ಫೇಸ್​ಬುಕ್, ಇನ್ಸ್​ಟಾದ ನಿಮ್ಮ ಪೋಸ್ಟ್​ಗಳು ವಿದೇಶೀ ಸರ್ವರ್​ಗೆ ಹೋಗಲ್ಲ; ಭಾರತದಲ್ಲೇ ನಿರ್ಮಾಣವಾಗಿದೆ ಡಾಟಾ ಸೆಂಟರ್

Meta's First Data Center in India at Chennai: ಮೆಟಾ ಸಂಸ್ಥೆಯ ಹೊಸ ಡಾಟಾ ಸೆಂಟರ್ ಚೆನ್ನೈನಲ್ಲಿರುವ ಆರ್​ಐಎಲ್ ಕ್ಯಾಂಪಸ್​ನಲ್ಲಿ ನಿರ್ಮಾಣವಾಗುತ್ತಿದೆ. ಅಂಬತ್ತೂರು ಇಂಡಸ್ಟ್ರಿಯಲ್ ಎಸ್ಟೇಟ್​ನಲ್ಲಿ 10 ಎಕರೆ ಜಾಗದಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್, ಡಿಜಿಟಲ್ ರಿಯಲ್ಟಿ ಮತ್ತು ಬ್ರೂಕ್​ಫೀಲ್ಡ್ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳು ಜಂಟಿಯಾಗಿ ಡಾಟಾ ಸೆಂಟರ್ ಕ್ಯಾಂಪಸ್ ನಿರ್ಮಿಸುತ್ತಿವೆ. ಇದು ಮೆಟಾಗೆ ಭಾರತದಲ್ಲಿನ ಮೊದಲ ಡಾಟಾ ಸೆಂಟರ್ ಆಗಿರುತ್ತದೆ. ಭಾರತೀಯ ಬಳಕೆದಾರರು ಸೃಷ್ಟಿಸುವ ದತ್ತಾಂಶಗಳೆಲ್ಲವೂ ಇಲ್ಲಿಯೇ ನಿರ್ವಹಣೆ ಆಗುತ್ತವೆ.

ಫೇಸ್​ಬುಕ್, ಇನ್ಸ್​ಟಾದ ನಿಮ್ಮ ಪೋಸ್ಟ್​ಗಳು ವಿದೇಶೀ ಸರ್ವರ್​ಗೆ ಹೋಗಲ್ಲ; ಭಾರತದಲ್ಲೇ ನಿರ್ಮಾಣವಾಗಿದೆ ಡಾಟಾ ಸೆಂಟರ್
ಮೆಟಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 02, 2024 | 4:42 PM

ನವದೆಹಲಿ, ಏಪ್ರಿಲ್ 2: ಫೇಸ್​ಬುಕ್, ಇನ್ಸ್​ಟಾಗ್ರಾಮ್ ಮತ್ತು ವಾಟ್ಸಾಪ್ ಇತ್ಯಾದಿ ಮೆಟಾದ ಆ್ಯಪ್​ಗಳಲ್ಲಿ (Meta) ಭಾರತೀಯ ಬಳಕೆದಾರರು ರಚಿಸುವ ಪೋಸ್ಟ್​ಗಳು ವಿದೇಶಗಳಲ್ಲಿರುವ ಸರ್ವರ್​ನಲ್ಲಿ ಸಂಗ್ರಹವಾಗುತ್ತವೆ. ಭೌತಿಕವಾಗಿ ಇವು ವಿದೇಶಗಳಲ್ಲಿ ಇರುತ್ತವೆ. ಇದೀಗ ಭಾರತದಲ್ಲೇ ಮೆಟಾ ಡಾಟಾ ಸೆಂಟರ್ (Data Center) ಇರಲಿದೆ. ಇದರಿಂದ ಮೆಟಾದ ಭಾರತೀಯ ಬಳಕೆದಾರರ ದತ್ತಾಂಶಗಳೆಲ್ಲವೂ (Indian user generated content) ಈ ಡಾಟಾ ಸೆಂಟರ್​ನಲ್ಲೇ ಇರಲಿವೆ. ರಿಲಾಯನ್ಸ್ ಇಂಡಸ್ಟ್ರೀಸ್​ನ ಚೆನ್ನೈ ಕ್ಯಾಂಪಸ್​ನಲ್ಲಿರುವ ಡಾಟಾ ಸೆಂಟರ್ ಕೇಂದ್ರದಲ್ಲಿ ಮೆಟಾದ ಡಾಟಾ ಸೆಂಟರ್ ಇರಲಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಫೇಸ್​ಬುಕ್, ಇನ್ಸ್​ಟಾಗ್ರಾಮ್, ವಾಟ್ಸಾಪ್ ಇತ್ಯಾದಿ ಆ್ಯಪ್​ಗಳನ್ನು ಹೊಂದಿರುವ ಮೆಟಾ ಜಾಗತಿಕವಾಗಿ 14 ಡಾಟಾ ಸೆಂಟರ್ಸ್ ಹೊಂದಿದೆ. ಚೆನ್ನೈನಲ್ಲಿ ಸ್ಥಾಪನೆಯಾಗಲಿರುವುದು 15ನೆಯದು. ಭಾರತದಲ್ಲಿ ಮೆಟಾದ ಮೊದಲ ಡಾಟಾ ಸೆಂಟರ್ ಇದಾಗಿರುತ್ತದೆ.

ಗುಜರಾತ್​ನ ಜಾಮ್​ನಗರ್​ನಲ್ಲಿ ಕಳೆದ ತಿಂಗಳು ನಡೆದ ಮುಕೇಶ್ ಅಂಬಾನಿ ಕೊನೆಯ ಮಗ ಅನಂತ್ ಅಂಬಾನಿ ಅವರ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ಒಡೆಯ ಮುಕೇಶ್ ಅಂಬಾನಿ ಮಧ್ಯೆ ಈ ಡಾಟಾ ಸೆಂಟರ್ ನಿರ್ಮಾಣ ಸಂಬಂಧ ಮಾತುಕತೆ ನಡೆದು, ಒಪ್ಪಂದವನ್ನು ಅಂತಿಮಗೊಳಿಸಲಾಗಿತ್ತು.

ಇದನ್ನೂ ಓದಿ: ತಾತನ 30 ವರ್ಷ ಹಿಂದಿನ ಎಸ್​ಬಿಐ ಷೇರು ಸರ್ಟಿಫಿಕೇಟ್ ಅಚಾನಕ್ಕಾಗಿ ಸಿಕ್ಕಿದಾಗ… ಈಗೆಷ್ಟಿದೆ ನೋಡಿ ಅದರ ಮೌಲ್ಯ

ಚೆನ್ನೈನ ಅಂಬತ್ತೂರು ಇಂಡಸ್ಟ್ರಿಯಲ್ ಎಸ್ಟೇಟ್​ನಲ್ಲಿ 10 ಎಕರೆ ಜಾಗದಲ್ಲಿ ಎಂಎಎ10 ಡಾಟಾ ಸೆಂಟರ್ ನಿರ್ಮಾಣವಾಗಿದೆ. ರಿಲಾಯನ್ಸ್ ಇಂಡಸ್ಟ್ರೀಸ್, ಡಿಜಿಟಲ್ ರಿಯಲ್ಟಿ ಮತ್ತು ಬ್ರೂಕ್​ಫೀಲ್ಡ್ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳು ಒಟ್ಟು ಸೇರಿ ರಚಿಸಿರುವ ಡಿಜಿಟಲ್ ಕನೆಕ್ಸಿಯಾನ್ ನಿರ್ಮಿಸಿರುವ ಈ ಡಾಟಾ ಸೆಂಟರ್ 100 ಮೆಗಾ ವ್ಯಾಟ್ ಐಟಿ ಲೋಡ್ ಸಾಮರ್ಥ್ಯ ಹೊಂದಿರುತ್ತದೆ. ಈ ಡಾಟಾ ಸೆಂಟರ್ ನಿರ್ಮಾಣವಾದ ಬಳಿಕ ಭಾರತದಾದ್ಯಂತ ನಾಲ್ಕೈದು ನೋಡ್​ಗಳಲ್ಲಿ ಮೆಟಾ ಕಾರ್ಯಾಚರಿಸಬಹುದು. ಇದರಿಂದ ಡಾಟಾ ಪ್ರೋಸಸಿಂಗ್ ಬಹಳ ವೇಗವಾಗಿ ಆಗುತ್ತದೆ. ಟ್ರಾನ್ಸ್​ಮಿಶನ್ ವೆಚ್ಚ ಕೂಡ ಕಡಿಮೆ ಆಗುತ್ತದೆ.

ಸಿಂಗಾಪುರ ಬದಲು ಚೆನ್ನೈ

ಸದ್ಯ ಮೆಟಾದ ಭಾರತೀಯ ಬಳಕೆದಾರರ ದತ್ತಾಂಶವು ಸಿಂಗಾಪುರದಲ್ಲಿರುವ ಡಾಟಾ ಸೆಂಟರ್​ಗೆ ಹೋಗುತ್ತಿದೆ. ಈಗ ಚೆನ್ನೈನಲ್ಲಿರುವ ಡಾಟಾ ಸೆಂಟರ್​ನಲ್ಲೇ ಎಲ್ಲವೂ ಪ್ರೋಸಸ್ ಆಗಲಿದೆ. ಈ ಎಂಎಎ10 ಡಾಟಾ ಸೆಂಟರ್ ಕ್ಯಾಂಪಸ್ ಎಐ ಲ್ಯಾಂಗ್ವೇಜ್ ಮಾಡಲ್ ತಂತ್ರಜ್ಞಾನಗಳಿಗೆ ಸಂಬದ್ಧವಾಗಿರುತ್ತದೆ.

ಭಾರತದಲ್ಲಿ ನಿರ್ಮಾಣ ಆಗುತ್ತಿವೆ ಹೆಚ್ಚೆಚ್ಚು ಡಾಟಾ ಸೆಂಟರ್ಸ್

ಭಾರತದಲ್ಲಿ ಇದೇ ವೇಳೆ ಮುಂದಿನ ಮೂರು ವರ್ಷದಲ್ಲಿ ಡಾಟಾ ಸೆಂಟರ್ ಉದ್ಯಮ ಮೂರು ಪಟ್ಟು ಬೆಳೆಯುವ ನಿರೀಕ್ಷೆ ಇದೆ. ಜಾಗತಿಕ ದತ್ತಾಂಶ ರಚನೆಯಲ್ಲಿ ಭಾರತದ ಪಾಲು ಶೇ. 20ರಷ್ಟಿದ್ದರೂ ಡಾಟಾ ಸೆಂಟರ್ ಸಾಮರ್ಥ್ಯದಲ್ಲಿ ಭಾರತದ ಪಾಲು ಶೇ. 3 ಮಾತ್ರವೇ. ದೊಡ್ಡ ಟೆಕ್ ಕಂಪನಿಗಳು ಈಗ ಭಾರತದಲ್ಲೇ ಡಾಟಾ ಸೆಂಟರ್ ನಿರ್ಮಿಸಲು ಮುಂದಾಗಿವೆ. ಮೆಟಾ ರೀತಿಯಲ್ಲಿ ಗೂಗಲ್ ಕೂಡ ನವಿ ಮುಂಬೈನಲ್ಲಿ 22.5 ಎಕರೆ ಜಾಗದಲ್ಲಿ ಕ್ಯಾಪ್ಟಿವ್ ಡಾಟಾ ಸೆಂಟರ್ ನಿರ್ಮಿಸಲು ಯೋಜಿಸಿದೆ.

ಇದನ್ನೂ ಓದಿ: ವಂಚಕ ಲೋನ್ ಆ್ಯಪ್​ಗಳ ಉಪಟಳ ನಿಗ್ರಹಕ್ಕೆ ಸರ್ಕಾರ ತರುತ್ತಿದೆ ಡಿಜಿಟಾ ಅಸ್ತ್ರ

ಡಾಟಾ ಸೆಂಟರ್​ಗೂ ಸರ್ವರ್​ಗೂ ಏನು ವ್ಯತ್ಯಾಸ?

ಒಂದು ಸರ್ವರ್​ನಲ್ಲಿ ಒಂದು ಆ್ಯಪ್​ನ ದತ್ತಾಂಶ ಸಂಗ್ರಹಕ್ಕೆ ಅನುಮತಿ ಇರುತ್ತದೆ. ಸರ್ವರ್​ಗಳು ಡಾಟಾ ಸೆಂಟರ್​ನ ಒಂದು ಭಾಗವಾಗಿರುತ್ತವೆ. ಒಂದು ಡಾಟಾ ಸೆಂಟರ್​ನಲ್ಲಿ ಸರ್ವರ್​ಗಳಲ್ಲದೇ ಡಾಟಾ ಸ್ಟೋರೇಜ್ ಡ್ರೈವ್ಗಳು, ನೆಟ್ವರ್ಕ್ ಉಪಕರಗಳು ಇತ್ಯಾದಿ ಐಟಿ ಸಿಸ್ಟಂಗಳಿಗೆ ಬೇಕಿರುವ ಕಂಪ್ಯೂಟಿಂಗ್ ಇನ್​ಫ್ರಾಸ್ಟ್ರಕ್ಚರ್ ಇರುತ್ತದೆ. ಅಂದರೆ ಡಾಟಾ ಸೆಂಟರ್​ನಲ್ಲಿ ಒಂದಕ್ಕಿಂತ ಹೆಚ್ಚು ಸರ್ವರ್​ಗಳನ್ನು ಇರಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ