ಭಾರತದಲ್ಲಿ ಪೋಕೋ ಸಂಸ್ಥೆ ದೊಡ್ಡ ಮಟ್ಟದ ಮಾರುಕಟ್ಟೆಯನ್ನು ಹೊಂದಿಲ್ಲವಾದರೂ ಆಗಾಗ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತವೆ. ಇದೇರೀತಿ ಮೊನ್ನೆಯಷ್ಟೆ ಪೋಕೋ ದೇಶದಲ್ಲಿ ತನ್ನ ಹೊಸ ಪೋಕೋ ಎಮ್4 ಪ್ರೊ 5G (Poco M4 Pro 5G) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತ್ತು. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್ ಬಲ ಪಡೆದುಕೊಂಡಿದೆ. ಅಲ್ಲದೆ ವೇಗದ ಚಾರ್ಜಿಂಗ್, ಬಲಿಷ್ಠ ಬ್ಯಾಟರಿ ಜೊತೆಗೆ ಆಕರ್ಷಕ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಈ ಫೋನ್ ಇಂದಿನಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ (Flipkart) ಖರೀದಿಗೆ ಸಿಗುತ್ತಿದೆ. ಮೇಲ್ನೋಟಕ್ಕೆ ಇದೊಂದು ಉತ್ತಮ ಫೋನ್ ಆಗಿದೆ. ನೀವು ದೊಡ್ಡ ಮಟ್ಟದ ಗೇಮಿಂಗ್ ಪ್ರಿಯರಾಗಿದ್ದರೆ ಇದನ್ನು ಖರೀದಿಸುವುದು ಸೂಕ್ತವಲ್ಲ. ಬಜೆಟ್ ಬೆಲೆಗೆ ಒಳ್ಳೆಯ ಸ್ಮಾರ್ಟ್ಫೋನನ್ನು (Smartphone) ಖರೀದಿಸುವ ಪ್ಲಾನ್ನಲ್ಲಿ ನೀವಿದ್ದರೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಬೆಲೆ-ಆಫರ್ ಏನು?:
ಭಾರತದಲ್ಲಿ ಪೋಕೋ M4 ಪ್ರೊ 5G ಸ್ಮಾರ್ಟ್‌ಫೋನ್ ಒಟ್ಟು ಮೂರು ಮಾದರಿಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕಾಗಿ 14,999 ರೂ. ನಿಗದಿ ಮಾಡಲಾಗಿದೆ. 6GB RAM ಮತ್ತು 128GB ಕಾನ್ಫಿಗರೇಶನ್ ಬೆಲೆ 16,999 ರೂ. ಹಾಗೆಯೆ 8GB RAM ಮತ್ತು 128GB ರೂಪಾಂತರದ ಬೆಲೆ 18,999 ರೂ. ಇದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಇಂದಿನಿಂದ ಖರೀದಿಗೆ ಸಿಗುತ್ತಿದೆ. ನೀವು SBI ಕಾರ್ಡ್ ಮೂಲಕ ಖರೀದಿಸಿದರೆ 1,000 ರೂ.ಗಳ ತ್ವರಿತ ರಿಯಾಯಿತಿ ದೊರೆಯಲಿದೆ. ಇದಲ್ಲದೆ ಫ್ಲಿಪ್‌ಕಾರ್ಟ್ UPI ವಹಿವಾಟುಗಳನ್ನು ಬಳಸುವಾಗ 999 ರೂ. ರಿಯಾಯಿತಿ ಲಭ್ಯವಾಗಲಿದೆ.
ಏನು ವಿಶೇಷತೆ?:
ಪೋಕೋ M4 ಪ್ರೊ 5G ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ HD+ ಡಾಟ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು DCI-P3 ವೈಡ್ ಕಲರ್ ಗ್ಯಾಮಟ್ ಅನ್ನು ಸಹ ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 11 ಅನ್ನು ಆಧರಿಸಿದ MIUI 12.5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಮುಂದಿನ ಕೆಲವು ವಾರಗಳಲ್ಲಿ MIUI 13 ಅನ್ನು ಸ್ವೀಕರಿಸುವ ಭರವಸೆ ಇದೆ. ಜೊತೆಗೆ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ f/1.8 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದು f/2.45 ಲೆನ್ಸ್ ಅನ್ನು ಪಡೆದಿದೆ.
ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಪ್ರೊ ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ v5.1, GPS/ A-GPS, ಇನ್ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಒಳಗೊಂಡಿದೆ.
32 ನಿಮಿಷ-ಫುಲ್ ಚಾರ್ಜ್: ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ OnePlus Nord CE 2 5G ಖರೀದಿಗೆ ಲಭ್ಯ
WhatsApp: ವಾಟ್ಸ್ಆ್ಯಪ್ನಲ್ಲಿ ತಪ್ಪಿಯೂ ರೆಡ್ ಹಾರ್ಟ್ ಎಮೋಜಿ ಸೆಂಡ್ ಮಾಡಬೇಡಿ: ಜೈಲಿಗೆ ಹೋಗ್ತಿರಿ ಎಚ್ಚರ