ಸ್ನಾಪ್​ಡ್ರಾಗನ್ 7 Gen 3 SoC, 5,500mAh ಬ್ಯಾಟರಿ: ಭಾರತದಲ್ಲಿ ಒನ್​ಪ್ಲಸ್ ನಾರ್ಡ್ CE 4 ಬಿಡುಗಡೆ

OnePlus Nord CE 4 Launched: ಭಾರತದಲ್ಲಿ ಒನ್​ಪ್ಲಸ್ ನಾರ್ಡ್ CE 4 ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿವೆ. ಇದರ 8GB RAM + 128GB ಸ್ಟೋರೇಜ್ ರೂಪಾಂತರಕ್ಕೆ 24,999 ರೂ. ಇದೆ. ಅಂತೆಯೆ 8GB RAM + 256GB ಸಂಗ್ರಹಣೆಯೊಂದಿಗೆ ಟಾಪ್-ಎಂಡ್ ರೂಪಾಂತರವು ರೂ. 26,999ಕ್ಕೆ ಲಭ್ಯವಿದೆ.

ಸ್ನಾಪ್​ಡ್ರಾಗನ್ 7 Gen 3 SoC, 5,500mAh ಬ್ಯಾಟರಿ: ಭಾರತದಲ್ಲಿ ಒನ್​ಪ್ಲಸ್ ನಾರ್ಡ್ CE 4 ಬಿಡುಗಡೆ
OnePlus Nord CE 4
Follow us
Vinay Bhat
|

Updated on: Apr 02, 2024 | 1:46 PM

ಪ್ರಸಿದ್ಧ ಒನ್​ಪ್ಲಸ್ ಕಂಪನಿ ಭಾರತದಲ್ಲಿ ಹೊಸ ಒನ್​ಪ್ಲಸ್ ನಾರ್ಡ್ CE 4 (OnePlus Nord CE 4) ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದೆ. ಹೊಸ ನಾರ್ಡ್ ಸರಣಿಯ ಸ್ಮಾರ್ಟ್‌ಫೋನ್ ಕಳೆದ ವರ್ಷದ ಒನ್​ಪ್ಲಸ್ ನಾರ್ಡ್ CE 3 ಗೆ ಉತ್ತರಾಧಿಕಾರಿಯಾಗಿ ಬರುತ್ತದೆ. ಇದರಲ್ಲಿ ಸ್ನಾಪ್​ಡ್ರಾಗನ್ 7 Gen 3 SoC, 100W SuperVOOC ವೇಗದ ಚಾರ್ಜಿಂಗ್ ಬೆಂಬಲ, 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಸೇರಿದಂತೆ ಬಹು ನವೀಕರಣಗಳೊಂದಿಗೆ ರಿಲೀಸ್ ಆಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಒನ್​ಪ್ಲಸ್ ನಾರ್ಡ್ CE 4 ಬೆಲೆ, ಲಭ್ಯತೆ

ಭಾರತದಲ್ಲಿ ಒನ್​ಪ್ಲಸ್ ನಾರ್ಡ್ CE 4 ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿವೆ. ಇದರ 8GB RAM + 128GB ಸ್ಟೋರೇಜ್ ರೂಪಾಂತರಕ್ಕೆ 24,999 ರೂ. ಇದೆ. ಅಂತೆಯೆ 8GB RAM + 256GB ಸಂಗ್ರಹಣೆಯೊಂದಿಗೆ ಟಾಪ್-ಎಂಡ್ ರೂಪಾಂತರವು ರೂ. 26,999ಕ್ಕೆ ಲಭ್ಯವಿದೆ. ಇದನ್ನು ಡಾರ್ಕ್ ಕ್ರೋಮ್ ಮತ್ತು ಸೆಲಡಾನ್ ಮಾರ್ಬಲ್ ಬಣ್ಣಗಳಲ್ಲಿ ನೀಡಲಾಗುತ್ತದೆ. ಈ ಫೋನ್ ಒನ್​ಪ್ಲಸ್ ಆನ್‌ಲೈನ್ ಸ್ಟೋರ್, ಅಮೆಜಾನ್ ಇಂಡಿಯಾ ಮತ್ತು ಇತರ ಚಿಲ್ಲರೆ ಅಂಗಡಿಗಳ ಮೂಲಕ ಏಪ್ರಿಲ್ 4 ರಂದು ಮಧ್ಯಾಹ್ನ 12:00 IST ರಿಂದ ಸೇಲ್ ಕಾಣಲಿದೆ.

ವಿಮಾನದಲ್ಲಿ ಹೋಗೋವಾಗ ಏರ್‌ಪ್ಲೇನ್ ಮೋಡ್ ಏಕೆ ಆನ್ ಮಾಡಬೇಕು: ಮಾಡದಿದ್ದರೆ ಏನಾಗುತ್ತೆ?

ಒನ್​ಪ್ಲಸ್ ನಾರ್ಡ್ CE 4 ಫೀಚರ್ಸ್

ಡ್ಯುಯಲ್-ಸಿಮ್ (ನ್ಯಾನೋ) ಒನ್​ಪ್ಲಸ್ ನಾರ್ಡ್ CE 4 ಆಂಡ್ರಾಯ್ಡ್ 14 ನಲ್ಲಿ OxygenOS 14 ಜೊತೆಗೆ ರನ್ ಆಗುತ್ತದೆ. 6.7-ಇಂಚಿನ ಪೂರ್ಣ-HD+ (1,080×2,412 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇ ಜೊತೆಗೆ 394ppi ಪಿಕ್ಸೆಲ್ ಸಾಂದ್ರತೆಯೊಂದಿಗೆ 93.40 ಪ್ರತಿಶತ ಸ್ಕ್ರೀನ್ ಅನುಪಾತ, 120Hz ವರೆಗೆ ರಿಫ್ರೆಶ್ ದರ, HDR10+ ಬೆಂಬಲವನ್ನು ಹೊಂದಿದೆ. ಹುಡ್ ಅಡಿಯಲ್ಲಿ, ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 7 Gen 3 SoC, ಜೊತೆಗೆ 8GB LPDDR4x RAM ಅನ್ನು ಹೊಂದಿದೆ. ಹ್ಯಾಂಡ್‌ಸೆಟ್ ಗೇಮಿಂಗ್‌ಗಾಗಿ ಎಕ್ಸ್-ಆಕ್ಸಿಸ್ ಲೀನಿಯರ್ ಮೋಟರ್ ಅನ್ನು ಒಳಗೊಂಡಿದೆ.

ಫೋಟೋಗಳು ಮತ್ತು ವಿಡಿಯೋಗಳಿಗಾಗಿ, ಒನ್​ಪ್ಲಸ್ ನಾರ್ಡ್ CE 4 ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ Sony LYT600 ಸಂವೇದಕ, 8-ಮೆಗಾಪಿಕ್ಸೆಲ್ Sony IMX355 ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಒನ್​ಪ್ಲಸ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಎಲ್ಇಡಿ ಫ್ಲ್ಯಾಷ್​ನೊಂದಿಗೆ ಜೋಡಿಸಿದೆ. ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ, ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಸಂವೇದಕವಿದೆ. ಕ್ಯಾಮೆರಾ ಸೆಟಪ್ 1080p ವಿಡಿಯೋವನ್ನು ಸೆಕೆಂಡಿಗೆ 60 ಫ್ರೇಮ್‌ಗಳಲ್ಲಿ (fps) ಮತ್ತು 4K ವೀಡಿಯೊವನ್ನು 30fps ನಲ್ಲಿ ಶೂಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ವಿಸ್ತರಿಸಬಹುದು.

ಭಾರತದಲ್ಲಿ ರೋಚಕತೆ ಸೃಷ್ಟಿಸಿರುವ ಹೊಸ ರಿಯಲ್ ಮಿ 12X ಫೋನ್ ಇಂದು ಬಿಡುಗಡೆ

ಒನ್​ಪ್ಲಸ್ ನಾರ್ಡ್ CE 4 ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ 5.4, GPS, GLONASS, BDS, ಗೆಲಿಲಿಯೋ, QZSS, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಹ್ಯಾಂಡ್ಸೆಟ್ IP54-ರೇಟೆಡ್ ಬಿಲ್ಡ್ ಅನ್ನು ಹೊಂದಿದೆ. ಇದು 100W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. 15 ನಿಮಿಷಗಳ ಚಾರ್ಜಿಂಗ್ ಸಮಯವು ಒಂದು ದಿನದ ಬ್ಯಾಟರಿ ಅವಧಿಯನ್ನು ನೀಡುತ್ತದೆ. 1 ರಿಂದ 100 ಪ್ರತಿಶತ ಕೇವಲ 29 ನಿಮಿಷಗಳಲ್ಲಿ ಆಗುತ್ತದೆ. ಕಂಪನಿಯ ಇತ್ತೀಚಿನ ಬ್ಯಾಟರಿ ಹೆಲ್ತ್ ಇಂಜಿನ್ ತಂತ್ರಜ್ಞಾನವು ಸಾಧನಕ್ಕೆ ನಾಲ್ಕು ವರ್ಷಗಳ ಬ್ಯಾಟರಿ ಚಾರ್ಜಿಂಗ್ ಸೈಕಲ್‌ಗಳನ್ನು ಒದಗಿಸುತ್ತದೆ ಎಂದು ಹೇಳಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ