ಭಾರತದಲ್ಲಿ ರೋಚಕತೆ ಸೃಷ್ಟಿಸಿದ ಈ 10,000 ರೂ. ಸ್ಮಾರ್ಟ್ಫೋನ್ ಬಿಡುಗಡೆ ದಿನಾಂಕ ಬಹಿರಂಗ
ಮೊನ್ನೆಯಷ್ಟೆ ರೆಡ್ಮಿ ನೋಟ್ 11 ಪ್ರೊ ಮತ್ತು ರೆಡ್ಮಿ ನೋಟ್ 11 ಪ್ರೊ + 5G ಸ್ಮಾರ್ಟ್ಫೋನ್ ರಿಲೀಸ್ ಆಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಹೊಸ ಫೋನ್ ಭಾರತದಲ್ಲಿ ಲಾಂಚ್ ಮಾಡಲು ಶವೋಮಿ ಕಂಪನಿ ಸಿದ್ಧತೆ ನಡೆಸಿದೆ. ಅದುವೇ ಹೊಸ ರೆಡ್ಮಿ 10 (Redmi 10).
ಶವೋಮಿ (Xioami) ಕಂಪನಿಯ ಸ್ಮಾರ್ಟ್ಫೋನ್ಗಳಿಗೆ ಭಾರತದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಇದಕ್ಕಾಗಿಯೇ ಇದು ದೇಶದ ನಂಬರ್ ಒನ್ ಮೊಬೈಲ್ ಬ್ರ್ಯಾಂಡ್ ಆಗಿದೆ. ತನ್ನ ಎಂಐ, ರೆಡ್ಮಿ ಅಡಿಯಲ್ಲಿ ಹೊಚ್ಚ ಹೊಸ ಆಕರ್ಷಕ ಫೋನ್ಗಳನ್ನು ಬಿಡುಗಡೆ ಮಾಡುವ ಶವೋಮಿ ಮೊನ್ನೆಯಷ್ಟೆ ಕ್ಯಾಮೆರಾ ಪ್ರಿಯರಿಗಾಗಿ ಭಾರತದಲ್ಲಿ ತನ್ನ ಹೊಸ ರೆಡ್ಮಿ ನೋಟ್ 11 ಪ್ರೊ (Redmi Note 11 Pro) ಮತ್ತು ರೆಡ್ಮಿ ನೋಟ್ 11 ಪ್ರೊ + 5G (Redmi Note 11 Pro+) ಯನ್ನು ರಿಲೀಸ್ ಮಾಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಹೊಸ ಫೋನ್ ಭಾರತದಲ್ಲಿ ಲಾಂಚ್ ಮಾಡಲು ಕಂಪನಿ ಸಿದ್ಧತೆ ನಡೆಸಿದೆ. ಅದುವೇ ಹೊಸ ರೆಡ್ಮಿ 10 (Redmi 10). ಈ ಫೋನಿನ ಬಿಡುಗಡೆ ದಿನಾಂಕ ಕೂಡ ಬಹಿರಂಗವಾಗಿದ್ದು ಇದೇ ಮಾರ್ಚ್ 17 ರಂದು ರೆಡ್ಮಿ 10 ದೇಶದಲ್ಲಿ ರಿಲೀಸ್ ಆಗಲಿದೆ. ಈ ಫೋನಿನ ವಿಶೇಷತೆ ಬಗ್ಗೆ ಖಚಿತ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ. ಆದರೆ, ಕೆಲವು ಅಂಶಗಳು ಸೋರಿಕೆಯಾಗಿದೆ. ಮೂಲಗಳ ಪ್ರಕಾರ ಇದರ ಬೆಲೆ ಕೇವಲ 10,000 ರೂ. ಆಸುಪಾಸಿನಲ್ಲಿ ಇರಲಿದೆ ಎನ್ನಲಾಗಿದೆ.
ರೆಡ್ಮಿ 10 ಸ್ಮಾರ್ಟ್ಫೋನ್ 6.5 ಇಂಚಿನ ಎಲ್ಸಿಡಿ ಡಿಸ್ಪ್ಲೇ ಅನ್ನು ಹೊಂದಿರುವ ಸಾಧ್ಯತೆ ಇದೆ. ಇದು 2400*1080 ಪಿಕ್ಸೆಲ್ ಸಾಮರ್ಥ್ಯದ ರೆಸಲೂಶನ್ ಹೊಂದಿದ್ದು, ರೆಡ್ಮಿ ನೋಟ್ 10 ಸರಣಿಯ ಸ್ಮಾರ್ಟ್ಫೋನ್ ರೀತಿ ಇದೆ ಎನ್ನಲಾಗಿದೆ. ಮೀಡಿಯಾ ಟೆಕ್ ಹೆಲಿಯೊ ಜಿ35 ಎಸ್ಒಸಿ ಪ್ರೊಸೆಸರ್ ಅಥವಾ ಸ್ನಾಪ್ಡ್ರಾಗನ್ ಪ್ರೊಸೆಸರ್ನಿಂದ ಕೂಡಿರಬಹುದು. ಯಾಕಂದ್ರೆ ಬಿಡುಗಡೆ ಮಾಡಿರುವ ಪೋಸ್ಟರ್ನಲ್ಲಿ ಸ್ನಾಪ್ಡ್ರಾಗನ್ ಪ್ರೊಸೆಸರ್, ಬಿಗ್ ಬ್ಯಾಟರಿ, ಅತ್ಯುತ್ತಮ ಡಿಸ್ ಪ್ಲೇ ಇರಲಿದೆ ಎಂಬ ಹಿಂಟ್ ನೀಡಿದೆ.
ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಮತ್ತು ಸಿಲ್ವರ್ ಫಿನಿಶ್ ಪ್ರಮುಖ ಹೈಲೇಟ್ ಆಗಿದೆ. ರೆಡ್ಮಿ 10 ಸ್ಮಾರ್ಟ್ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಜೊತೆಗೆ 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು ಎರಡು 2 ಮೆಗಾಪಿಕ್ಸೆಲ್ ಸೆನ್ಸರ್‌ಗಳನ್ನು ಒಳಗೊಂಡಿರಲಿದೆ ಎಂದು ಮಾಹಿತಿಯಿದೆ. ಮುಂಭಾಗದಲ್ಲಿ ಸೆಲ್ಫಿಗಳಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸರ್‌ನೊಂದಿಗೆ ಬರಲಿದೆ ಎನ್ನಲಾಗಿದೆ.
ಇನ್ನೂ 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 10 ಅಥವಾ 18 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಿದೆಯಂತೆ. ಉಳಿದಂತೆ 3.5 mm ಹೆಡ್ಫೋನ್ ಜಾಕ್ ಮತ್ತು ಫಿಂಗರ್ಪ್ರಿಂಟ್ ಸ್ಕ್ಯಾನರ್ ಇದರಲ್ಲಿದೆ.
ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ರೆಡ್ಮಿ 10 ಸ್ಮಾರ್ಟ್ಫೋನ್ ಬಜೆಟ್ ಬೆಲೆಗೆ ಲಭ್ಯವಿದೆ. ಮೂಲಗಳ ಪ್ರಕಾರ ಇದು ಒಟ್ಟು ಮೂರು ಆಯ್ಕೆಯಲ್ಲಿ ಬಿಡುಗಡೆ ಆಗಲಿದ್ದು, 4GB RAM + 64GB ಸ್ಟೊರೇಜ್ ಆಯ್ಕೆ, 4GB RAM + 128GB ಮತ್ತು 6GB RAM + 128GB ಆಯ್ಕೆಯೊಂದಿಗೆ ಬರಲಿದೆಯಂತೆ. ಪೆಬ್ಬಲ್ ಬಿಳಿ, ಕಾರ್ಬನ್ ಗ್ರೆ ಮತ್ತು ಸಮುದ್ರ ನೀಲಿ ಬಣ್ಣದ ಆಯ್ಕೆಯಲ್ಲಿ ಮಾರಾಟ ಕಾಣಲಿದೆ.
Realme 9 5G: ರಿಯಲ್ ಮಿ 9 5G ಸ್ಮಾರ್ಟ್ಫೋನ್ ಬಿಡುಗಡೆ: ಇದರ ಬೆಲೆ ಕೇವಲ 14,999 ರೂ. ಎಂದರೆ ನಂಬಲೇಬೇಕು
WhatsApp: ಸದ್ದಿಲ್ಲದೆ ಗ್ರೂಪ್ನಲ್ಲಿ ಅಚ್ಚರಿ ಫೀಚರ್ ಪರಿಚಯಿಸುತ್ತಿದೆ ವಾಟ್ಸ್ಆ್ಯಪ್: ಬಳಕೆದಾರರು ಫುಲ್ ಶಾಕ್