ಒಪ್ಪೋ ಕಂಪನಿಯ ರೆನೋ ಸರಣಿ ಸ್ಮಾರ್ಟ್ಫೋನ್ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಈ ಸರಣಿಯಲ್ಲಿ ಮೊಬೈಲ್ ಬಿಡುಗಡೆ ಆಯಿತು ಎಂದಾದರೆ ಅದು ಭರ್ಜರಿ ಸೇಲ್ ಆಗುತ್ತದೆ. ಇದೀಗ ಒಪ್ಪೋ ರೆನೋ ಅಡಿಯಲ್ಲಿ ಹೊಸ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಇದೇ ನವೆಂಬರ್ 23 ರಂದು ಮಾರುಕಟ್ಟೆಗೆ ಒಪ್ಪೋ ರೆನೋ 11 ಸರಣಿಯು (OPPO Reno 11 series ) ಅಪ್ಪಳಿಸಲಿದೆ. ಈ ಬಗ್ಗೆ ಕಂಪನಿ ಅಧಿಕೃತವಾಗಿ ತಿಳಿಸಿದೆ. ಈ ಫೋನ್‌ಗಳು “SLR-ಮಟ್ಟದ ಫೋಟೋವನ್ನು” ಸೆರೆಹಿಡಿಯುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸರಣಿಯಲ್ಲಿ ಎಷ್ಟು ಫೋನಿದೆ?, ಫೀಚರ್ಸ್ ಏನಿರಬಹುದು ಎಂಬುದನ್ನು ನೋಡೋಣ.
ಒಪ್ಪೋ ರೆನೋ 11 ಸರಣಿ ಅಡಿಯಲ್ಲಿ ಒಟ್ಟು ಎರಡು ಸ್ಮಾರ್ಟ್ಫೋನ್ಗಳಿವೆ. ಅದು ಒಪ್ಪೋ ರೆನೋ 11 ಮತ್ತು ಒಪ್ಪೋ ರೆನೋ 11 ಪ್ರೊ ಆಗಿದೆ. ಈ ಎರಡೂ ಫೋನ್‌ಗಳು ನವೆಂಬರ್ 23 ರಂದು ಮಧ್ಯಾಹ್ನ 2:00 CST ಕ್ಕೆ (ಸುಮಾರು 11:30 am IST) ಅನಾವರಣಗೊಳ್ಳಲಿದೆ.
ಒಪ್ಪೋ ರೆನೋ 11 ಸರಣಿ 4 ಬಣ್ಣಗಳಲ್ಲಿ ಬರುವ ಸಾಧ್ಯತೆ ಇದೆ. ಇದು ಫ್ಲೋರೈಟ್ ಬ್ಲೂ, ಮೂನ್‌ಸ್ಟೋನ್ ವೈಟ್, ವೈಡೂರ್ಯ ಮತ್ತು ಅಬ್ಸಿಡಿಯನ್ ಕಪ್ಪು ಬಣ್ಣಗಳಿಂದ ಕೂಡಿದೆ. 11 ಪ್ರೊ ಇದರಲ್ಲಿ ಹಿಂಬದಿಯ ಕ್ಯಾಮೆರಾಗಳು 50MP Sony LYT-700 ಪ್ರಾಥಮಿಕ ಸಂವೇದಕ (OIS ಜೊತೆಗೆ), 8MP ಅಲ್ಟ್ರಾವೈಡ್ ಸ್ನ್ಯಾಪರ್ ಮತ್ತು 2x ಜೂಮ್ ಲೆನ್ಸ್‌ನೊಂದಿಗೆ 32MP IMX709 ಟೆಲಿಫೋಟೋ ಸಂವೇದಕವನ್ನು ಒಳಗೊಂಡಿರುತ್ತದೆ. ರೆನೋ 11 ಕೂಡ ಇದೇ ಸಂವೇದಕಗಳನ್ನು ಹೊಂದಿದೆ ಎಂಬ ವದಂತಿಗಳಿವೆ. ಆದರೆ ಪ್ರಾಥಮಿಕ ಕ್ಯಾಮೆರಾ ಸೋನಿ LYT-600 ಸಂವೇದಕವಾಗಿರಬಹುದು.
Tech Tips: ನೀವು ಹಳೆಯ ಸ್ಮಾರ್ಟ್ಫೋನ್ ಸೇಲ್ ಮಾಡುತ್ತೀರಿ ಎಂದಾದರೆ ಈ ವಿಚಾರ ತಿಳಿದಿರಲಿ
ರೆನೋ 11 ಪ್ರೊ ಮುಂಭಾಗದಲ್ಲಿ ಪಂಚ್ ಹೋಲ್ ಕಟೌಟ್, 1.5 ಕೆ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು 2160Hz PWM ದರದೊಂದಿಗೆ OLED ಸ್ಕ್ರೀನ್ ನೀಡಲಾಗಿದೆಯಂರೆ. ಸ್ಟ್ಯಾಂಡರ್ಡ್ ಒಪ್ಪೋ ರೆನೋ 11 ಮಾದರಿಯ ಡಿಸ್ಪ್ಲೇ ಸ್ಪೆಕ್ಸ್ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಒಪ್ಪೋ ರೆನೋ 11 ಪ್ರೊ ಸ್ನಾಪ್ಡ್ರಾಗನ್ 8+ Gen 1 ಚಿಪ್‌ಸೆಟ್‌ನಿಂದ ರನ್ ಆಗುತ್ತದೆ. ಅತ್ತ ಒಪ್ಪೋ ರೆನೋ 11 ನಲ್ಲಿ ಡೈಮೆನ್ಸಿಟಿ 8200 ಪ್ರೊಸೆಸರ್ ಇರಬಹುದು.
ಒಪ್ಪೋ ರೆನೋ 11 67W ಚಾರ್ಜಿಂಗ್ ವೇಗದೊಂದಿಗೆ 4,800mAh ಬ್ಯಾಟರಿಯನ್ನು ಹೊಂದಿದೆ. ಒಪ್ಪೋ ರೆನೋ ಪ್ರೊ 80W ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 4,700mAh ಬ್ಯಾಟರಿಯನ್ನು ಹೊಂದಿರಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ