VLC Player: ಭಾರತದಲ್ಲಿ ವಿಎಲ್ಸಿ ಮೀಡಿಯಾ ಪ್ಲೇಯರ್ ಬ್ಯಾನ್: ವೆಬ್ಸೈಟ್, ಡೌನ್ಲೋಡ್ ಲಿಂಕ್ ನಿರ್ಬಂಧ
ಸುಮಾರು 2 ತಿಂಗಳ ಹಿಂದೆ ಭಾರತದಲ್ಲಿ ವಿಎಲ್ಸಿ ಮೀಡಿಯಾ ಪ್ಲೇಯರ್ ನಿರ್ಬಂಧಿಸಲಾಗಿದೆ. ನಿಷೇಧದ ಬಗ್ಗೆ ಕಂಪನಿ ಅಥವಾ ಭಾರತ ಸರ್ಕಾರ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.
ಭಾರತದಲ್ಲಿ ಸಾಕಷ್ಟು ಬಳಕೆದಾರರನ್ನು ಹೊಂದಿದ್ದ ಪ್ರಸಿದ್ಧ ಮೀಡಿಯಾ ಪ್ಲೇಯರ್ ವಿಎಲ್ಸಿ (VLC) ದೇಶದಲ್ಲಿ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ. VideoLAN ಯೋಜನೆಯಿಂದ ಅಭಿವೃದ್ಧಿಪಡಿಸಲಾದ ಅತ್ಯಂತ ಜನಪ್ರಿಯ ಮೀಡಿಯಾ ಪ್ಲೇಯರ್ ಸಾಫ್ಟ್‌ವೇರ್ ಮತ್ತು ಸ್ಟ್ರೀಮಿಂಗ್ ಮೀಡಿಯಾ ಸರ್ವರ್ ವಿಎಲ್ಸಿ ಮೀಡಿಯಾ ಪ್ಲೇಯರ್ ಇನ್ನು ಮುಂದೆ ಭಾರತದಲ್ಲಿ ಬಳಕೆಗೆ ಲಭ್ಯವಿರುವುದಿಲ್ಲ ಎಂದು ಹೇಳಲಾಗಿದೆ. ಆದರೆ ಆ್ಯಪಲ್ ಆ್ಯಪ್ (Apple App) ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ನಲ್ಲಿ ವಿಎಲ್ ಸಿ ಮೀಡಿಯಾ ಪ್ಲೇಯರ್ ಡೌನ್ ಲೋಡ್ಗೆ ಲಭ್ಯವಿದೆ ಎಂದು ವರದಿ ತಿಳಿಸಿದೆ.
ಸುಮಾರು 2 ತಿಂಗಳ ಹಿಂದೆ ಭಾರತದಲ್ಲಿ ವಿಎಲ್ಸಿ ಮೀಡಿಯಾ ಪ್ಲೇಯರ್ ನಿರ್ಬಂಧಿಸಲಾಗಿದೆ. ನಿಷೇಧದ ಬಗ್ಗೆ ಕಂಪನಿ ಅಥವಾ ಭಾರತ ಸರ್ಕಾರ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅಡಿಯಲ್ಲಿ www.videolan.org ವೆಬ್ ಸೈಟ್ ಅನ್ನು ಭಾರತ ಸರ್ಕಾರ ನಿರ್ಬಂಧಿಸಿರುವುದಾಗಿ ವಿವರಿಸಿದೆ.
ಚೀನಾ ಸರ್ಕಾರದ ರಹಸ್ಯ ಭಾಗವಾಗಿರುವ ಸಿಕಾಡಾ ಎಂಬ ಹೆಸರಿನ ಹ್ಯಾಕರ್ ಗಳ ಗುಂಪು ವಿಎಲ್ಸಿ ಮೀಡಿಯಾ ಪ್ಲೇಯರ್ ಅನ್ನು ಬಳಸಿಕೊಂಡು ಮಾಲ್ವೇರ್ ಮೂಲಕ ಸೈಬರ್ ದಾಳಿ ನಡೆಸುತ್ತಿವೆ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಆರೋಪಿಸಿದ್ದರು. ಆದರೆ ಈ ಕೃತ್ಯದಲ್ಲಿ ಚೀನಾ ಸರ್ಕಾರ ಶಾಮೀಲಾಗಿದೆ ಎಂಬ ಬಗ್ಗೆ ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಪ್ರಸ್ತುತ ಈ ಕಾರಣದಿಂದಾಗಿಯೇ ವಿಎಲ್ಸಿ ಮೀಡಿಯಾ ಪ್ಲೇಯರ್ ವೆಬ್ ಸೈಟ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಈವರೆಗೆ ಚೀನಾದ ಹಲವು ಆ್ಯಪ್ಗಳು ಭಾರತದಲ್ಲಿ ಬ್ಯಾನ್ ಆಗಿವೆ. ಭಾರತದಲ್ಲಿ ಜನಪ್ರಿಯತೆ ಪಡೆದ ಮತ್ತು ಬಹುಸಂಖ್ಯಾ ಭಾರತೀಯ ಬಳಕೆದಾರರನ್ನು ಹೊಂದಿದ್ದ ಟಿಕ್ ಟಾಕ್ ಇದಕ್ಕೆ ಪ್ರಮುಖ ಉದಾಹರಣೆಯಾಗಿದೆ. ಈ ಎಲ್ಲಾ ಆ್ಯಪ್ಗಳು ಭಾರತೀಯರ ಖಾಸಗಿ ಮಾಹಿಯ ಮೇಲೆ ಕಣ್ಣಿಟ್ಟಿತ್ತು. ಇದೇ ಸಲುವಾಗಿ ಬ್ಯಾನ್ ಮಾಡಲಾಯಿತು. ಆದರೀಗ VLC ಮೀಡಿಯಾ ಪ್ಲೇ ಯರ್ ಕೂಡ ಅದೇ ಸಾಲಿನಲ್ಲಿ ಕಾಣಿಸಲಿದೆ ಎಂದು ಹೇಳಲಾಗುತ್ತಿದೆ. ಆದರೆ VLC ನಿಷೇಧಿಸುವ ಬಗ್ಗೆ ಕಂಪನಿಯಾಗಲೀ ಅಥವಾ ಭಾರತ ಸರ್ಕಾರವಾಗಲೀ ಅಧಿಕೃತವಾಗಿ ಘೋಷಿಸಲಿಲ್ಲ.
Published On - 1:52 pm, Sun, 14 August 22