ಭಾರತದಲ್ಲಿ ಕಳೆದ ವರ್ಷ ಬಿಡುಗಡೆ ಆಗಿ ಈಗಲೂ ಭರ್ಜರಿ ಸೇಲ್ ಕಾಣುತ್ತಿರುವ ಪ್ರಸಿದ್ಧ ಒನ್‌ಪ್ಲಸ್ (OnePlus) ಕಂಪನಿಯ ಒನ್‌ಪ್ಲಸ್ 9R ಸ್ಮಾರ್ಟ್‌ಫೋನ್ ಇದೀಗ ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಇ ಕಾಮರ್ಸ್ ತಾಣವಾದ ಅಮೆಜಾನ್ (Amazon) ಈ ಫೋನ್ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ್ದು ಆಫರ್ ಮೂಲಕ ಖರೀದಿಸಬಹುದಾಗಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಒನ್‌ಪ್ಲಸ್ 9ಆರ್ (OnePlus 9R) ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಕ್ವಾಡ್ ಕ್ಯಾಮೆರಾ ಸೆಟಪ್, 65W ವಾರ್ಪ್ ಚಾರ್ಜ್ ಟೆಕ್ನಾಲಜಿ ಇದರ ಮತ್ತೊಂದು ಹೈಲೇಟ್ ಆಗಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ಪ್ರಮುಖವಾಗಿ ಗೇಮಿಂಗ್ಗಾಗಿ ಸಿದ್ಧಪಡಿಸಲಾಗಿದ್ದು, 240 Hz ಟಚ್ ಸ್ಯಾಂಪ್ಲಿಂಗ್ ದರವು ಬಳಕೆದಾರರು ಒಂದೇ ಬಾರಿ ಐದೂ ಬೆರಳುಗಳನ್ನು ಬಳಸಿ ತಮ್ಮ ಗೇಮಿಂಗ್ ಅನ್ನು ಅತ್ಯಂತ ವೇಗವಾಗಿ ಆಡಲು ಅನುವು ಮಾಡಿಕೊಡುತ್ತದೆ. ಹಾಗಾದ್ರೆ ಈ ಫೋನಿನ ಆಫರ್, ಬೆಲೆ ಎಷ್ಟು ಎಂಬುದನ್ನು ನೋಡೋಣ.
ಒನ್‌ಪ್ಲಸ್ 9R ಸ್ಮಾರ್ಟ್‌ಫೋನ್ ಆಫರ್ನಲ್ಲಿ ಕೇವಲ 33,999 ರೂ. ಗೆ ಖರೀದಿಸಬಹುದಾಗಿದೆ. ಇದರ ಮೂಲಬೆಲೆ 39,999 ರೂ. ಆಗಿದೆ. ಅಮೆಜಾನ್ನಲ್ಲಿ ಬರೋಬ್ಬರಿ 6,000 ರೂ. ಗಳ ರಿಯಾಯಿತಿ ದರದಲ್ಲಿ ಇದು ಮಾರಾಟ ಆಗುತ್ತಿದೆ. ಇಷ್ಟೇ ಅಲ್ಲದೆ ಬ್ಯಾಂಕ್ ಆಫ್ ಬರೋಡ ಅಥವಾ ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 1,000 ರೂ. ಹೆಚ್ಚಿನ ಡಿಸ್ಕೌಂಟ್ ಸಿಗಲಿದೆ. ಈ ಮೂಲಕ ಈ ಸ್ಮಾರ್ಟ್ಫೋನನ್ನು ನೀವು 32,999 ರೂ. ಗೆ ನಿಮ್ಮದಾಗಿಸಬಹುದು. ನಿಮ್ಮ ಬಳಿ ಇಷ್ಟು ಹಣವಿದ್ದರೆ ಖಂಡಿತವಾಗಿಯೂ ಇದನ್ನು ಖರೀದಿಸಬಹುದು. ಕಳೆದ ವರ್ಷ ಬಿಡುಗಡೆ ಆಗಿದ್ದರೂ ಈಗಲೂ ಈ ಫೋನ್ ತನ್ನ ಮಾರ್ಕೆಟ್ ಅನ್ನು ಉಳಿಸಿಕೊಂಡು ಸೇಲ್ ಕಾಣುತ್ತಿದೆ.
ಏನು ವಿಶೇಷತೆ?:
ಒನ್‌ಪ್ಲಸ್ 9R ಸ್ಮಾರ್ಟ್‌ಫೋನ್ 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.55 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಪ್ಲಾಟ್ ಪ್ಲೂಯಿಡ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM+128GB, 12GB RAM+256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಈ ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಮುಖವಾಗಿ ರಾತ್ರಿ ವೇಳೆ ಫೋಟೋ ತೆಗೆದರೂ ಉತ್ತಮವಾಗಿ ಬರುತ್ತದೆ. ಇದರಿಂದಾಗಿ ವೇಗ, ಅತ್ಯದ್ಭುತ ಕಲರ್ ನಿಖರತೆ ಮತ್ತು ರಾತ್ರಿ ವೇಳೆಯ ಫೋಟೋಗ್ರಾಫಿಯನ್ನು ಅತ್ಯುತ್ತಮವಾಗಿ ಮಾಡಬಹುದಾಗಿದೆ. ಇದರಲ್ಲಿ ನೈಟ್ ಸ್ಕೇಪ್ ಮೋಡ್ ಇರಲಿದ್ದು, ಇಂಟಲಿಜೆಂಟ್ ಮಲ್ಟಿ ಫ್ರೇಂ ಪ್ರೊಸೆಸಿಂಗ್ ಸಹ ಇರುವುದರಿಂದ ಸ್ಪಷ್ಟತೆ ಮತ್ತು ರಾತ್ರಿ ವೇಳೆ ನಿಮ್ಮ ನೆಚ್ಚಿನ ಸಿಟಿಸ್ಕೇಪ್ ಗಳನ್ನು ಕ್ಲಿಕ್ಕಿಸಬಹುದು. ಫೋಕಸ್ ಸ್ಪೀಡ್ ಉತ್ತಮವಾಗಿದ್ದು, ವೇಗವಾಗಿ ಫೋಟೋ ಕ್ಲಿಕ್ ಆಗುತ್ತದೆ.
ಉಳಿದಂತೆ ಎರಡನೇ ಕ್ಯಾಮೆರಾ 16 ಮೆಗಾ ಪಿಕ್ಸೆಲ್, ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 65W ವಾರ್ಪ್ ಚಾರ್ಜ್ ಟೆಕ್ನಾಲಜಿಯನ್ನು ಬೆಂಬಲಿಸುತ್ತದೆ. 10 ನಿಮಿಷಗಳಲ್ಲಿ 25-30 ಚಾರ್ಜ್ ಆಗುತ್ತದೆ.
ಭಾರತದಲ್ಲಿ ರೋಚಕತೆ ಸೃಷ್ಟಿಸಿದ ಈ 10,000 ರೂ. ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಬಹಿರಂಗ
Realme 9 5G: ರಿಯಲ್ ಮಿ 9 5G ಸ್ಮಾರ್ಟ್‌ಫೋನ್ ಬಿಡುಗಡೆ: ಇದರ ಬೆಲೆ ಕೇವಲ 14,999 ರೂ. ಎಂದರೆ ನಂಬಲೇಬೇಕು