Threads: ಇಷ್ಟವಿಲ್ಲವೆಂದು ಥ್ರೆಡ್ಸ್ ಪ್ರೊಫೈಲ್​​ ಡಿಲೀಟ್ ಮಾಡಲು ಸಾಧ್ಯವಿಲ್ಲ; ಹಾಗೆ ಮಾಡುವುದಾದರೆ ಏನು ಮಾಡಬೇಕು?

ನೀವು ಒಮ್ಮೆ ಥ್ರೆಡ್ಸ್ ಸೈನ್ ಅಪ್ ಮಾಡಿದ ನಂತರ, ನಿಮ್ಮ ಪ್ರೊಫೈಲ್ ಅನ್ನು ನೀವು ತಾತ್ಕಾಲಿಕವಾಗಿ ಮಾತ್ರ ನಿಷ್ಕ್ರಿಯಗೊಳಿಸಬಹುದು. ಆದರೆ ಥ್ರೆಡ್ಸ್ ಖಾತೆ ಅಳಿಸಬೇಕಾದರೆ ಇನ್​​ಸ್ಟಾಗ್ರಾಂ ಖಾತೆಯನ್ನು ಅಳಿಸಲೇ ಬೇಕು.

Threads: ಇಷ್ಟವಿಲ್ಲವೆಂದು ಥ್ರೆಡ್ಸ್ ಪ್ರೊಫೈಲ್​​ ಡಿಲೀಟ್ ಮಾಡಲು ಸಾಧ್ಯವಿಲ್ಲ; ಹಾಗೆ ಮಾಡುವುದಾದರೆ ಏನು ಮಾಡಬೇಕು?
ಥ್ರೆಡ್ಸ್
Follow us
ರಶ್ಮಿ ಕಲ್ಲಕಟ್ಟ
|

Updated on:Jul 06, 2023 | 8:41 PM

ಹೆಚ್ಚು ಪ್ರಚಾರದಲ್ಲಿರುವ ಟ್ವಿಟರ್ (Twitter) ಪ್ರತಿಸ್ಪರ್ಧಿ ಅಪ್ಲಿಕೇಶನ್ ಥ್ರೆಡ್ಸ್ (Threads) ಆರಂಭವಾದ ಏಳು ಗಂಟೆಗಳಲ್ಲಿ 10 ಮಿಲಿಯನ್ ಇನ್​​ಸ್ಟಾಗ್ರಾಂ ಬಳಕೆದಾರರು ಸೈನ್ ಅಪ್ ಮಾಡಿದ್ದಾರೆ ಎಂದು ಮಾರ್ಕ್ ಜುಕರ್ ಬರ್ಗ್ ಹೇಳಿಕೊಂಡಿದ್ದಾರೆ. ಹೊಸ ಥ್ರೆಡ್ಸ್ ಅಪ್ಲಿಕೇಶನ್‌ಗೆ ಪ್ರಸ್ತುತ, ಇನ್​​ಸ್ಟಾಗ್ರಾಂ (Instagram) ಖಾತೆಯ ಮೂಲಕ ಮಾತ್ರ ಸೈನ್ ಅಪ್ ಮಾಡಬಹುದು. ನೀವು ಸ್ವತಂತ್ರವಾಗಿ ಥ್ರೆಡ್ಸ್ ಅಪ್ಲಿಕೇಶನ್‌ಗೆ ಸೈನ್ ಅಪ್ ಮಾಡಲು ಸಾಧ್ಯವಿಲ್ಲ. ಜುಕರ್‌ಬರ್ಗ್ ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಸೈನ್ ಅಪ್ ಪ್ರಕ್ರಿಯೆಯನ್ನು ತುಂಬಾ ಸುಲಭಗೊಳಿಸಿದ್ದರೂ, ನಿಮ್ಮ ಥ್ರೆಡ್ಸ್ ಪ್ರೊಫೈಲ್ ಅನ್ನು ಅಳಿಸಲು ಸಾಧ್ಯವಿಲ್ಲ. ನಿಮ್ಮ ಥ್ರೆಡ್ಸ್ ಪ್ರೊಫೈಲ್ ಮತ್ತು ಸಂಬಂಧಿತ ಡೇಟಾವನ್ನು ಶಾಶ್ವತವಾಗಿ ಅಳಿಸಲು ನೀವು ಥ್ರೆಡ್ಸ್ ಸೈನ್ ಅಪ್ ಮಾಡಲು ಬಳಸಿದ ಇನ್​​ಸ್ಟಾಗ್ರಾಂ ಖಾತೆಯನ್ನು ಸಹ ಅಳಿಸಬೇಕಾಗುತ್ತದೆ.

ನೀವು ಒಮ್ಮೆ ಥ್ರೆಡ್ಸ್ ಸೈನ್ ಅಪ್ ಮಾಡಿದ ನಂತರ, ನಿಮ್ಮ ಪ್ರೊಫೈಲ್ ಅನ್ನು ನೀವು ತಾತ್ಕಾಲಿಕವಾಗಿ ಮಾತ್ರ ನಿಷ್ಕ್ರಿಯಗೊಳಿಸಬಹುದು. ಆದರೆ ಥ್ರೆಡ್ಸ್ ಖಾತೆ ಅಳಿಸಬೇಕಾದರೆ ಇನ್ ಸ್ಟಾಗ್ರಾಂ ಖಾತೆಯನ್ನು ಅಳಿಸಲೇ ಬೇಕು.

ನಿಮ್ಮ ಥ್ರೆಡ್ಸ್ ಪ್ರೊಫೈಲ್ ಅನ್ನು ನಿಷ್ಕ್ರಿಯಗೊಳಿಸುವುದರಿಂದ ನಿಮ್ಮ ಇನ್​​ಸ್ಟಾಗ್ರಾಂ ಖಾತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಆದಾಗ್ಯೂ, ನಿಮ್ಮ ಇನ್​​ಸ್ಟಾಗ್ರಾಂ ಖಾತೆಯನ್ನು ನೀವು ನಿಷ್ಕ್ರಿಯಗೊಳಿಸಿದರೆ ಎಲ್ಲವೂ ಬದಲಾಗುತ್ತದೆ. ನಿಮ್ಮ ಇನ್​​ಸ್ಟಾಗ್ರಾಂ ಖಾತೆಯನ್ನು ನೀವು ನಿಷ್ಕ್ರಿಯಗೊಳಿಸಿದರೆ, ನಿಮ್ಮ ಲಿಂಕ್ ಮಾಡಿದ ಥ್ರೆಡ್ಸ್ ಪ್ರೊಫೈಲ್ ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳ್ಳುತ್ತದೆ.

ಇನ್ನೊಂದು ಅಂಶವೆಂದರೆ ನೀವು ವಾರಕ್ಕೊಮ್ಮೆ ಮಾತ್ರ ನಿಮ್ಮ ಥ್ರೆಡ್ ಪ್ರೊಫೈಲ್ ಅನ್ನು ನಿಷ್ಕ್ರಿಯಗೊಳಿಸಬಹುದು.

ನಿಮ್ಮ ಇನ್​​ಸ್ಟಾಗ್ರಾಂ ಥ್ರೆಡ್ಸ್ ಪ್ರೊಫೈಲ್ ಅನ್ನು ಅಳಿಸಲಾಗದು,ಹಾಗಾದರೆ ನಿಷ್ಕ್ರಿಯಗೊಳಿಸುವುದು ಹೇಗೆ?

ನಿಮ್ಮ ಥ್ರೆಡ್ಸ್ ಪ್ರೊಫೈಲ್ ಅನ್ನು ನೀವು ಡಿಲೀಟ್ ಮಾಡಲು ಸಾಧ್ಯವಿಲ್ಲದ ಕಾರಣ, ನಿಮ್ಮ ಪ್ರೊಫೈಲ್ ಅನ್ನು ನಿಷ್ಕ್ರಿಯಗೊಳಿಸಲು ಹೀಗೆ ಮಾಡಿ

1. ನಿಮ್ಮ ಪ್ರೊಫೈಲ್  ಓಪನ್ ಮಾಡಿ

2. ನಿಮ್ಮ ಡಿಸ್ಪ್ಲೇ ಪ್ರೊಫೈಲ್ ಚಿತ್ರದ ಮೇಲೆ ಬಲ ಮೇಲ್ಭಾಗದ ಮೂಲೆಯಲ್ಲಿರುವ ‘ಡಬಲ್ ಡ್ಯಾಶ್’ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಆಯ್ಕೆಗಳಿಗೆ ಹೋಗಿ.

3. ಖಾತೆ ಮೇಲೆ ಕ್ಲಿಕ್ ಮಾಡಿ ನಂತರ Deactivate profile ಒತ್ತಿ

4. Deactivate Threads  ಪ್ರೊಫೈಲ್ ಒತ್ತಿ, ನಂತರ ದೃಢೀಕರಿಸಿ.

ಇದನ್ನೂ ಓದಿ: Air Conditioner: ಮಳೆಗಾಲದಲ್ಲಿ ಎಸಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ: ಇಲ್ಲಿದೆ ಟಾಪ್ 5 ಸಲಹೆಗಳು

ಥ್ರೆಡ್ಸ್ ಪ್ರೊಫೈಲ್ ಅನ್ನು ನಿಷ್ಕ್ರಿಯಗೊಳಿಸಿದಾಗ ಏನಾಗುತ್ತದೆ?

ಒಮ್ಮೆ ನೀವು ನಿಮ್ಮ ಥ್ರೆಡ್ಸ್ ಪ್ರೊಫೈಲ್ ಅನ್ನು ನಿಷ್ಕ್ರಿಯಗೊಳಿಸಿದರೆ, ನಿಮ್ಮ ಪೋಸ್ಟ್‌ಗಳು ಮತ್ತು ಇತರರ ಪೋಸ್ಟ್‌ಗಳೊಂದಿಗಿನ ಸಂವಹನಗಳು ಥ್ರೆಡ್ಸ್ ನಲ್ಲಿ ಗೋಚರಿಸುವುದಿಲ್ಲ. ನಿಮ್ಮ ಥ್ರೆಡ್ಸ್ ಪ್ರೊಫೈಲ್ ಅನ್ನು ನಿಷ್ಕ್ರಿಯಗೊಳಿಸುವುದರಿಂದ ನಿಮ್ಮ ಥ್ರೆಡ್ಸ್ ಡೇಟಾವನ್ನು ಅಳಿಸುವುದಿಲ್ಲ ಅಥವಾ ನಿಮ್ಮ ಇನ್​​ಸ್ಟಾಗ್ರಾಂ ಖಾತೆ ಏನೂ ಆಗುವುದಿಲ್ಲ. ನೀವು ಪ್ರತ್ಯೇಕವಾಗಿ ಪೋಸ್ಟ್‌ಗಳನ್ನು ಅಳಿಸಬೇಕಾಗುತ್ತದೆ. ಥ್ರೆಡ್ಸ್ ಪ್ರೊಫೈಲ್​​ನ್ನು ಶಾಶ್ವತವಾಗಿ ಅಳಿಸಲು ಬಯಸಿದರೆ, ನಿಮ್ಮ ಇನ್​​ಸ್ಟಾಗ್ರಾಂ ಖಾತೆಯನ್ನು ಸಹ ಅಳಿಸಲೇಬೇಕು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:38 pm, Thu, 6 July 23