ಈಗ ದೇಶದೆಲ್ಲಡೆ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಕೊರೊನಾ ವೈರಸ್ (Corona Virus) ಬಂದ ಮೇಲೆ ದೇಶದಲ್ಲಿ ಹೆಚ್ಚಿನ ವ್ಯವಹಾರಗಳು ಆನ್ಲೈನ್ ಮೂಲಕವೇ ನಡೆಯುತ್ತಿದೆ. ಹಣ ಪಾವತಿಗಳಿಗಾಗಿ ಜನರು ಡಿಜಿಟಲ್ (Digital) ವ್ಯವಸ್ಥೆಯನ್ನೇ ಅವಲಂಬಿಸುತ್ತಿದ್ದಾರೆ. ಇದೇ ಕಾರಣಕ್ಕೆ ಮೊಬೈಲ್ ವ್ಯಾಲೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ (PhonePe), ಗೂಗಲ್ ಪೇ, ಪೇಟಿಎಂ ನಂತಹ ಆ್ಯಪ್‌ಗಳು ನೀಡುತ್ತಿವೆ. ಇದರಲ್ಲಿ ಫೋನ್ ಪೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.
ಫೋನ್ ಪೇಯಲ್ಲಿ ಯುಪಿಐ ಪಿನ್ ಬದಲಾಯಿಸುವುದು ಹೇಗೆ? ವಹಿವಾಟು ಮಿತಿ ಹೆಚ್ಚಿಸುವುದು ಹೇಗೆ? ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ನಿಮ್ಮ ಫೋನ್‌ಗಳನ್ನು ರೀಚಾರ್ಜ್ ಮಾಡಲು, ಬಿಲ್‌ಗಳನ್ನು ಪಾವತಿಸಲು, ಡಿಟಿಎಚ್ ಕನೆಕ್ಟಿವಿಟಿ ಮತ್ತು ಫುಡ್ ಆರ್ಡರ್ ಸೇರಿದಂತೆ ಇತರೆ ವಿಷಯಗಳಲ್ಲಿ ಫೋನ್ ಪೇ ನಿಮಗೆ ಅನುಮತಿಸುತ್ತದೆ. ಇನ್ನು ಫೋನ್‌ಪೇಯನ್ನು ಹೊಂದಿರುವ ಬಳಕೆದಾರರು ತಮ್ಮದೇ ಆದ ಪಾಸ್‌ವರ್ಡ್ ಅನ್ನು ಕ್ರಿಯೆಟ್ ಮಾಡಬೇಕಿರುತ್ತದೆ. ಆದರೆ ಈ ಪಾಸ್‌ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಒಂದು ವೇಳೆ ನಿಮ್ಮ ಪಾಸ್‌ವರ್ಡ್ ಮರೆತು ಹೋಗಿದ್ದರೆ ನೀವು ನಿಮ್ಮ ಯುಪಿಐ ಪಿನ್ ಅನ್ನು ಬದಲಾಯಿಸಬೇಕಾಗುತ್ತದೆ.
ನಿಮ್ಮ ಪಿನ್ ಬದಲಾಯಿಸುವುದು ಹೇಗೆ?:
ಫೋನ್‌ಪೇಯಲ್ಲಿ ಯುಪಿಐ ಪಿನ್ ಅನ್ನು ಬದಲಾಯಿಸಲು ಮೊದಲು ನೀವು ಪೋನ್‌ಪೇ ಡಿಸ್‌ಪ್ಲೇ ಮೇಲೆ ಬಲ ಮೂಲೆಯಲ್ಲಿ ಇರುವ ಮೆನುವನ್ನು ತೆರೆಯಬೇಕು. ನಂತರ ನೀವು ಬ್ಯಾಂಕ್ ಅಕೌಂಟ್ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು, ಈಗ ವ್ಯಾಲೆಟ್ ಜೊತೆಗೆ ಕನೆಕ್ಟ್ ಆಗಿರುವ ಬ್ಯಾಂಕ್ ಖಾತೆಗಳನ್ನು ಕಾಣಬಹುದು. ನಂತರ, ನೀವು ಪಿನ್ ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆಯನ್ನು ನೀವು ಆರಿಸಬೇಕಾಗುತ್ತದೆ. ಈ ಸಂದರ್ಭ ಪಾಸ್‌ವರ್ಡ್ ಬದಲಾಯಿಸಲು ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ, ಅಲ್ಲದೆ ಅಲ್ಲಿ ರಿಸೆಟ್ ಬಟನ್ ಕಂಡುಬರಲಿದೆ.
ನೀವು ರಿಸೆಟ್ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಕೊನೆಯ ಅಂಕಿಗಳನ್ನು ನಮೂದಿಸಬೇಕು. ಜೊತೆಗೆ ವ್ಯಾಲಿಡಿಟಿ ಡೇಟ್ ಅನ್ನು ಸಹ ನಮೂದಿಸಬೇಕು. ಇದೀಗ ನಿಮ್ಮ ಬ್ಯಾಂಕಿನಿಂದ ನಿಮ್ಮ ಫೋನ್ ನಂಬರ್‌ಗೆ OTP ನಂಬರ್ ಬರಲಿದೆ ನಂತರ ನೀವು ಹೊಸ ಪಿನ್ ಜೊತೆಗೆ ಒಟಿಪಿಯನ್ನು ನಮೂದಿಸಬೇಕು. ಹೀಗೆ ಹಂತಹಂತವಾಗಿ ಮಾಹಿತಿಯನ್ನು ಅನುಸರಿಸುವ ಮೂಲಕ ನಿಮ್ಮ ಫೋನ್‌ಪೇ ಯುಪಿಐ ಪಿನ್ ಅನ್ನು ನೀವು ಯಶಸ್ವಿಯಾಗಿ ಬದಲಾಯಿಸಬಹುದಾಗಿದೆ.