ಎರಡು ವರ್ಷಗಳ ಹಿಂದೆ ಅಂದರೆ 2021 ರಲ್ಲಿ ಪಿಂಕ್ ವಾಟ್ಸ್ಆ್ಯಪ್ (Pink WhatsApp) ಎಂಬ ಶಬ್ದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ವಾಟ್ಸ್ಆ್ಯಪ್ ಬಳಕೆದಾರರಿಗೆ ಲಿಂಕ್ವೊಂದು ಬರುತ್ತದೆ. ಇದರಲ್ಲಿ ”ಇದು ವಾಟ್ಸ್ಆ್ಯಪ್ನ ಹೊಸ ಆವೃತ್ತಿ, ಇದರಲ್ಲಿ ಅನೇಕ ವಿಶೇಷ ಫೀಚರ್ಗಳಿವೆ (Features). ಕೂಡಲೇ ಡೌನ್‌ಲೋಡ್ ಮಾಡಿ” ಎಂಬ ಮೆಸೇಜ್ ಕೂಡ ಇರುತ್ತದೆ. ಇದನ್ನು ನಂಬಿ ಕ್ಲಿಕ್ ಮಾಡಿದರೆ ನಿಮ್ಮ ಫೋನ್ಗೆ ವೈರಸ್ ಅಟ್ಯಾಕ್ ಆಗಿ, ಹ್ಯಾಕ್ ಆಗುತ್ತದೆ. ಎರಡು ವರ್ಷಗಳ ಹಿಂದೆ ಈ ಲಿಂಕ್ ತೆರೆದು ಮೋಸ ಹೋದವರು ಅನೇಕರಿದ್ದಾರೆ. ಇದೀಗ ಇದೇ ಪಿಂಕ್ ವಾಟ್ಸ್ಆ್ಯಪ್ ಮತ್ತೆ ಬಂದಿದೆ. ಈ ಬಗ್ಗೆ ಮುಂಬೈ ಪೊಲೀಸರು (Mumbai Police) ನಾಗರಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ವರದಿಯೊಂದರ ಪ್ರಕಾರ, ಹ್ಯಾಕರ್ಗಳು ಸೈಬರ್ ವಂಚನೆಗಾಗಿ ತಮ್ಮ ವೆಬ್‌ನಲ್ಲಿ ವಿವಿಧ ಹೊಸ ತಂತ್ರಗಳೊಂದಿಗೆ ಬಂದಿದ್ದಾರೆ. ಬಳಕೆದಾರರು ಅಂತಹ ವಂಚನೆಗಳ ಬಗ್ಗೆ ಜಾಗೃತರಾಗಿರಬೇಕು, ಜಾಗರೂಕರಾಗಿರಬೇಕು ಮತ್ತು ಗಮನಹರಿಸಬೇಕು. ಡಿಜಿಟಲ್ ಯುಗದಲ್ಲಿಯೂ ಸುರಕ್ಷಿತವಾಗಿರುವುದು ಅವಶ್ಯಕ. ಎಲ್ಲವನ್ನೂ ನೋಡಿದ ತಕ್ಷಣ ಫೋನ್‌ನಲ್ಲಿ ಡೌನ್‌ಲೋಡ್ ಮಾಡಬಾರದು,” ಎಂದು ಪಿಂಕ್ ವಾಟ್ಸ್ಆ್ಯಪ್ ಹಗರಣದ ಕುರಿತು ಎಚ್ಚರಿಕೆ ನೀಡಿದ್ದಾರೆ.
iQoo Neo 7 Pro: ಗೇಮಿಂಗ್ ಪ್ರಿಯರಿಗೆ ಬೆಸ್ಟ್ ಚಾಯ್ಸ್ ಸ್ಮಾರ್ಟ್ಫೋನ್ ಐಕ್ಯೂ ನಿಯೋ
ಮುಂಬೈ ಪೊಲೀಸರ ಪ್ರಕಾರ, ”ಪಿಂಕ್ ವಾಟ್ಸ್ಆ್ಯಪ್ನಲ್ಲಿ ಹಲವು ರೀತಿಯ ವೈಶಿಷ್ಟ್ಯಗಳಿವೆ ಎಂಬ ಸಂದೇಶಗಳೊಂದಿಗೆ ನಕಲಿ ಲಿಂಕ್ವೊಂದು ವಾಟ್ಸ್ಆ್ಯಪ್ಗೆ ಬರುತ್ತಿದೆ. ಇದು ಹೆಚ್ಚಾಗಿ ಗ್ರೂಪ್ಗಳಲ್ಲಿ ಬರುತ್ತಿದ್ದು, ಸಹಜವೆಂಬಂತೇ ಜನರು ಕ್ಲಿಕ್ ಮಾಡಿ ಪೇಚಿಗೆ ಸಿಲುಕುತ್ತಿದ್ದಾರೆ. ಇದು ಫಿಶಿಂಗ್ ಲಿಂಕ್ ಆಗಿದ್ದು, ಬಳಕೆದಾರರು ತಮ್ಮ ಮೊಬೈಲ್ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಮೊಬೈಲ್ ಕೂಡ ಹ್ಯಾಕ್ ಆಗುತ್ತಿದೆ. ಇದರಿಂದಾಗಿ ಎಲ್ಲಾ ಮೊಬೈಲ್ ಡೇಟಾ ಹ್ಯಾಕರ್ಗಳ ಕೈ ಸೇರುತ್ತಿದೆ. ಇದಕ್ಕೆ ನೀವು ಯಾವುದೇ ರೀತಿಯ OTP ಅನ್ನು ಪಡೆಯುವುದಿಲ್ಲ. ವಂಚಕರು ಈ ಮೂಲಕ ಫೋನ್ ಡೇಟಾವನ್ನು ಸುಲಭವಾಗಿ ಪ್ರವೇಶಿಸಬಹುದು. ನಂತರ ನಿಮ್ಮ ವೈಯಕ್ತಿಕ ವಿಡಿಯೋ, ಫೋಟೋ, ಬ್ಯಾಂಕ್ ಖಾತೆ ಎಲ್ಲ ಮಾಹಿತಿ ದೋಚುತ್ತಾರೆ,” ಎಂದು ಹೇಳಿದ್ದಾರೆ.
ನೀವು ಈಗಾಗಲೇ ಪಿಂಕ್ ವಾಟ್ಸ್ಆ್ಯಪ್ ಡೌನ್‌ಲೋಡ್ ಮಾಡಿದ್ದರೆ ಅದನ್ನು ತಕ್ಷಣವೇ ಅನ್ಇನ್ಸ್ಟಾಲ್ ಮಾಡುವಂತೆ ಮುಂಬೈ ಪೊಲೀಸರು ಬಳಕೆದಾರರನ್ನು ಒತ್ತಾಯಿಸಿದ್ದಾರೆ. ಅಧಿಕೃತ ಆ್ಯಪ್ ಸ್ಟೋರ್ ಆಗಿರುವ ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ಸ್ಟೋರ್ಗಳಲ್ಲಿ ಇರುವ ಆ್ಯಪ್ಗಳನ್ನು ಮಾತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು. ಉಳಿದಂತೆ ಯಾವುದೇ ಲಿಂಕ್ ಮೂಲಕ ಹೋಗಿ ಆ್ಯಪ್ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ