿಗಾಗಿ, 32-ಮೆಗಾಪಿಕ್ಸೆಲ್ ಕ್ಯಾಮರಾ ಇರಬಹುದು.

ನಥಿಂಗ್ ಫೋನ್ (2) 4,700mAh ಬ್ಯಾಟರಿಯನ್ನು ಹೊಂದಿರಬಹುದು. ವೇಗದ ಚಾರ್ಜಿಂಗ್ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ ಇದು IP ರೇಟಿಂಗ್ ಅನ್ನು ಹೊಂದಿದೆ ಎಂದು ವದಂತಿಗಳಿವೆ. ಬಯೋಮೆಟ್ರಿಕ್ಸ್ ವಿಷಯದಲ್ಲಿ, ನಥಿಂಗ್ ಫೋನ್ 2 ಇನ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ ಎಂದು ವರದಿಯಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ