Kannada News Technology Oppo has launched its Oppo Reno 8 series smartphones Oppo Reno 8 the Oppo Reno 8 Pro and the Reno 8 Pro+
Oppo Reno 8 Series: ಒಪ್ಪೋ ರೆನೋ 8 ಸರಣಿಯ ಮೂರೂ ಫೋನ್ಗೆ ಕ್ಯಾಮೆರಾ ಪ್ರಿಯರು ಕ್ಲೀನ್ ಬೌಲ್ಡ್: ಬೆಲೆ ಎಷ್ಟು?
Oppo Reno 8, the Oppo Reno 8 Pro, Reno 8 Pro+: ಇದರಲ್ಲಿ ಆಕರ್ಷಕ ಕ್ಯಾಮೆರಾ ನೀಡಲಾಗಿದ್ದು ಟೆಕ್ ಪ್ರಿಯರಂತು ಫುಲ್ ಫಿದಾ ಆಗಿದ್ದಾರೆ. ಈ ಸರಣಿ ಅಡಿಯಲ್ಲಿ ಒಟ್ಟು ಮೂರು ಫೋನ್ಗಳನ್ನು ರಿಲೀಸ್ ಮಾಡಲಾಗಿದೆ. ಅದು ಒಪ್ಪೋ ರೆನೋ 8, ರೆನೋ 8 ಪ್ರೊ, ಮತ್ತು ಒಪ್ಪೋ ರೆನೋ 8 ಪ್ರೊ+ (Oppo Reno 8, the Oppo Reno 8 Pro, Reno 8 Pro+) ಆಗಿದೆ.
Oppo Reno 8 Series
Follow us on
ಬಿಡುಗಡೆಗೂ ಮುನ್ನವೇ ಕ್ಯಾಮೆರಾ ಪ್ರಿಯರ ನಿದ್ದೆ ಕೆಡಿಸಿದ್ದ ಒಪ್ಪೋರೆನೋ 8 ಸರಣಿ (Oppo Reno 8 Series) ಇದೀಗ ಅನಾವರಣಗೊಂಡಿದೆ. ಅಂದುಕೊಂಡಂತೆ ಇದರಲ್ಲಿ ಆಕರ್ಷಕ ಕ್ಯಾಮೆರಾ ನೀಡಲಾಗಿದ್ದು ಟೆಕ್ ಪ್ರಿಯರಂತು ಫುಲ್ ಫಿದಾ ಆಗಿದ್ದಾರೆ. ಈ ಸರಣಿ ಅಡಿಯಲ್ಲಿ ಒಟ್ಟು ಮೂರು ಫೋನ್ಗಳನ್ನು ರಿಲೀಸ್ ಮಾಡಲಾಗಿದೆ. ಅದು ಒಪ್ಪೋ ರೆನೋ 8, ರೆನೋ 8 ಪ್ರೊ, ಮತ್ತು ಒಪ್ಪೋ ರೆನೋ 8 ಪ್ರೊ+ (Oppo Reno 8, the Oppo Reno 8 Pro, Reno 8 Pro+) ಆಗಿದೆ. ಈ ಸ್ಮಾರ್ಟ್ಫೋನ್ ಸುಧಾರಿತ ವಿನ್ಯಾಸ, ಅಪ್‌ಡೇಟ್ ಚಾರ್ಜಿಂಗ್ ಸೌಲಭ್ಯಗಳೊಂದಿಗೆ ಕಾಣಿಸಿಕೊಂಡಿವೆ. ವಿಶೇಷ ಎಂದರೆ ಒಪ್ಪೋ ರೆನೋ 8 ಪ್ರೊ ಅತ್ಯಂತ ಬಲಿಷ್ಠವಾದ ಸ್ನ್ಯಾಪ್‌ಡ್ರಾಗನ್ 7 ಜೆನ್ 1 SoC ಹೊಂದಿರುವ ವಿಶ್ವದ ಮೊದಲ ಫೋನ್ ಆಗಿದೆ. ಇದರ ಬೆಲೆ, ಫೀಚರ್ಸ್ ಬಗ್ಗೆ ಮಾಹಿತಿ ಇಲ್ಲಿದೆ.
ಒಪ್ಪೋ ರೆನೋ 8 ಫೋನ್ 6.43 ಇಂಚಿನ ಪೂರ್ಣ HD+ AMOLED ಡಿಸ್ ಪ್ಲೇ ಮತ್ತು 90Hz ಸ್ಕ್ರೀನ್ ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದು 800 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್ ಹೊಂದಿದೆ ಮತ್ತು ಪರದೆಯು ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲ್ಪಟ್ಟಿದೆ.
ಮೀಡಿಯಾ ಟೆಕ್‌ನಿಂದ ಡೈಮೆನ್ಸಿಟಿ 1300 SoC ನಿಂದ ಫೋನ್ ಚಾಲಿತವಾಗಿದೆ. ಹಾಗೆಯೇ ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದ್ದು, 32 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.
ಸೂಪರ್ ಫ್ಲ್ಯಾಶ್ ಚಾರ್ಜಿಂಗ್‌ನಿಂದ ಬೆಂಬಲಿತವಾದ 4500mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಜೊತೆಗೆ ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ವೈ-ಫೈ 6, ಬ್ಲೂಟೂತ್ 5.2, ಎನ್‌ಎಫ್‌ಸಿ, ಟೈಪ್-ಸಿ ಪೋರ್ಟ್ ಸೌಲಭ್ಯ ಪಡೆದಿದೆ.
ಇನ್ನು ಒಪ್ಪೋ ರೆನೋ 8 ಪ್ರೊ ಪ್ಲಸ್ ಫೋನ್ 2412 × 1080 ಪಿಕ್ಸೆಲ್‌ಗಳೊಂದಿಗೆ 120Hz 6.7 ಇಂಚಿನ ಪೂರ್ಣ HD+ AMOLED ಡಿಸ್ ಪ್ಲೇ, 93.4% ಸ್ಕ್ರೀನ್ ಟು ಬಾಡಿ ಅನುಪಾತ, 360Hz ಸ್ಪರ್ಶ ಮಾದರಿ ದರ, 100% DCI-P3, ಮತ್ತು 950nits ಗರಿಷ್ಠ ಹೊಳಪನ್ನು ಹೊಂದಿದೆ.
ಇದನ್ನೂ ಓದಿ
ಇದು ಡೈಮೆನ್ಸಿಟಿ 8100 ಮ್ಯಾಕ್ಸ್ SoC ನಿಂದ ಚಾಲಿತವಾಗಿದೆ. ಅಲ್ಲದೇ ಈ ಫೋನ್ 12GB RAM ಮತ್ತು 256GB UFS3.1 ಸಂಗ್ರಹಣೆಯನ್ನು ನೀಡುತ್ತದೆ. ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದ್ದು, 32 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಇದರೊಂದಿಗೆ ಸೂಪರ್ ಫ್ಲ್ಯಾಶ್ ಚಾರ್ಜಿಂಗ್‌ನಿಂದ ಬೆಂಬಲಿತವಾದ 4500mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ.
ಒಪ್ಪೋ ರೆನೋ 8 ಪ್ರೊ ಈ ಫೋನ್ 2400 × 1080 ಪಿಕ್ಸೆಲ್‌ಗಳೊಂದಿಗೆ 120Hz 6.62 ಇಂಚಿನ ಪೂರ್ಣ HD+ AMOLED ಡಿಸ್ ಪ್ಲೇ ಮತ್ತು 92% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಹೊಂದಿದೆ.
ಇದು 2.4GHz ವರೆಗಿನ ಗಡಿಯಾರದ ವೇಗದೊಂದಿಗೆ ಸ್ನ್ಯಾಪ್‌ಡ್ರಾಗನ್ 7 ಜೆನ್ 1 SoC ನಿಂದ ಚಾಲಿತವಾಗಿದೆ. ಇದು 12GB RAM ಮತ್ತು 256GB UFS 2.2 ಸಂಗ್ರಹಣೆಯೊಂದಿಗೆ ಬರುತ್ತದೆ.
ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದ್ದು, 32 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಇದರೊಂದಿಗೆ ಸೂಪರ್ ಫ್ಲ್ಯಾಶ್ ಚಾರ್ಜಿಂಗ್‌ನಿಂದ ಬೆಂಬಲಿತವಾದ 4500mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ.
ಒಪ್ಪೋ ರೆನೋ 8 ಬೆಲೆ CNY 2499 (ಭಾರತದಲ್ಲಿ ಅಂದಾಜು 29,100ರೂ) ಆಗಿದೆ. ಅಂತೆಯೆ ಒಪ್ಪೋ ರೆನೋ 8 ಪ್ರೊ ಪ್ಲಸ್ CNY 3699 (ಭಾರತದಲ್ಲಿ ಅಂದಾಜು 43,100ರೂ), ಒಪ್ಪೋ ರೆನೋ 8 ಪ್ರೊ CNY 2999 (ಭಾರತದಲ್ಲಿ ಅಂದಾಜು 35,000ರೂ). ಈ ಫೋನ್‌ಗಳು ಕೆಲವೇ ತಿಂಗಳುಗಳಲ್ಲಿ ಭಾರತಕ್ಕೂ ಕಾಲಿಡಲಿದೆ.