ಅತಿ ಕಡಿಮೆ ಬೆಲೆಗೆ ಬಿಡುಗಡೆ ಆಯಿತು ಹೊಸ ರಿಯಲ್ ಮಿ 12x 5G ಫೋನ್: ಏನಿದೆ ಫೀಚರ್ಸ್
Realme 12x 5G Launched India: ರಿಯಲ್ ಮಿ 12x 5G ಸ್ಮಾರ್ಟ್‌ಫೋನ್ ದೇಶದಲ್ಲಿ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿರುವ ಈ ಸ್ಮಾರ್ಟ್ಫೋನ್ನಲ್ಲಿ 45W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ಇದೆ. ಇಷ್ಟು ಚಾರ್ಜಿಂಗ್ ವೇಗವನ್ನು ನೀಡುವ ಮೊದಲ ರೂ. 12,000 ಕ್ಕಿಂತ ಕಡಿಮೆಯ ಫೋನ್ ಇದಾಗಿದೆ.
ಪ್ರಸಿದ್ಧ ರಿಯಲ್ ಮಿ ಕಂಪನಿ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ನೂತನ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಹೆಸರು ರಿಯಲ್ ಮಿ 12x 5G (Realme 12x 5G). ಈ ಫೋನ್ ಬಜೆಟ್ ಬೆಲೆಗೆ ಲಭ್ಯವಿರುವ ಕೆಲವೇ ಕೆಲವು ಫೋನುಗಳ ಸಾಲಿಗೆ ಸೇರಿದೆ. ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿರುವ ಈ ಸ್ಮಾರ್ಟ್ಫೋನ್ನಲ್ಲಿ 45W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ಇದೆ. ಇಷ್ಟು ಚಾರ್ಜಿಂಗ್ ವೇಗವನ್ನು ನೀಡುವ ಮೊದಲ ರೂ. 12,000 ಕ್ಕಿಂತ ಕಡಿಮೆಯ ಫೋನ್ ಇದಾಗಿದೆ. ರಿಯಲ್ ಮಿ 12x 5G ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ರಿಯಲ್ ಮಿ 12x 5G ಬೆಲೆ, ಮಾರಾಟ ದಿನಾಂಕ:
ರಿಯಲ್ ಮಿ 12x 5G ಸ್ಮಾರ್ಟ್‌ಫೋನ್ ದೇಶದಲ್ಲಿ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಇದರ 4GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಗೆ 11,999 ರೂ. ಇದೆ. ಅಂತೆಯೆ ಇದು 6GB+128GB ಮತ್ತು 8GB+128GB ಯ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಇದರ ಬೆಲೆ ಕ್ರಮವಾಗಿ ರೂ. 13,499 ಮತ್ತು ರೂ. 14,999 ಆಗಿದೆ.
ಸ್ನಾಪ್ಡ್ರಾಗನ್ 7 Gen 3 SoC, 5,500mAh ಬ್ಯಾಟರಿ: ಭಾರತದಲ್ಲಿ ಒನ್ಪ್ಲಸ್ ನಾರ್ಡ್ CE 4 ಬಿಡುಗಡೆ
ರಿಯಲ್ ಮಿ 12x 5G ಯ ಮೊದಲ ಮಾರಾಟವು ಇಂದು ಏಪ್ರಿಲ್ 2 ರಂದು ಸಂಜೆ 6 ಗಂಟೆಯಿಂದ 8 ರ ನಡುವೆ ಫ್ಲಿಪ್ಕಾರ್ಟ್ ಮತ್ತು ರಿಯಲ್ ಮಿ.com ನಲ್ಲಿ ನಡೆಯಲಿದೆ. ಈ ಫೋನ್ ಟ್ವಿಲೈಟ್ ಪರ್ಪಲ್ ಮತ್ತು ವುಡ್‌ಲ್ಯಾಂಡ್ ಗ್ರೀನ್ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ.
ರಿಯಲ್ ಮಿ 12x 5G ಫೀಚರ್ಸ್:
ರಿಯಲ್ ಮಿ 12x 5G ಏರ್ ಗೆಸ್ಚರ್‌ಗಳು ಮತ್ತು ಡೈನಾಮಿಕ್ ಬಟನ್‌ನೊಂದಿಗೆ ಬರುತ್ತದೆ. ಹೆಸರೇ ಸೂಚಿಸುವಂತೆ, ಏರ್ ಗೆಸ್ಚರ್ ಮೂಲಕ ಫೋನ್‌ನಲ್ಲಿ ಕರೆಗಳಿಗೆ ಉತ್ತರಿಸುವುದು. ಡೈನಾಮಿಕ್ ಬಟನ್ ಶಾರ್ಟ್‌ಕಟ್ ಬಟನ್ ಆಗಿದ್ದು, ಇದನ್ನು ನಿಮಗೆ ಬೇಕಾದಂತೆ ಕಸ್ಟಮೈಸ್ ಮಾಡಬಹುದು. ಈ ಫೋನ್‌ನಲ್ಲಿ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ರೈನ್‌ವಾಟರ್ ಸ್ಮಾರ್ಟ್ ಟಚ್ ವೈಶಿಷ್ಟ್ಯದ ಜೊತೆಗೆ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಅನ್ನು ಸಹ ಅಳವಡಿಸಲಾಗಿದೆ.
ಈ ಫೋನ್ 6.72-ಇಂಚಿನ FHD+ LCD ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 950 nits ಪೀಕ್ ಬ್ರೈಟ್‌ನೆಸ್ ಹೊಂದಿದೆ. ಮಾಲಿ-ಜಿ 57 ಜಿಪಿಯು ಜೊತೆ ಜೋಡಿಸಲಾದ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಚಿಪ್‌ಸೆಟ್‌ನಿಂದ ಸ್ಮಾರ್ಟ್‌ಫೋನ್ ಚಾಲಿತವಾಗಿದೆ. ಇದು 8GB RAM ಮತ್ತು 128GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ.
ವಿಮಾನದಲ್ಲಿ ಹೋಗೋವಾಗ ಏರ್‌ಪ್ಲೇನ್ ಮೋಡ್ ಏಕೆ ಆನ್ ಮಾಡಬೇಕು: ಮಾಡದಿದ್ದರೆ ಏನಾಗುತ್ತೆ?
ಛಾಯಾಗ್ರಹಣ ವಿಭಾಗದಲ್ಲಿ, ನೀವು 50MP ಪ್ರಾಥಮಿಕ AI ಕ್ಯಾಮೆರಾ ಮತ್ತು 2MP ಸೆಕೆಂಡರಿ ಕ್ಯಾಮೆರಾವನ್ನು ಪಡೆಯುತ್ತೀರಿ. ಸೆಲ್ಫಿಗಳಿಗಾಗಿ, 8MP ಮುಂಭಾಗದ ಕ್ಯಾಮೆರಾ ಇದೆ. 45W SUPERVOOC ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು ಆಂಡ್ರಾಯ್ಡ್ 14 ಅನ್ನು ಆಧರಿಸಿ ರಿಯಲ್ ಮಿ UI 5.0 ಮೂಲಕ ರನ್ ಮಾಡುತ್ತದೆ. ಮೂರು ವರ್ಷಗಳ ಭದ್ರತಾ ನವೀಕರಣಗಳು ಮತ್ತು ಎರಡು ವರ್ಷಗಳ ಪ್ರಮುಖ OS ನವೀಕರಣಗಳನ್ನು ಪಡೆಯುವುದನ್ನು ಕಂಪನಿ ದೃಢೀಕರಿಸಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ