Paytm Down: ಪೇಟಿಯಂ ಡೌನ್: ಆ್ಯಪ್, ವೆಬ್‌ಸೈಟ್ ಬಳಸಲು ಪರದಾಡುತ್ತಿರುವ ಬಳಕೆದಾರರು
ದೇಶಾದ್ಯಂತ ಬಳಕೆದಾರರು Paytm ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಔಟ್ಟೇಜ್ ಡಿಟೆಕ್ಷನ್ ವೆಬ್‌ಸೈಟ್ DownDetector ದೃಢಪಡಿಸಿದೆ. ಬಾಧಿತ ಪ್ರದೇಶಗಳಲ್ಲಿ ಮುಂಬೈ, ದೆಹಲಿ ಮತ್ತು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳು ಸೇರಿವೆ ಎಂದು ಹೇಳಿದೆ.
ಭಾರತೀಯ ಪಾವತಿ ಪ್ಲಾಟ್‌ಫಾರ್ಮ್ ಪೇಟಿಯಂನಲ್ಲಿ (Paytm) ಸಮಸ್ಯೆ ಕಂಡುಬಂದಿದ್ದು ಇಂದು ಕಾರ್ಯಗತಿ ನಿಧಾನವಾಗಿದೆ. ಇದರಿಂದ ಬಳಕೆದಾರರು ಪರದಾಡುತ್ತಿದ್ದು, ಪೇಟಿಯಂನಲ್ಲಿ ಕಂಡುಬಂದ ಸಮಸ್ಯೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿದ್ದಾರೆ. ದೇಶಾದ್ಯಂತ ಬಳಕೆದಾರರು Paytm ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಔಟ್ಟೇಜ್ ಡಿಟೆಕ್ಷನ್ ವೆಬ್‌ಸೈಟ್ DownDetector ದೃಢಪಡಿಸಿದೆ. ಬಾಧಿತ ಪ್ರದೇಶಗಳಲ್ಲಿ ಮುಂಬೈ, ದೆಹಲಿ ಮತ್ತು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳು ಸೇರಿವೆ ಎಂದು ಹೇಳಿದೆ. ಹಲವಾರು ಬಳಕೆದಾರರು ಅಪ್ಲಿಕೇಶನ್ ಅನ್ನು ಪೂರ್ಣ ಕ್ರಿಯಾತ್ಮಕತೆಯಲ್ಲಿ ಬಳಸಲು ಸಾಧ್ಯವಾಗುತ್ತಿಲ್ಲ. ಸ್ಥಗಿತವು ಕೇವಲ ಪಾವತಿಗಳ ಮೇಲೆ ಮಾತ್ರವಲ್ಲದೆ ಇಡೀ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೇಲೂ ಪರಿಣಾಮ ಬೀರಿದ್ದು ಬಳಕೆದಾರರು ಇದ್ದಕ್ಕಿದ್ದಂತೆ ಲಾಗ್ ಔಟ್ (Log Out) ಸಮಸ್ಯೆ ಎದುರಿಸುತ್ತಿದ್ದಾರಂತೆ.
ಇದರ ಬಗ್ಗೆ Paytm ಕೂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದು, ಅಪ್ಲಿಕೇಶನ್‌ನಲ್ಲಿ ‘ನೆಟ್‌ವರ್ಕ್ ದೋಷ‘ ಇದೆ ಎಂದು ಅಧಿಕೃತವಾಗಿ ದೃಢಪಡಿಸುತ್ತೇವೆ. ಮತ್ತು ನಮ್ಮ ತಂಡವು ಸಮಸ್ಯೆಯನ್ನು ಸರಿಪಡಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದೆ.
Due to a network error across Paytm, a few of you might be facing an issue in logging into the Paytm Money App/website. We are already working on fixing the issue at the earliest. We will update you as soon as it is resolved
— Paytm Money (@PaytmMoney) August 5, 2022
ಅನೇಕರಿಗೆ ಪೇಟಿಯಂ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಟ್ವಿಟರ್ನಲ್ಲಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಪಾವತಿಗಳನ್ನು ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಪಾವತಿಗಳನ್ನು ಮಾಡಲು ಪ್ರಯತ್ನಿಸುತ್ತಿರುವ ಬಳಕೆದಾರರು ಸ್ವಯಂಚಾಲಿತವಾಗಿ ಲಾಗ್ ಔಟ್ ಆಗಿದ್ದಾರೆ ಮತ್ತು ಮತ್ತೆ ಲಾಗ್ ಇನ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆಯನ್ನು ಬರೆದುಕೊಂಡಿದ್ದಾರೆ.
ದತ್ತಾಂಶ ಸುಕ್ಷಿತವಾಗಿದೆ:
ಎರಡು ವರ್ಷಗಳ ಹಿಂದೆ ಪೇಟಿಎಂ ದತ್ತಾಂಶಕ್ಕೆ ಕನ್ನ ಹಾಕಲಾಗಿದ್ದು, 34 ಲಕ್ಷ ಬಳಕೆದಾರರ ದತ್ತಾಂಶಗಳು ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಸೈಬರ್ ಭದ್ರತಾ ಕಂಪನಿ ‘ಫೈರ್‌ಫಾಕ್ಸ್ ಮಾನಿಟರ್’ ತಿಳಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ, ಬಳಕೆದಾರರ ದತ್ತಾಂಶ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಪೇಟಿಎಂ ಕಂಪನಿ ತಿಳಿಸಿದೆ. 2020ರಲ್ಲಿ ದತ್ತಾಂಶ ಸೋರಿಕೆಯಾಗಿತ್ತು ಎಂಬ ವರದಿ ಸುಳ್ಳು ಮತ್ತು ಆಧಾರರಹಿತ. ನಮ್ಮ ಬಳಕೆದಾರರ ದತ್ತಾಂಶಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಪೇಟಿಎಂ ಮಾಲ್ ವಕ್ತಾರರು ತಿಳಿಸಿದ್ದಾರೆ.
ಮತ್ತಷ್ಟು ಟೆಕ್ನಾಲಜಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ