ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2022 (Amazon Great Indian Festival Sale) ನಡೆಯುತ್ತಿದ್ದು ಕೆಲ ಪ್ರಾಡಕ್ಟ್ಗಳಿಗೆ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ಆರ್ಬಿಎಲ್ ಬ್ಯಾಂಕ್, ಸಿಟಿ ಬ್ಯಾಂಕ್, ಒನ್ಕಾರ್ಡ್ ಬ್ಯಾಂಕ್ ಮತ್ತು ರೂಪೆ ಬಳಕೆದಾರರಿಗೆ ಈ ಸೇಲ್ನಲ್ಲಿ ಶೇ. 10 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಗ್ರಾಹಕರು ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಬಜಾಜ್ ಫಿನ್‌ಸರ್ವ್ ಮತ್ತು ಅಮೆಜಾನ್ ಪೇ ಲೇಟರ್‌ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಕೂಡ ಪಡೆಯಬಹುದಾಗಿದೆ. ಇದರಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳಾದ ಟೆಕ್ನೋ, ಒನ್‌ಪ್ಲಸ್, ಆ್ಯಪಲ್, ಐಕ್ಯೂ ಮತ್ತು ಶವೋಮಿ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಡಿಸ್ಕೌಂಟ್ ಪಡೆದುಕೊಂಡಿವೆ. ಮುಖ್ಯವಾಗಿ ಒನ್‌ಪ್ಲಸ್ 10ಆರ್ (OnePlus 10R) ಸ್ಮಾರ್ಟ್‌ಫೋನ್ ಅತ್ಯುತ್ತಮ ಆಫರ್ ಪಡೆದುಕೊಂಡಿದೆ.
ಅಮೆಜಾನ್ನಲ್ಲಿ ಒನ್‌ಪ್ಲಸ್ 10R 5G ಸ್ಮಾರ್ಟ್‌ಫೋನ್ ಆಕರ್ಷಕ ಡಿಸ್ಕೌಂಟ್ನಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ 38,999 ರೂ. ಬೆಲೆಯ ಈ ಫೋನನ್ನು 32,999 ರೂ. ಗೆ ನಿಮ್ಮದಾಗಿಸಬಹುದು. ಅಂತೆಯೆ 150W SuperVOOC ಚಾರ್ಜಿಂಗ್ ಆವೃತ್ತಿ ಈಗ 37,999 ರೂ. ಗೆ ಮಾರಾಟ ಆಗುತ್ತಿದೆ. ಇದು 12 ಜಿಬಿ ರ್ಯಾಮ್ ಆಯ್ಕೆಯನ್ನು ಹೊಂದಿದೆ. 30 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತದೆ.
ಒನ್‌ಪ್ಲಸ್ 10R 5G ಸ್ಮಾರ್ಟ್‌ಫೋನ್ 1,080×2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7-ಇಂಚಿನ ಫುಲ್ HD+ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100-ಮ್ಯಾಕ್ಸ್ SoC ಪ್ರೊಸೆಸರ್ ನೀಡಲಾಗಿದ್ದು ಆಂಡ್ರಾಯ್ಡ್ 12 ಆಧಾರಿತ OxygenOS 12.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಪ್ರೊಸೆಸರ್ 20% ಸುಧಾರಿತ GPU ಕಾರ್ಯಕ್ಷಮತೆ, 25% ಸುಧಾರಿತ ವಿದ್ಯುತ್ ದಕ್ಷತೆ ಮತ್ತು 80% ಉತ್ತಮ AI ಕಾರ್ಯಕ್ಷಮತೆಯನ್ನು ನೀಡುತ್ತದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೋನಿ IMX 355 ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ GC02M1 ಮ್ಯಾಕ್ರೋ ಲೆನ್ಸ್ ಹೊಂದಿದೆ. ಇದರಲ್ಲಿ ಅತ್ಯುತ್ತಮ ಕ್ಯಾಮೆರಾ ಕ್ವಾಲಿಟಿ ನೀಡಲಾಗಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL S5K3P9 ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.
ಒನ್‌ಪ್ಲಸ್ 10R 5G ಸ್ಮಾರ್ಟ್‌ಫೋನ್ ಎಂಡ್ಯೂರೆನ್ಸ್ ಆವೃತ್ತಿಯ ಮಾದರಿ 4,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 150W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇನ್ನು 80W SuperVOOC ವೇಗದ ಚಾರ್ಜಿಂಗ್ ಹೊಂದಿರುವ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿದಂತೆ ಇತ್ತೀಚೆಗಿನ ಎಲ್ಲ ಹೊಸ ಆಯ್ಕೆ ಸೇರಿಸಲಾಗಿದೆ.
Published On - 1:32 pm, Sun, 9 October 22