OnePlus 11 5G: ಆಕರ್ಷಕ ಬಣ್ಣದಲ್ಲಿ ಬರುತ್ತಿದೆ OnePlus 11 5G

|

Updated on: Mar 23, 2023 | 6:19 PM

ಸ್ಮಾರ್ಟ್​ಫೋನ್​ ವಿಭಾಗದಲ್ಲಿ ಹೊಸ ಹೊಸ ಮಾದರಿಗಳು ಮಾರುಕಟ್ಟೆಗೆ ದಿನವೂ ಲಗ್ಗೆ ಇರಿಸುತ್ತಿವೆ. ಅದರಲ್ಲೂ, ಅಧಿಕ ಬ್ಯಾಟರಿ, ವೈವಿಧ್ಯಮಯ ಕ್ಯಾಮೆರಾ ಹೊಂದಿರುವ ಸ್ಮಾರ್ಟ್​ಫೋನ್​ಗಳಿಗೆ ಬೇಡಿಕೆ ಅಧಿಕ. ಯುವಜನತೆಗಂತೂ ಕ್ಯಾಮೆರಾ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಬಳಕೆಯೂ ಅಧಿಕ. ಅದಕ್ಕೆ ಪೂರಕವಾಗಿ ವಿವಿಧ ಕಂಪನಿಗಳ, ಹೊಸ ವೈಶಿಷ್ಟ್ಯಗಳ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಮಾದರಿಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಹೊಸ ಒನ್​ಪ್ಲಸ್ 11 5G ಫೋನ್ ವಿಶೇಷತೆಯ ಸ್ಟೋರಿ ಇಲ್ಲಿದೆ.

OnePlus 11 5G: ಆಕರ್ಷಕ ಬಣ್ಣದಲ್ಲಿ ಬರುತ್ತಿದೆ OnePlus 11 5G
ಒನ್​ಪ್ಲಸ್ 11 5G
Follow us on

ಪ್ರೀಮಿಯಂ ಫೀಚರ್ಸ್ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಎಂದರೆ ನೆನಪಾಗುವುದು ಒನ್​ಪ್ಲಸ್. ಸ್ಯಾಮ್​ಸಂಗ್ ನಂತರದ ಸ್ಥಾನದಲ್ಲಿ ಒನ್​ಪ್ಲಸ್, ಹೊಸ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಸ್ಥಾನ ಭದ್ರಪಡಿಸಿಕೊಂಡಿದೆ. ಸ್ಯಾಮ್​ಸಂಗ್ ಜತೆ ಒನ್​ಪ್ಲಸ್ ಪ್ರಬಲ ಸ್ಪರ್ಧೆ ಮಾಡುತ್ತಿದೆ. ಹೊಸ ಒನ್​ಪ್ಲಸ್ 11 5G (OnePlus 11 5G) ಸ್ಮಾರ್ಟ್​ಫೋನ್, ನೂತನ ಬಣ್ಣದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿದೆ. ಪ್ರೀಮಿಯಂ ಫೀಚರ್ಸ್ ಜತೆಗೆ, ಆಕರ್ಷಕ ಬಣ್ಣದಲ್ಲಿ ಬಿಡುಗಡೆಯಾಗಲಿರುವ ಫೋನ್ ಕುರಿತ ವಿವರ ಇಲ್ಲಿದೆ.

ಒನ್​ಪ್ಲಸ್ 11 5G ವಿಶೇಷತೆಯೇನು?

ಒನ್​ಪ್ಲಸ್ 11 5G ಸ್ಮಾರ್ಟ್​ಫೋನ್, ಇತ್ತೀಚೆಗೆ ನಡೆದ ಕ್ಲೌಡ್ 11 ಲಾಂಚ್ ಈವೆಂಟ್​ನಲ್ಲಿ ಬಿಡುಗಡೆಯಾಗಿದೆ. ಸ್ನ್ಯಾಪ್​ಡ್ರ್ಯಾಗನ್ 8 ಜೆನ್ 2(Snapdragon 8 Gen 2) ಪ್ರೊಸೆಸರ್ ಬೆಂಬಲಿತ ಒನ್​ಪ್ಲಸ್ 11 5G ಸ್ಮಾರ್ಟ್​ಫೋನ್​ನಲ್ಲಿ 6.7 ಇಂಚಿನ ಕ್ವಾಡ್ ಎಚ್​ಡಿ+ ಅಮೊಲೆಡ್ ಡಿಸ್​ಪ್ಲೇ ಇದೆ. ಅಲ್ಲದೆ, Android 13 ಆಧಾರಿತ OxygenOS 13 ಬಳಕೆ ಮಾಡಲಾಗಿದೆ. ಒನ್​ಪ್ಲಸ್ ಕಸ್ಟಮ್ ಕಾರ್ಯಾಚರಣೆ ವ್ಯವಸ್ಥೆ ಇದಾಗಿದ್ದು, ಕಾಲಕಾಲಕ್ಕೆ ಹೊಸ ಅಪ್​ಡೇಟ್ ಲಭ್ಯವಾಗುತ್ತದೆ.

ಒನ್​ಪ್ಲಸ್ 11 5G ಬೆಲೆ ಮತ್ತು ಲಭ್ಯತೆ

ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಒನ್​ಪ್ಲಸ್ 11 5G ಸ್ಮಾರ್ಟ್​ಫೋನ್​ 8GB + 128GB ಮಾದರಿಗೆ ₹56,999 ದರವಿದೆ. ಹಾಗೆಯೇ, 12GB + 256GB ಆವೃತ್ತಿಗೆ ₹61,999 ದರವಿದೆ. ಈ ಸ್ಮಾರ್ಟ್​ಫೋನ್ ಎಟರ್ನಲ್ ಗ್ರೀನ್ ಮತ್ತು ಟೈಟಾನ್ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿದೆ. ಮುಂದೆ, ಇದೇ ಫೋನ್ನಲ್ಲಿ, ಹೊಸ ಬಣ್ಣದ ಲಿಮಿಟೆಡ್ ಎಡಿಶನ್ ಆಯ್ಕೆಯನ್ನು ಒನ್​ಪ್ಲಸ್ ಪರಿಚಯಿಸಲಿದೆ. ಆದರೆ ಬಿಡುಗಡೆ ದಿನಾಂಕವನ್ನು ಕಂಪನಿ ಇನ್ನೂ ಘೋಷಿಸಿಲ್ಲ.

ಒನ್​ಪ್ಲಸ್ 11 5G ಕ್ಯಾಮೆರಾ ಎಷ್ಟಿದೆ?

ನೂತನ ಒನ್​ಪ್ಲಸ್ 11 5G ಸ್ಮಾರ್ಟ್​ಫೋನ್ ಹಿಂಭಾಗದಲ್ಲಿ 50 MP ಮುಖ್ಯ ಕ್ಯಾಮೆರಾ+ 48 MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 32 MP ಟೆಲಿಫೋಟೊ ಲೆನ್ಸ್ ಇರುವ ತ್ರಿವಳಿ ಕ್ಯಾಮೆರಾ ವ್ಯವಸ್ಥೆ ಇದೆ. ಜತೆಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಕೂಡ ಇದರಲ್ಲಿದೆ. ಫೋಟೊಗ್ರಫಿ ಪ್ರಿಯರಿಗಾಗಿ ಈ ಸ್ಮಾರ್ಟ್​ಫೋನ್ ವಿನ್ಯಾಸ ಮಾಡಲಾಗಿದ್ದು, ಯುವಜನತೆ ಬಯಸುವ ಮಾದರಿಯಲ್ಲೇ ವೈವಿಧ್ಯಮಯ ಕ್ಯಾಮೆರಾ ಫೀಚರ್ಸ್ ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Thu, 23 March 23