AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನ್ ದೇಶದ ಕರೆನ್ಸಿ 34 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ; ಭಾರತಕ್ಕೆ ಲಾಭವಾ, ನಷ್ಟವಾ?

Japanese Yen Currency Lowest In 30 Years: ಜಪಾನ್​ನ ಯೆನ್ ಕರೆನ್ಸಿ ಡಾಲರ್ ಎದುರು 152ಕ್ಕೆ ಕುಸಿದಿದೆ. 1990ರ ಬಳಿಕ ಯೆನ್ ಕಂಡ ಅತ್ಯಂತ ಕೆಳಮಟ್ಟ ಇದು. ಎರಡು ವರ್ಷದ ಹಿಂದೆ 100 ಯೆನ್​ಗೆ 65 ರೂ ಇದ್ದದ್ದು, ಈಗ 55 ರೂ ಆಗಿದೆ. ಜಪಾನ್​ನಿಂದ ಆಮದು ಮಾಡಿಕೊಳ್ಳುವವರಿಗೆ ಹೆಚ್ಚು ಲಾಭವಾಗಲಿದೆ. ಜಪಾನ್​ನಿಂದ ವಾಹನದ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುವ ಭಾರತೀಯ ಆಟೊಮೊಬೈಲ್ ಕಂಪನಿಗಳಿಗೆ ಅನುಕೂಲವಾಗಲಿದೆ.

ಜಪಾನ್ ದೇಶದ ಕರೆನ್ಸಿ 34 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ; ಭಾರತಕ್ಕೆ ಲಾಭವಾ, ನಷ್ಟವಾ?
ಜಪಾನ್ ಯೆನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 02, 2024 | 6:14 PM

Share

ನವದೆಹಲಿ, ಏಪ್ರಿಲ್ 2: ಜಪಾನ್ ದೇಶದ ಕರೆನ್ಸಿಯಾದ ಯೆನ್ (Yen currency) ದಿನೇ ದಿನೇ ಕುಸಿಯುತ್ತಾ ಬಂದಿದ್ದು, ಇದೀಗ ಕಳೆದ 34 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. 1990ರ ನಂತರ ಯೆನ್ ಮೌಲ್ಯ ಅತ್ಯಂತ ಕೆಳಗೆ ಇಳಿದಿದೆ. ತಜ್ಞರ ಪ್ರಕಾರ ಯೆನ್ ಮೌಲ್ಯ ಕುಸಿದಿರುವುದು ಭಾರತದ ವಾಹನ ಉದ್ಯಮಕ್ಕೆ ಲಾಭವಾಗಲಿದೆ. ಅದರಲ್ಲೂ ಜಪಾನ್​ನಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವ ಕಂಪನಿಗಳಿಗೆ ಅನುಕೂಲವಾಗಲಿದೆ. ಭಾರತದ ವಾಹನ ಉದ್ಯಮವು (Indian auto sector) ಜಪಾನ್​ನಿಂದ ಬಿಡಿಭಾಗ ಮತ್ತಿತರ ವಸ್ತುಗಳನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತವೆ. ಪರಿಣಾಮವಾಗಿ ಕೆಲ ಆಟೊಮೊಬೈಲ್ ಷೇರುಗಳೂ ಕೂಡ ಬೇಡಿಕೆ ಪಡೆಯುವ ನಿರೀಕ್ಷೆ ಇದೆ.

2022-23ರ ಹಣಕಾಸು ವರ್ಷದಲ್ಲಿ ಜಪಾನ್ ದೇಶದಿಂದ ಭಾರತಕ್ಕೆ 16.49 ಬಿಲಿಯನ್ ಡಾಲರ್​ನಷ್ಟು ಮೌಲ್ಯದ ವಸ್ತುಗಳು ಆಮದಾಗಿತ್ತು. ಅಮೂಲ್ಯ ಲೋಹ ಸಂಯುಕ್ತಗಳು, ವಾಹನ ಬಿಡಿಭಾಗಗಳು, ರೀಫೈನ್ಡ್ ಕಾಪರ್ ಅನ್ನು ಜಪಾನ್​ನಿಂದ ಭಾರತ ಹೆಚ್ಚಾಗಿ ರಫ್ತು ಮಾಡಿಕೊಳ್ಳುತ್ತದೆ. ನ್ಯೂಕ್ಲಿಯಾರ್ ರಿಯಾಕ್ಟರ್ಸ್, ವಿದ್ಯುತ್ ಯಂತ್ರೋಪಕರಣಗಳು, ಕಬ್ಬಿಣ, ಉಕ್ಕು, ಪ್ಲಾಸ್ಟಿಕ್ ಆರ್ಟಿಕಲ್, ಇನಾರ್ಗ್ಯಾನಿಕ್ ಕೆಮಿಕಲ್ ಮೊದಲಾದವನ್ನೂ ಜಪಾನ್ ಭಾರತಕ್ಕೆ ಸರಬರಾಜು ಮಾಡುತ್ತದೆ. ಈ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಭಾರತೀಯ ಸಂಸ್ಥೆಗಳಿಗೆ ಈಗ ಯೆನ್ ಬೆಲೆ ಕುಸಿದಿರುವುದು ಲಾಭ ಆಗುತ್ತದೆ.

ಎರಡು ವರ್ಷದ ಹಿಂದೆ 100 ಯೆನ್​ಗೆ 65 ರೂ ಇತ್ತು. ಈಗ 100 ಯೆನ್​ಗೆ 55 ರುಪಾಯಿ ಆಗಿದೆ. ಒಂದು ಡಾಲರ್​ಗೆ ಈಗ 151.975 ಯೆನ್ ಆಗಿದೆ. ಅಂದರೆ, ಕಡಿಮೆ ಬೆಲೆಗೆ ಹೆಚ್ಚು ಮೊತ್ತದ ಸರಕನ್ನು ಜಪಾನ್​ನಿಂದ ಆಮದು ಮಾಡಿಕೊಳ್ಳಬಹುದು. ಇದು ಕೆಲ ಭಾರತೀಯ ಉದ್ದಿಮೆಗಳಿಗೆ ಅನುಕೂಲವಾಗುತ್ತದೆ. ಒಟ್ಟಾರೆ ಆರ್ಥಿಕತೆಗೂ ಲಾಭವಾಗಬಹುದು.

ಇದನ್ನೂ ಓದಿ: ಫೇಸ್​ಬುಕ್, ಇನ್ಸ್​ಟಾದ ನಿಮ್ಮ ಪೋಸ್ಟ್​ಗಳು ವಿದೇಶೀ ಸರ್ವರ್​ಗೆ ಹೋಗಲ್ಲ; ಭಾರತದಲ್ಲೇ ನಿರ್ಮಾಣವಾಗಿದೆ ಡಾಟಾ ಸೆಂಟರ್

ಜಪಾನ್ ಕಂಪನಿಗಳ ಜೊತೆ ಸಹಯೋಗ ಹೊಂದಿರುವ ಅಥವಾ ಅಂಗಸಂಸ್ಥೆಗಳಾಗಿರುವ ಮಾರುತಿ ಸುಜುಕಿ, ಮದರ್​ಸನ್ ಸುಮಿ, ಶಾರ್ಪ್ ಮೊದಲಾದ ಕಂಪನಿಗಳತ್ತ ಒಂದು ಚಿತ್ತ ಇಡಬಹುದು. ಈ ಕಂಪನಿಗಳಿಗೆ ಜಪಾನ್​ನಿಂದ ಹೆಚ್ಚು ವಸ್ತುಗಳು ಸರಬರಾಜಾಗುತ್ತವೆ. ಹೀಗಾಗಿ, ಈ ಕಂಪನಿಗಳ ಲಾಭದ ಮಾರ್ಜಿನ್ ಹೆಚ್ಚಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Tue, 2 April 24

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ