AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

32 ನಿಮಿಷ-ಫುಲ್ ಚಾರ್ಜ್: ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ OnePlus Nord CE 2 5G ಖರೀದಿಗೆ ಲಭ್ಯ

OnePlus Nord CE 2 5G Price: ಕೇವಲ 32-ನಿಮಿಷಗಳಲ್ಲಿ ಶೇ. 100% ಚಾರ್ಜ್ ಆಗುವ ಒನ್‌ಪ್ಲಸ್‌ ನಾರ್ಡ್‌ CE 2 5G ಸ್ಮಾರ್ಟ್‌ಫೋನ್‌ ಇಂದಿನಿಂದ ಖರೀದಿಗೆ ಲಭ್ಯವಿದೆ.  ಹಾಗಾದ್ರೆ ಇದರ ಬೆಲೆ ಎಷ್ಟು?, ವಿಶೇಷತೆ ಏನು? ಎಂಬುದನ್ನು ನೋಡೋಣ.

32 ನಿಮಿಷ-ಫುಲ್ ಚಾರ್ಜ್: ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ OnePlus Nord CE 2 5G ಖರೀದಿಗೆ ಲಭ್ಯ
OnePlus Nord CE 2
TV9 Web
| Edited By: |

Updated on: Feb 22, 2022 | 1:27 PM

Share

ಭಾರತದಲ್ಲಿ ಈ ಹಿಂದೆ ತನ್ನ ನಾರ್ಡ್ ಸರಣಿಯ ಸ್ಮಾರ್ಟ್​ಫೋನ್​ಗಳನ್ನು (Smartphone) ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಒನ್​ಪ್ಲಸ್ ಕಂಪನಿ ಇದೀಗ ಮತ್ತೆ ಹೊಸ ಒನ್‌ಪ್ಲಸ್‌ ನಾರ್ಡ್‌ ಸಿಇ 2 5G (OnePlus Nord CE 2 5G) ಸ್ಮಾರ್ಟ್‌ಫೋನ್​ನೊಂದಿಗೆ ಬಂದಿದೆ. ಇದು ಕಳೆದ ವರ್ಷ ಬಿಡುಗಡೆ ಆಗಿ ಸಾಕಷ್ಟು ಬೇಡಿಕೆ ಸೃಷ್ಟಿಸಿದ್ದ ಒನ್‌ಪ್ಲಸ್‌ ನಾರ್ಡ್‌ CE 5G ಯ ​​ಉತ್ತರಾಧಿಕಾರಿಯಾಗಿದೆ. ಈ ಹಿಂದಿನ ಒನ್‌ಪ್ಲಸ್‌ ನಾರ್ಡ್‌ ಸ್ಮಾರ್ಟ್‌ಫೋನ್‌ಗಳಿಗಿಂತ ಇದು ಎರಡು ಪಟ್ಟು ವೇಗವಾಗಿರುತ್ತದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಆಕರ್ಷಕ ಕ್ಯಾಮೆರಾ (Camera), ಅತ್ಯುತ್ತಮ ಬ್ಯಾಟರಿ ಪವರ್, ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್‌ ಬಲವನ್ನು ಹೊಂದಿದೆ. ಕೇವಲ 32-ನಿಮಿಷಗಳಲ್ಲಿ ಶೇ. 100% ಚಾರ್ಜ್ ಆಗುವ ಈ ಫೋನ್ ಇಂದಿನಿಂದ ಖರೀದಿಗೆ ಲಭ್ಯವಿದೆ.  ಹಾಗಾದ್ರೆ ಇದರ ಬೆಲೆ ಎಷ್ಟು?, ವಿಶೇಷತೆ ಏನು? ಎಂಬುದನ್ನು ನೋಡೋಣ.

ಬೆಲೆ-ಆಫರ್ ಏನು?:

ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ CE 2 5G ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಎರಡು ಮಾದರಿಯಲ್ಲಿ ಬಿಡುಗಡೆ ಆಗಿದೆ. ಇದರ 6GB RAM ಮತ್ತು 128GB ಸ್ಟೋರೇಜ್ ಬೇಸ್ ಮಾಡೆಲ್‌ಗೆ 23,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 24,999 ರೂ. ಆಗಿದೆ. ಈ ಸ್ಮಾರ್ಟ್‌ಫೋನ್‌ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್, ಚಿಲ್ಲರೆ ಅಂಗಡಿಗಳಲ್ಲಿ ಇಂದಿನಿಂದ ಖರೀದಿಗೆ ಸಿಗುತ್ತಿದೆ. ಈ ಸ್ಮಾರ್ಟ್​ಫೋನ್ ಹಲವು ಆಕರ್ಷಕ ಆಫರ್‌ ಮತ್ತು ಡಿಸ್ಕೌಂಟ್‌ ಅನ್ನು ಘೋಷಿಸಿದೆ. ನೀವು ICICI ಬ್ಯಾಂಕ್ ಕಾರ್ಡ್ ಹೊಂದಿದ್ದರೆ, 1500 ರೂ. ತನಕ ಹೆಚ್ಚುವರಿ ರಿಯಾಯಿತಿ ಮತ್ತು 3 ತಿಂಗಳವರೆಗೆ ನೋ ಕಾಸ್ಟ್‌ ಇಎಂಐ ಆಯ್ಕೆಯನ್ನು ಪಡೆಯಬಹುದಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ನೀವು ನಿಮ್ಮ ಡಿವೈಸ್‌ಗಳನ್ನು ಎಕ್ಸ್‌ಚೇಂಜ್‌ ಆಫರ್‌ನಲ್ಲಿ 3000 ರೂ. ವರೆಗೆ ವಿನಿಮಯ ಮಾಡಿಕೊಳ್ಳಬಹುದು. ಈ ಕೊಡುಗೆಯು ಒನ್‌ಪ್ಲಸ್‌.ಇನ್‌, ಒನ್‌ಪ್ಲಸ್‌ ಸ್ಟೋರ್‌ ಆಪ್‌, ಅಮೆಜಾನ್‌.ಇನ್‌, ಒನ್‌ಪ್ಲಸ್‌ ಎಕ್ಸಿಪಿರಿಯೆನ್ಸ್‌ ಸ್ಟೋರ್‌ಗಳು ಮತ್ತು ಅಧಿಕೃತ ಪಾಲುದಾರ ಮಳಿಗೆಗಳಲ್ಲಿ ಲಭ್ಯವಿದೆ.

ಏನು ವಿಶೇಷತೆ?:

ಒನ್‌ಪ್ಲಸ್‌ ನಾರ್ಡ್‌ CE 2 5G ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.43 ಇಂಚಿನ ಫುಲ್ ಹೆಚ್‌ಡಿ+ ಫ್ಲೂಯಿಡ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಕಂಪನಿಯ OxygenOS 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ 119-ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿದೆ. ಈ ಎರಡೂ ಕ್ಯಾಮೆರಾಗಳು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಬೆಂಬಲದೊಂದಿಗೆ ಬರುತ್ತವೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೋನಿ IMX471 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ.

ಇದು ದೀರ್ಘ ಬಾಳಿಕೆ ಬರುವ 4,500 mAh ಡ್ಯುಯಲ್-ಸೆಲ್ ಬ್ಯಾಟರಿಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 65W SUPERVOOC ಫಾಸ್ಟ್ ಚಾರ್ಜಿಂಗ್ ನೀಡಲಾಗಿದೆ. ದೈನಂದಿನ ಬಳಕೆಗೆ ಸುರಕ್ಷಿತವಾಗಿದ್ದು ಇದರ ಬ್ಯಾಟರಿ ಸೆಟಪ್ ಎಂಟು ಆನ್‌ಬೋರ್ಡ್ ಟೆಂಪ್‌ರೇಚರ್‌ ಸೆನ್ಸಾರ್‌ಗಳನ್ನು ಹೊಂದಿದೆ. ಕೇವಲ 32-ನಿಮಿಷಗಳಲ್ಲಿ 100% ಗೆ ಚಾರ್ಜಿಂಗ್‌ ಮಾಡಲಿದೆ. ನೀವು ಕೇವಲ 15 ನಿಮಿಷಗಳ ಚಾರ್ಜಿಂಗ್‌ನಲ್ಲಿ ಒಂದು ದಿನಕ್ಕೆ ಬೇಕಾದ ಬ್ಯಾಟರಿ ಪವರ್‌ ಅನ್ನು ಪಡೆದುಕೊಳ್ಳಬಹುದು. ಇದು ಈ ಹಿಂದಿನ ಒನ್‌ಪ್ಲಸ್‌ ನಾರ್ಡ್‌ ಸ್ಮಾರ್ಟ್‌ಫೋನ್‌ಗಳಿಗಿಂತ ಎರಡು ಪಟ್ಟು ವೇಗವಾಗಿರುತ್ತದೆ ಎಂದು ಕಂಪನಿ ಹೇಳಿದೆ.

WhatsApp: ವಾಟ್ಸ್ಆ್ಯಪ್​ನಲ್ಲಿ ತಪ್ಪಿಯೂ ರೆಡ್ ಹಾರ್ಟ್ ಎಮೋಜಿ ಸೆಂಡ್ ಮಾಡಬೇಡಿ: ಜೈಲಿಗೆ ಹೋಗ್ತಿರಿ ಎಚ್ಚರ

Tecno Spark 8C: 5000mAh ಬ್ಯಾಟರಿ, 53 ಗಂಟೆಗಳ ಟಾಕ್‌ಟೈಂ: ಕೇವಲ 7,499 ರೂ.ಗೆ ಹೊಸ ಸ್ಮಾರ್ಟ್​ಫೋನ್ ರಿಲೀಸ್

Follow Us
‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ
‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!
ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!
ಪೆಟ್ರೋಲ್ ಖಾಲಿ ವದಂತಿ: ಚಾಮರಾಜನಗರದಲ್ಲಿ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್ ಖಾಲಿ ವದಂತಿ: ಚಾಮರಾಜನಗರದಲ್ಲಿ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!
ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!
ನಾನು ಅವರ ತೊಡೆಯ ಮೇಲೆ ಕುಳಿತು ಬೆಳದವನು, ಅದಕ್ಕೆ ಅದೃಷ್ಟವಂತ; ರವಿಚಂದ್ರನ್
ನಾನು ಅವರ ತೊಡೆಯ ಮೇಲೆ ಕುಳಿತು ಬೆಳದವನು, ಅದಕ್ಕೆ ಅದೃಷ್ಟವಂತ; ರವಿಚಂದ್ರನ್
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!