Google search down: ಗೂಗಲ್ ಸರ್ಚ್ ಇಂಜಿನ್ ಡೌನ್: ಸಾವಿರಾರು ಬಳಕೆದಾರರ ಪರದಾಟ

TV9 Digital Desk

| Edited By: Vinay Bhat

Updated on:Aug 09, 2022 | 10:04 AM

ವಿಶ್ವದ ಅತಿ ದೊಡ್ಡ ಸರ್ಚ್ ಎಂಜಿನ್ ಗೂಗಲ್​ನಲ್ಲಿ ದೋಷ ಕಂಡುಬಂದಿದೆ. ಇದರಿಂದ ಸಾಕಷ್ಟು ಬಳಕೆದಾರರು ತೊಂದರೆ ಅನುಭವಿಸಿದ್ದು 40,000 ಮಂದಿ ವರದಿ ಮಾಡಿದ್ದಾರೆ.

Google search down: ಗೂಗಲ್ ಸರ್ಚ್ ಇಂಜಿನ್ ಡೌನ್: ಸಾವಿರಾರು ಬಳಕೆದಾರರ ಪರದಾಟ
Google

ಮಂಗಳವಾರ ಗೂಗಲ್ ಸರ್ಚ್ ಇಂಜಿನ್ ಡೌನ್ (Google search down) ಆದ ಬಗ್ಗೆ ವರದಿಯಾಗಿದೆ. downdetector.com (ತಾಂತ್ರಿಕ ದೋಷ ಟ್ರ್ಯಾಕ್ ಮಾಡುವ ವೆಬ್​ಸೈಟ್) ಹೇಳಿರುವ ಪ್ರಕಾರ, ವಿಶ್ವದ ಅತಿ ದೊಡ್ಡ ಸರ್ಚ್ ಎಂಜಿನ್ ಗೂಗಲ್​ನಲ್ಲಿ ದೋಷ ಕಂಡುಬಂದಿದೆ. ಇದರಿಂದ ಸಾಕಷ್ಟು ಬಳಕೆದಾರರು ತೊಂದರೆ ಅನುಭವಿಸಿದ್ದು 40,000 ಮಂದಿ ವರದಿ ಮಾಡಿದ್ದಾರೆ ಎಂದು ಹೇಳಿದೆ. ಡೌನ್ಡೆಕ್ಟರ್ ಜಾಲತಾಣವು, ತನ್ನ ಪ್ಲಾಟ್ಫಾರ್ಮ್​​ನಲ್ಲಿ ಬಳಕೆದಾರರು ಸಲ್ಲಿಸಿದ ದೋಷಗಳ ದೂರು ಸೇರಿದಂತೆ ಹಲವಾರು ಮೂಲಗಳಿಂದ ಸ್ಥಿತಿ ವರದಿಗಳನ್ನು ಒಟ್ಟುಗೂಡಿಸುವ ಮೂಲಕ ಟ್ರ್ಯಾಕ್ ಮಾಡುತ್ತದೆ.

”502 ದೋಷ ಕಂಡುಬಂದಿದ್ದು ಸರ್ವರ್ ತಾತ್ಕಾಲಿಕ ತೊಂದರೆ ಎದುರಿಸಿದೆ. ನಿಮ್ಮ ವಿನಂತಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು 30 ಸೆಕೆಂಡುಗಳ ನಂತರ ಮತ್ತೆ ಪ್ರಯತ್ನಿಸಿ”, ಎಂಬ ಸಂದೇಶ ಗೂಗಲ್​ನಲ್ಲಿ ಸರ್ಚ್ ಕೊಟ್ಟಾಗ ಕಾಣಿಸುತ್ತದೆ.

ಇದನ್ನೂ ಓದಿ

ಬಳಕೆದಾರರು ತಮಗೆ ಕಂಡುಬಂದ ದೋಷಗ ಬಗ್ಗೆ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ, ಇದರ ಬಗ್ಗೆ ಗೂಗಲ್ ಇನ್ನೂ ಪ್ರತಿಕ್ರಿಯಿಸಿಲ್ಲ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada