ಓಲಾ S1 ಮತ್ತು ಓಲಾ S1 ಪ್ರೊ – ಆ ಕಂಪೆನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್. ಇಂದು (ಸೆಪ್ಟೆಂಬರ್ 15, 2021) ಮೊದಲ ಬಾರಿಗೆ ಮಾರಾಟ ಆರಂಭಿಸಲಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಆಗಸ್ಟ್ 15ರಂದು ಬಿಡುಗಡೆ ಮಾಡಲಾಯಿತು ಮತ್ತು 8.5kW ಗರಿಷ್ಠ ಶಕ್ತಿಯನ್ನು ಇದು ನೀಡುತ್ತದೆ. ಇವುಗಳನ್ನು ಎರಡು ಬ್ಯಾಟರಿ ಕಾನ್ಫಿಗರೇಷನ್ಗಳಲ್ಲಿ ನೀಡಲಾಗುತ್ತದೆ – ವೆನಿಲಾ ಓಲಾ S1 ನಲ್ಲಿ 2.98kWh ಬ್ಯಾಟರಿ ಮತ್ತು ಓಲಾ S1 ಪ್ರೊನಲ್ಲಿ 3.97kWh ಬ್ಯಾಟರಿ ಇರುತ್ತದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆಯು ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ ಎಂದು ಹೇಳಲಾಗಿದೆ. ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳು 7 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಪಡೆಯುತ್ತವೆ.
ಭಾರತದಲ್ಲಿ ಓಲಾ S1, ಓಲಾ S1 ಪ್ರೊ ಬೆಲೆ, ಲಭ್ಯತೆ
ಓಲಾ S1 ಮತ್ತು ಓಲಾ S1 ಪ್ರೊ – ಹೊಸದಾಗಿ ಬಿಡುಗಡೆ ಮಾಡಿದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸೆಪ್ಟೆಂಬರ್ 15ರ ಬೆಳಗ್ಗೆ 8 ರಿಂದ ಖರೀದಿಸಬಹುದು. ರೈಡ್ ಅಗ್ರಿಗೇಟರ್ ತನ್ನ ಬ್ಲಾಗ್‌ನಲ್ಲಿ ಪೋಸ್ಟ್ ಮೂಲಕ ಖರೀದಿ ಪ್ರಕ್ರಿಯೆಯನ್ನು ವಿವರಿಸಿದೆ. ವೆನಿಲಾ ಓಲಾ S1 ಅನ್ನು ಎಕ್ಸ್ ಶೋ ರೂಮ್ ಬೆಲೆ ರೂ. 99,999ಕ್ಕೆ ಖರೀದಿಸಬಹುದು. ಮತ್ತು ಓಲಾ S1 ಪ್ರೊ ಅನ್ನು ಎಕ್ಸ್ ಶೋರೂಮ್ ದರ ರೂ. 1,29,999ಕ್ಕೆ ಖರೀದಿಸಬಹುದು. ಪ್ರತಿ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಇರುವ ಸಬ್ಸಿಡಿಗಳನ್ನು ಸೇರಿಸದೆ ದರ ಪಟ್ಟಿಯನ್ನು ಮಾಡಲಾಗಿದೆ.
ಕಂಪೆನಿಯ ವೆಬ್‌ಸೈಟ್‌ನಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಪೋರ್ಟಲ್ ತೆರೆದ ನಂತರ ಆಸಕ್ತ ಗ್ರಾಹಕರು ರೂ. 20,000 ಮುಂಗಡವಾಗಿ ಕಟ್ಟಿ ಮತ್ತು ಬಾಕಿ ಉಳಿದ ಮೊತ್ತವನ್ನು ಅವರ ಓಲಾ S1 ಅಥವಾ ಓಲಾ S1 ಪ್ರೊ ತಲುಪಿಸುವ ಮೊದಲು ಪಾವತಿಸಬೇಕಾಗುತ್ತದೆ. ಅಕ್ಟೋಬರ್‌ನಲ್ಲಿ ವಿತರಣೆ ಪ್ರಾರಂಭವಾಗುತ್ತವೆ ಎಂದು ಬ್ಲಾಗ್ ಉಲ್ಲೇಖಿಸಿದೆ. ಆದರೆ ನಿಖರವಾದ ದಿನಾಂಕವನ್ನು ಇನ್ನೂ ಖಚಿತಪಡಿಸಿಲ್ಲ.
ಗಮನಾರ್ಹವಾದ ಸಂಗತಿ ಏನೆಂದರೆ, ತಮ್ಮ ಓಲಾ S1 ಅಥವಾ ಓಲಾ S1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬುಕ್ ಮಾಡಿದ ಗ್ರಾಹಕರು ಅದನ್ನು ಕಳುಹಿಸುವ ಮೊದಲು ಯಾವುದೇ ಸಮಯದಲ್ಲಿ ತಮ್ಮ ಬುಕ್ಕಿಂಗ್ ಅನ್ನು ರದ್ದುಗೊಳಿಸಬಹುದು. ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೇರವಾಗಿ ಗ್ರಾಹಕರ ಮನೆಗೆ ತಲುಪಿಸಲಾಗುತ್ತದೆ ಮತ್ತು ಅವರ ಆರ್ಡರ್ ಮಾಡಿದ 72 ಗಂಟೆಗಳಲ್ಲಿ ಅಂದಾಜು ವಿತರಣೆ ದಿನಾಂಕಗಳನ್ನು ಸೂಚಿಸಲಾಗುತ್ತದೆ. ಗ್ರಾಹಕರು ಅಕ್ಟೋಬರ್‌ನಲ್ಲಿ ಟೆಸ್ಟ್ ರೈಡ್ ತೆಗೆದುಕೊಳ್ಳಬಹುದು ಎಂದು ಓಲಾ ಉಲ್ಲೇಖಿಸಿದೆ
ಓಲಾ S1, ಓಲಾ S1 ಪ್ರೊ ವಿಶೇಷಗಳು, ವೈಶಿಷ್ಟ್ಯಗಳು
ಓಲಾ S1 ಮತ್ತು ಓಲಾ S1 ಪ್ರೊ ಅನ್ನು ಎರಡು ಕಾನ್ಫಿಗರೇಷನ್ಗಳಲ್ಲಿ ಬಿಡುಗಡೆ ಮಾಡಲಾಗಿದೆ – ವೆನಿಲಾ ಓಲಾ S1ನಲ್ಲಿ 2.98 ಕಿಲೋವ್ಯಾಟ್ ಬ್ಯಾಟರಿ ಮತ್ತು ಓಲಾ S1 ಪ್ರೊನಲ್ಲಿ 3.97 ಕಿಲೋವ್ಯಾಟ್ ಬ್ಯಾಟರಿ ಹೊಂದಿದೆ. ಹಿಂದೆಯೇ ಹೇಳಿದಂತೆ 121 ಕಿ.ಮೀ. ವ್ಯಾಪ್ತಿಯನ್ನು ಮತ್ತು 90 ಕಿ.ಮೀ. ವೇಗವನ್ನು ಪಡೆಯುತ್ತದೆ. ಮತ್ತೊಂದೆಡೆ, 181 ಕಿ.ಮೀ. ವ್ಯಾಪ್ತಿ ಮತ್ತು 115 ಕಿಮೀ ಗರಿಷ್ಠ ವೇಗವನ್ನು ಪಡೆಯುತ್ತದೆ. ವೆನಿಲಾ ಓಲಾ S1 ಎರಡು ಹೈಪರ್ ಸವಾರಿ ಮೋಡ್‌ಗಳನ್ನು ಪಡೆಯುತ್ತದೆ – ನಾರ್ಮಲ್ ಮತ್ತು ಸ್ಪೋರ್ಟ್ಸ್. ಓಲಾ S1 ಪ್ರೊ ಸಾಧಾರಣ, ಸ್ಪೋರ್ಟ್ಸ್ ಮತ್ತು ಹೈಪರ್ ರೈಡಿಂಗ್ ಮೋಡ್‌ಗಳನ್ನು ಪಡೆಯುತ್ತದೆ.
ಅವುಗಳಿಗೆ 7-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಜತೆಗೆ ಬಹು ಮೈಕ್ರೊಫೋನ್‌ಗಳು, AI ಸ್ಪೀಚ್ ರೆಕಗ್ನಿಷನ್ ಅಲ್ಗಾರಿದಮ್ ಮತ್ತು ಓಲಾ ಎಲೆಕ್ಟ್ರಿಕ್‌ನಿಂದ MoveOS ಅನ್ನು ಸಹ ಪಡೆಯುತ್ತಾರೆ. ಓಲಾ S1 ಮತ್ತು ಓಲಾ S1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುರಕ್ಷತಾ ವೈಶಿಷ್ಟ್ಯಗಳ ಒಂದು ಗುಂಪನ್ನು ಪಡೆಯುತ್ತವೆ. ಇದರಲ್ಲಿ ಕಳವು ವಿರೋಧಿ ವ್ಯವಸ್ಥೆ, ಜಿಯೋ-ಫೆನ್ಸಿಂಗ್ ಮತ್ತು ಜ್ವಾಲೆ-ನಿರೋಧಕ ಬ್ಯಾಟರಿಯು ನೀರು ಮತ್ತು ಧೂಳು ನಿರೋಧಕವಾಗಿದೆ.
ಓಲಾ S1, ಓಲಾ S1 ಪ್ರೊ ಸ್ಪರ್ಧೆ
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಇದು ಅಥರ್ 450 ಎಕ್ಸ್, ಸಿಂಪಲ್ ಒನ್, ಟಿವಿಎಸ್ ಐಕ್ಯೂಬ್ ಮತ್ತು ಬಜಾಜ್ ಚೇತಕ್ನೊಂದಿಗೆ ಸ್ಪರ್ಧಿಸುತ್ತದೆ. ಈ ಎಲ್ಲ ಐದು ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಸಿಂಪಲ್ ಒನ್ ಒಂದೇ ಚಾರ್ಜ್‌ನಲ್ಲಿ 236 ಕಿ.ಮೀ. ದೀರ್ಘದ ಮೈಲೇಜ್ ಕ್ಲೇಮ್ ಹೊಂದಿದೆ. ಇದಕ್ಕೆ ತದ್ವಿರುದ್ಧವಾಗಿ ಟಿವಿಎಸ್ ಐಕ್ಯೂಬ್ ಒಂದು ಬಾರಿ ಚಾರ್ಜ್ ಮಾಡಿದಲ್ಲಿ 75 ಕಿಲೋಮೀಟರ್ ಕನಿಷ್ಠ ವ್ಯಾಪ್ತಿಯನ್ನು ಹೊಂದಿದೆ.
ಆದರೆ, ಈ ಶ್ರೇಣಿಯಲ್ಲಿ ಅಗ್ಗದ ಇ-ಸ್ಕೂಟರ್ ವೆನಿಲಾ ಓಲಾ S1 ಆಗಿದ್ದು, ಅದು ಎಕ್ಸ್ ಶೋರೂಂ ಬೆಲೆ ರೂ. 99,999 ಹೋಲಿಸಿದರೆ (ಸಬ್ಸಿಡಿಗಳ ಮೊದಲು), ಅತ್ಯಂತ ದುಬಾರಿ ಇ-ಸ್ಕೂಟರ್ ಬಜಾಜ್ ಚೇತಕ್ ಆಗಿದ್ದು, ಅದು ಎಕ್ಸ್ ಶೋರೂಂ ಬೆಲೆ ರೂ. 1,41,400 (ಸಬ್ಸಿಡಿಗಳ ಮೊದಲು) ಆಗಿದೆ.
ಇದನ್ನೂ ಓದಿ: Ola Electric Scooter: ಓಲಾ ಸ್ಕೂಟರ್ ಖರೀದಿಸಬೇಕು ಅಂತಿದ್ದೀರಾ? ಸಾಲ ಸಿಗುತ್ತೆ ಈ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ
(Ola Electric Scooter Sale Starts From September 15 Must Know Details About Buyers)