ಗೂಗಲ್ (Google) ಕಂಪನಿ ತನ್ನ ಪಿಕ್ಸೆಲ್ ಸರಣಿಗಳಡಿಯಲ್ಲಿ ವರ್ಷಕ್ಕೆ ಒಂದರಂತೆ ಫೋನ್ಗಳನ್ನು ಬಿಡುಗಡೆ ಮಾಡುತ್ತವೆ. ತನ್ನ ಈ ವಿಶೇಷ ಸ್ಮಾರ್ಟ್ಫೋನ್ಗಳಿಗೆ ಗೂಗಲ್ ಫೋನ್ ತನ್ನದೇ ಆದ ಬಳಕೆದಾರರನ್ನು ಹೊಂದಿದೆ. ಅದರಂತೆ ಕಳೆದ ವರ್ಷ ಅಕ್ಟೋಬರ್ನಲ್ಲಿ ಗೂಗಲ್ ತನ್ನ ಗೂಗಲ್ ಪಿಕ್ಸೆಲ್ 7 ಸರಣಿಯ (Pixel 7 Series) ಎರಡು ಮೊಬೈಲ್ಗಳನ್ನು ಲಾಂಚ್ ಮಾಡಿತ್ತು. ಇದರಲ್ಲಿ ಗೂಗಲ್ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ಸ್ಮಾರ್ಟ್‌ಫೋನ್ ಇದ್ದವು. ಇದೀಗ ಈ ಸರಣಿಯ ಮುಂದುವರೆದ ಭಾಗವಾಗಿ ಗೂಗಲ್ ಹೊಸ ಗೂಗಲ್ ಪಿಕ್ಸೆಲ್ 7a (Google Pixel 7a) ಫೋನನ್ನು ಅನಾವರಣ ಮಾಡಲು ಸಜ್ಜಾಗಿದೆ. ತನ್ನ ಕ್ಯಾಮೆರಾದಿಂದಲೇ ಟೆಕ್ ಪ್ರಿಯರ ನಿದ್ದೆ ಕದ್ದಿರುವ ಈ ಫೋನ್ ಮೇ 10 ರಂದು ಗೂಗಲ್ I/O 2023 ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ.
ಇದೀಗ ಗೂಗಲ್ ಪಿಕ್ಸೆಲ್ 7a ಸ್ಮಾರ್ಟ್ಫೋನ್ನ ಬೆಲೆ ಆನ್ಲೈನ್ನಲ್ಲಿ ಸೋರಿಕೆ ಆಗಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರವ ಈ ಸ್ಮಾರ್ಟ್‌ಫೋನ್ ಬೆಲೆ SGD 749, ಅಂದರೆ ಭಾರತದಲ್ಲಿ ಇದರ ಬೆಲೆ 46,000 ರೂ. ಇರಬಹುದು ಎಂದು ಹೇಳಲಾಗಿದೆ. ಇದು 8GB RAM + 128GB ಸ್ಟೋರೇಜ್ ಆಯ್ಕೆಯದ್ದಾಗಿದೆ. ಭಾರತದಲ್ಲಿ ಗೂಗಲ್ ಪಿಕ್ಸೆಲ್ 6a ಫೋನಿನ ಬೆಲೆ 43,999 ರೂ. ಆಗಿದೆ. ಮೇ 11 ರಂದು ಪಿಕ್ಸೆಲ್ 7a ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮೂಲಕ ಖರೀದಿಗೆ ಸಿಗಬಹುದು ಎನ್ನಲಾಗಿದೆ.
WhatsApp: ವಾಟ್ಸ್ಆ್ಯಪ್ನಲ್ಲಿ ಚಾಟ್ ಲಾಕ್ ಹಾಗೂ ಹೈಡ್ ಮಾಡುಬಹುದು: ಬರುತ್ತಿದೆ ಹೊಸ ಫೀಚರ್
ಗೂಗಲ್ ಪಿಕ್ಸೆಲ್ 7a ಸ್ಮಾರ್ಟ್‌ಫೋನ್ ಫೀಚರ್ಗಳ ಬಗ್ಗೆ ಕಂಪನಿ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಲೀಕ್ ಆಗಿರುವ ಮಾಹಿತಿ ಪ್ರಕಾರ ಈ ಫೋನ್ 6.1 ಇಂಚಿನ FHC+ ಡಿಸ್‌ಪ್ಲೇ ಜೊತೆಗೆ, 90hz OLED ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗಿದೆ. ಇದು ಎಲ್‌ಇಡಿ ಲೈಟ್ಸ್‌ನೊಂದಿಗೆ ಪಂಚ್ ಹೋಲ್ ಆಯ್ಕೆಯ ಡಿಸ್‌ಪ್ಲೇ ಆಗಿರಲಿದಎಯಂತೆ. ಟೆನ್ಸರ್ G2 ಚಿಪ್‌ಸೆಟ್‌ನಲ್ಲೇ ಕಾರ್ಯನಿರ್ವಹಿಸುವಸ ಸಾಧ್ಯತೆ ಇದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ 64 ಮೆಗಾ ಪಿಕ್ಸೆಲ್ನ ಸೋನಿ IMX787 ಸೆನ್ಸರ್ ಹಾಗೂ 12 ಮೆಗಾ ಪಿಕ್ಸೆಲ್ನ ಸೆಕೆಂಡರಿ ಸೆನ್ಸರ್ನೊಂದಿಗೆ ರಿಯರ್ ಡ್ಯುಯಲ್ ಕ್ಯಾಮೆರಾ ರಚನೆ ಹೊಂದಿರಲಿದೆ. ಇದರ ಜೊತೆಗೆ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 10.8MP ಕ್ಯಾಮೆರಾ ಆಯ್ಕೆ ಹೊಂದಿರುವುದು ಬಹುತೇಕ ಖಚಿತವಂತೆ. ಈ ಕ್ಯಾಮೆರಾಗಳು ಅನೇಕ ಆಯ್ಕೆಗಳನ್ನ ಹೊಂದಿದೆ.
4,335mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಆಗಬಹುದು. 5W ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲ ಪಡೆದಿರಬಹುದು. ಇದರ ಜೊತೆಗೆ ಟ್ರೀಮ್ ಬ್ಯಾಟರಿ ಸೇವರ್ ಮೋಡ್ ಎಂಬ ವಿಶೇಷ ಆಯ್ಕೆಯನ್ನು ಅಳವಡಿಸಲಾಗಿದೆ ಎಂಬ ಸುದ್ದಿಯಿದೆ. ಇದನ್ನು ಆಕ್ಟಿವ್ ಮಾಡುವ ಮೂಲಕ 72 ಗಂಟೆಗಳ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದಂತೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, GPS, NFC, ಮತ್ತು USB ಟೈಪ್-C ಪೋರ್ಟ್ ಇರಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ