ಪೋಕೋ X6 ಫೋನಿಗೆ ಭರ್ಜರಿ ಡಿಮ್ಯಾಂಡ್: ಹೊಸ ರೂಪಾಂತರದಲ್ಲಿ ಬಿಡುಗಡೆ, ಬೆಲೆ ಎಷ್ಟು?

|

Updated on: Feb 13, 2024 | 2:01 PM

POCO X6 5G New variant: ಪೋಕೋ X6 ಫೋನ್ ಕಳೆದ ತಿಂಗಳು ಭಾರತದಲ್ಲಿ ಅನಾವರಣಗೊಂಡಿತ್ತು. ಇದೀಗ, ಕಂಪನಿಯು ದೇಶದಲ್ಲಿ ಹೊಸ 12GB+256GB ರೂಪಾಂತರವನ್ನು ರಿಲೀಸ್ ಮಾಡಿದೆ. ಈ ಫೋನನ್ನು ಫ್ಲಿಪ್​ಕಾರ್ಟ್​ನಲ್ಲಿ ನೀವು ಕೇವಲ 20,999 ರೂ. ಗೆ ಖರೀದಿಸಬಹುದು.

ಪೋಕೋ X6 ಫೋನಿಗೆ ಭರ್ಜರಿ ಡಿಮ್ಯಾಂಡ್: ಹೊಸ ರೂಪಾಂತರದಲ್ಲಿ ಬಿಡುಗಡೆ, ಬೆಲೆ ಎಷ್ಟು?
POCO X6 5G
Follow us on

ಚೀನಾ ಮೂಲದ ಪ್ರಸಿದ್ಧ ಪೋಕೋ ಸಂಸ್ಥೆ ಕಳೆದ ತಿಂಗಳು ಭಾರತದಲ್ಲಿ ತನ್ನ ಹೊಸ ಪೋಕೋ X6 5G (POCO X6 5G) ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿತ್ತು. ಇದು 8GB/12GB ಮತ್ತು 256GB/512GB ಸ್ಟೋರೇಜ್ ಆಯ್ಕೆಗಳಲ್ಲಿ ಅನಾವರಣಗೊಂಡಿತ್ತು. ಈ ಫೋನಿಗೆ ದೇಶದಲ್ಲಿ ಭರ್ಜರಿ ಡಿಮ್ಯಾಂಡ್ ಇದೆ. ಇದೀಗ, ಕಂಪನಿಯು ದೇಶದಲ್ಲಿ ಹೊಸ 12GB+256GB ರೂಪಾಂತರವನ್ನು ರಿಲೀಸ್ ಮಾಡಿದೆ. ಈ ಹೊಸ ಆವೃತ್ತಿಯನ್ನು ಎರಡು ಬಣ್ಣ ಆಯ್ಕೆಗಳಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಪೋಕೋ X6 ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 7s Gen 2 ಪ್ರೊಸೆಸರ್ ಹೊಂದಿದೆ.

ಪೋಕೋ X6 ಬೆಲೆ, ಲಭ್ಯತೆ:

ಹೊಸ ಪೋಕೋ X6 ಫೋನ್ 12GB/256GB ಮಾದರಿಗೆ 20,999 ರೂ. ಗಳಾಗಿದ್ದು, ಮಿರರ್ ಬ್ಲಾಕ್ ಮತ್ತು ಸ್ನೋಸ್ಟ್ರಾಮ್ ವೈಟ್ ಬಣ್ಣಗಳಲ್ಲಿ ಬರಲಿದೆ. ICICI ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು ಅಥವಾ EMI ಪಾವತಿಗಳು ಅಥವಾ ಎಕ್ಸ್‌ಚೇಂಜ್ ಆಫರ್‌ಗಳನ್ನು ಬಳಸಿಕೊಂಡು ಪಾವತಿಸಿದಾಗ ರೂ. 3,000 ರಿಯಾಯಿತಿಯನ್ನು ಪಡೆಯಬಹುದು. ಅಂದರೆ 12GB/256GB ಯ ಮೂಲಬೆಲೆ ಬೆಲೆ 23,999 ರೂ. ಹೊಸ ರೂಪಾಂತರವು ಫ್ಲಿಪ್​ಕಾರ್ಟ್ ಮೂಲಕ ಲಭ್ಯವಿರುತ್ತದೆ.

ಫೋನ್​ನಲ್ಲಿ ಮಾತನಾಡುತ್ತಿರುವಾಗ ದಿಢೀರ್ ಕಾಲ್ ಕಟ್ ಆಗುತ್ತಾ?: ಅಲ್ಲೊಂದು ಸಮಸ್ಯೆ ಇದೆ

ಅಂತೆಯೆ ಇದರ 8GB/256GB ರೂಪಾಂತರದ ಬೆಲೆ 21,999 ರೂ. ಮತ್ತು 12GB/512GB ಮಾದರಿಗೆ ರೂ. 24,999 ಇದೆ.

ಪೋಕೋ X6 ಫೀಚರ್ಸ್:

ಪೋಕೋ X6 ಸ್ಮಾರ್ಟ್​ಫೋನ್ 6.67-ಇಂಚಿನ 1.5K AMOLED ಡಿಸ್​ಪ್ಲೇ, 120Hz ರಿಫ್ರೆಶ್ ರೇಟ್, 1800 ನಿಟ್ಸ್ ಪೀಕ್ ಬ್ರೈಟ್‌ನೆಸ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್, ಗೊರಿಲ್ಲಾ ಗ್ಲಾಸ್ ವಿಕ್ಟಸ್ ಮತ್ತು HDR10+ ಅನ್ನು ಹೊಂದಿದೆ. Adreno 710 GPU ಜೊತೆಗೆ ಕ್ವಾಲ್ಕಂ ಸ್ನಾಪ್​ಡ್ರಾಗನ್ 7s Gen 2 ಚಿಪ್‌ಸೆಟ್ ಪವರ್ ಇದೆ.

ಚಿಪ್‌ಸೆಟ್ ಅನ್ನು 8GB/12GB LPDDR4X RAM ಮತ್ತು 256GB/512GB UFS 2.2 ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಆಂಡ್ರಾಯ್ಡ್ 13-ಆಧಾರಿತ MIUI 14 ನಲ್ಲಿ ರನ್ ಆಗುತ್ತದೆ.

ಐಫೋನ್ 15 ಪ್ರೊ ನಿಂದ ಪೋಕೋ X6 ವರೆಗೆ, ಅಮೆಜಾನ್​ನಲ್ಲಿ ಭಾರೀ ರಿಯಾಯಿತಿ

ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ, ಪೋಕೋ X6 OIS ಜೊತೆಗೆ 64MP ಪ್ರಾಥಮಿಕ ಕ್ಯಾಮೆರಾ, 120-ಡಿಗ್ರಿ FoV ಜೊತೆಗೆ 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸಂವೇದಕವನ್ನು ಹೊಂದಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾ ಇದೆ. ಈ ಫೋನ್ 5,100mAh ಬ್ಯಾಟರಿಯನ್ನು 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಪ್ಯಾಕ್ ಮಾಡುತ್ತದೆ.

ಪೋಕೋ X6 ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ, ಇನ್‌ಫ್ರಾರೆಡ್ ಸಂವೇದಕ, ಸ್ಟೀರಿಯೋ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, IR ಬ್ಲಾಸ್ಟರ್ ಮತ್ತು IP54 ರೇಟಿಂಗ್ ಅನ್ನು ಹೊಂದಿದೆ. ಕನೆಕ್ಟಿವಿಟಿ ವೈಶಿಷ್ಟ್ಯಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS ಮತ್ತು ಚಾರ್ಜಿಂಗ್‌ಗಾಗಿ USB ಟೈಪ್-C ಪೋರ್ಟ್ ಸೇರಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ