ತಾತನ 30 ವರ್ಷ ಹಿಂದಿನ ಎಸ್ಬಿಐ ಷೇರು ಸರ್ಟಿಫಿಕೇಟ್ ಅಚಾನಕ್ಕಾಗಿ ಸಿಕ್ಕಿದಾಗ… ಈಗೆಷ್ಟಿದೆ ನೋಡಿ ಅದರ ಮೌಲ್ಯ
SBI shares of Rs 500 In 1994: ಡಾ. ತನ್ಮಯ್ ಮೋತಿವಾಲ ಎಂಬ ವ್ಯಕ್ತಿಯೊಬ್ಬರು ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ತಮ್ಮ ತಾತನ 30 ವರ್ಷದ ಹಿಂದಿನ ಎಸ್ಬಿಐ ಷೇರು ಸರ್ಟಿಫಿಕೇಟ್ ಸಿಕ್ಕಿದ ವಿಚಾರವನ್ನು ಹಂಚಿಕೊಂಡಿದ್ದಾರೆ. ಎಸ್ಬಿಐ ಷೇರು ಮಾರುಕಟ್ಟೆಗೆ ಪ್ರವೇಶ ಮಾಡಿದ ಒಂದು ವರ್ಷ ನಂತರ ತನ್ಮಯ್ ಅವರ ತಾತ 500 ರೂ ಮೌಲ್ಯದ ಎಸ್ಬಿಐ ಷೇರುಗಳನ್ನು ಖರೀದಿಸಿದ್ದರು. ಅದರ ಷೇರು ಸರ್ಟಿಫಿಕೇಟ್ ತೆಗೆದುಕೊಂಡ ಬಳಿಕ ಮರೆತೇ ಹೋಗಿದ್ದರು. ಈಗ ಮೊಮ್ಮಗನಿಗೆ ಅದು ಸಿಕ್ಕಿದೆ. ಈ 500 ರೂ ಷೇರುಗಳ ಮೌಲ್ಯ ಈಗ 3.76 ಲಕ್ಷ ರೂ ಆಗಿದೆ ಎಂದು ತನ್ಮಯ್ ಹೇಳಿಕೊಂಡಿದ್ದಾರೆ.
ನವದೆಹಲಿ, ಏಪ್ರಿಲ್ 2: ಹಿಂದೆ ಕ್ರಿಪ್ಟೋಕರೆನ್ಸಿ ಇನ್ನೂ ಹೊಸದಾಗಿರುವಾಗ ಕೆಲವರು ಬಿಟ್ಕಾಯಿನ್ಗಳನ್ನು ಖರೀದಿಸಿ ಹಾಗೇ ಬಿಟ್ಟಿದ್ದರು. ಆಗ ಬಹಳ ಕಡಿಮೆ ಬೆಲೆ. ಆದರೆ, ಆರೇಳು ವರ್ಷಗಳ ಹಿಂದೆ ಕ್ರಿಪ್ಟೋ ಜಗತ್ತು ತೆರೆದುಕೊಂಡಿತು. ಆರಂಭದಲ್ಲಿ ಬಿಟ್ಕಾಯಿನ್ ಪಡೆದಿದ್ದವರು ದಿಢೀರ್ ಲಕ್ಷಾಧಿಪತಿ, ಕೋಟ್ಯಾಧಿಪತಿಗಳಾಗಿ ಹೋದರು. ಬಹಳಷ್ಟು ಷೇರು ಸಂಪತ್ತು ಕೂಡ ಹೀಗೆ ಹೆಚ್ಚುವುದುಂಟು. ಚಂಡೀಗಡದ ವೈದ್ಯರೊಬ್ಬರು ತಮ್ಮ ಅಜ್ಜ ಮತ್ತು ಅಜ್ಜಿಗೆ (grandparents) ಸೇರಿದ್ದ 500 ರೂ ಮೌಲ್ಯದ ಎಸ್ಬಿಐ ಷೇರುಗಳ ಸರ್ಟಿಫಿಕೇಟ್ (share certificate) ಸಿಕ್ಕಿದ್ದು, ಮತ್ತು ಅದರ ಈಗಿನ ಮೌಲ್ಯದ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪೀಡಿಯಾಟ್ರಿಕ್ ಸರ್ಜನ್ ಆಗಿರುವ ಡಾ. ತನ್ಮಯ್ ಮೋತಿವಾಲ (Pediatric Surgeon Dr. Tanmay Motiwala) ಅವರ ಅಜ್ಜ ಮತ್ತು ಅಜ್ಜಿ 1994ರಲ್ಲಿ 500 ರೂ ಮೌಲ್ಯದ ಎಸ್ಬಿಐ ಷೇರುಗಳನ್ನು ಖರೀದಿಸಿದ್ದರು. ಅದರ ಸರ್ಟಿಫಿಕೇಟ್ ಪಡೆದು ಇಟ್ಟುವರು ನಂತರ ಮರೆತೇ ಹೋಗಿದ್ದರು. ತನ್ಮಯ್ ತನ್ನ ಮನೆಯಲ್ಲಿದ್ದ ಹಳೆಯ ವಸ್ತು ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡುವಾಗ ಈ ಷೇರ್ ಸರ್ಟಿಫಿಕೇಟ್ ಕಂಡಿದ್ದಾರೆ.
ಈ ಷೇರುಗಳ ಈಗಿನ ಮೌಲ್ಯ ಎಷ್ಟಿರಬಹುದು ಎಂದು ಎಕ್ಸ್ ಪೋಸ್ಟ್ನಲ್ಲಿ ಒಬ್ಬರು ಕೇಳಿದ್ದಾರೆ. ಡಿವಿಡೆಂಡ್ ಹೊರತುಪಡಿಸಿ ಈಗ ಇದರ ಮೌಲ್ಯ 3.76 ಲಕ್ಷ ರೂ ಆಗುತ್ತದೆ ಎಂದು ಡಾಕ್ಟರ್ ತಿಳಿಸಿದ್ದಾರೆ. ಆದರೆ, ಇದು ಹೆಚ್ಚು ಮೊತ್ತವಲ್ಲವಾದರೂ 30 ವರ್ಷದಲ್ಲಿ 750 ಪಟ್ಟು ಬೆಳೆದಿರುವುದು ದೊಡ್ಡ ಸಂಗತಿಯೇ ಎಂಬುದು ಅವರ ಅನಿಸಿಕೆ.
ಇದನ್ನೂ ಓದಿ: ಷೇರು ಮಾರುಕಟ್ಟೆ ಹೊಸ ದಾಖಲೆ ಮಟ್ಟಕ್ಕೆ; ಯಾಕಿಷ್ಟು ಜೋರಾಗಿದೆ ಈ ಬುಲ್ರನ್? ಮೂರ್ಖರ ದಿನಕ್ಕೆ ಮಾತ್ರ ಸೀಮಿತವಾಗುತ್ತಾ ಈ ಓಟ?
ಈ ಷೇರು ಸರ್ಟಿಫಿಕೇಟ್ ಭೌತಿಕ ರೂಪದಲ್ಲಿದೆ. ಈಗ ಷೇರುಗಳನ್ನು ಡೀಮ್ಯಾಟ್ ಅಕೌಂಟ್ನಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಇಡಲಾಗುತ್ತದೆ. ಡಾ. ತನ್ಮಯ್ ಅವರ ಅಜ್ಜನ ಎಸ್ಬಿಐ ಷೇರು ಭೌತಿಕ ರೂಪದಲ್ಲಿದ್ದು, ಅದನ್ನು ಡೀಮ್ಯಾಟ್ ಅಕೌಂಟ್ಗೆ ವರ್ಗಾಯಿಸಿದ್ದಾರೆ. ಈ ಪ್ರಕ್ರಿಯೆ ಎಷ್ಟು ಕ್ಲಿಷ್ಟಕರ ಎಂಬುದನ್ನೂ ಅವರು ವಿವರಿಸಿದ್ದಾರೆ.
ಅವರು ಮಾಡಿದ ಟ್ವೀಟ್ ಇದು
The power of holding equity 😊
My Grand parents had purchased SBI shares worth 500 Rs in 1994. They had forgotten about it. Infact they had no idea why they purchased it and if they even hold it.
I found some such certificates while consolidating family’s holdings in a… pic.twitter.com/GdO7qAJXXL
— Dr. Tanmay Motiwala (@Least_ordinary) March 28, 2024
ಲಕ್ಷಕ್ಕೆ 50 ಲಕ್ಷ
ತನ್ಮಯ್ ಅವರ ಅಜ್ಜ ಎಸ್ಬಿಐನ ಷೇರು ಖರೀದಿಸಿದ್ದು 1994ರಲ್ಲಿ. ಸ್ಟೇಟ್ ಬ್ಯಾಂಕ್ ಇಂಡಿಯಾ ಷೇರುಮಾರುಕಟ್ಟೆಗೆ ಪ್ರವೇಶ ಮಾಡಿದ್ದು 1993ರಲ್ಲಿ. 1995ರಲ್ಲಿ ಇದರ ಬೆಲೆ 14.39 ರೂನಿಂದ 21.94 ರೂವರೆಗೆ ಇತ್ತು. ಇವತ್ತು ಅದರ ಷೇರುಬೆಲೆ 763 ರೂ ಆಗಿದೆ. ಒಂದು ವೇಳೆ ನೀವು 1995ರಲ್ಲಿ ಎಸ್ಬಿಐ ಷೇರುಗಳ ಮೇಲೆ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ನಿಮ್ಮ ಷೇರುಸಂಪತ್ತು 53 ಲಕ್ಷ ರೂ ಆಗಿರುತ್ತಿತ್ತು. ವರ್ಷಕ್ಕೆ ಶೇ. 12ರಿಂದ 14ರ ದರದಲ್ಲಿ ಎಸ್ಬಿಐ ಷೇರುಬೆಲೆ ಹೆಚ್ಚುತ್ತಾ ಬಂದಿದೆ. ಎಸ್ಬಿಐ ಷೇರು ಮೂರು ದಶಕದಲ್ಲಿ ಅಪ್ಪಟ ಮಲ್ಟಿಬ್ಯಾಗರ್ ಎನಿಸಿದೆ.
ಇದನ್ನೂ ಓದಿ: ಚಿನ್ನ ವರ್ಸಸ್ ಷೇರು, 2023-24ರಲ್ಲಿ ಹೆಚ್ಚು ಲಾಭ ತಂದಿದ್ದು ಯಾವುದು? ಇಂಟ್ರೆಸ್ಟಿಂಗ್ ವಿಷಯ
2020ರ ಸೆಪ್ಟಂಬರ್ನಲ್ಲಿ ಇದರ ಷೇರುಬೆಲೆ ಕೇವಲ 182 ರೂ ಇತ್ತು. ಈ ಸಂದರ್ಭದಲ್ಲಿ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ, ಮೂರು ವರ್ಷದಲ್ಲಿ 4.19 ಲಕ್ಷ ರೂ ಲಾಭ ಮಾಡುತ್ತಿದ್ದರು. ಅಂದರೆ ಕೇವಲ ಮೂರು ವರ್ಷದಲ್ಲಿ ನಾವು ಹಾಕಿದ ಬಂಡವಾಳ ನಾಲ್ಕು ಪಟ್ಟು ಹೆಚ್ಚಾಗಿರುತ್ತಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ