Smartphone Tips 4: ನಿಮ್ಮ ಸ್ಮಾರ್ಟ್​ಫೋನ್ ಹ್ಯಾಕ್ ಆಗದಂತೆ ಎಚ್ಚರ ವಹಿಸಿ

ಸ್ಮಾರ್ಟ್​ಫೋನ್​ ಟಿಪ್ಸ್​ 4: ಹೆಚ್ಚಾಗಿ ಹ್ಯಾಕ್‌ಗೆ ಒಳಗಾಗುತ್ತಿರುವುದು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳಾಗಿವೆ. ಇವೇ ಹ್ಯಾಕರ್‌ಗಳು ಇಲ್ಲವೇ ಸೈಬರ್ ಅಪರಾಧಿಗಳ ಪಾಲಿನ ಟಾರ್ಗೆಟ್ ಗಳಾಗಿವೆ. ಇಲ್ಲಿ ಹ್ಯಾಕ್ ಮಾಡಲೆಂದೇ ಕೆಲವು ದೋಷಪೂರಿತ ಆ್ಯಪ್‌ಗಳನ್ನು ಸೃಷ್ಟಿಸಿರಲಾಗಿರುತ್ತದೆ.

Smartphone Tips 4: ನಿಮ್ಮ ಸ್ಮಾರ್ಟ್​ಫೋನ್ ಹ್ಯಾಕ್ ಆಗದಂತೆ ಎಚ್ಚರ ವಹಿಸಿ
Smartphone Hack
Follow us
TV9 Web
| Updated By: Vinay Bhat

Updated on: Aug 29, 2021 | 3:07 PM

ನೀವು ಆಂಡ್ರಾಯ್ಡ್‌ (Android) ಅಥವಾ ಐಫೋನ್ (iPhone) ಬಳಸುತ್ತಿದ್ದರೆ ಈಗಿನ ಟೆಕ್ನಾಲಜಿಯಲ್ಲಿ ನಿಮ್ಮನ್ನು ಟ್ರ್ಯಾಕ್ ಮಾಡುವುದು ಮತ್ತು ನೀವು ಆನ್‌ಲೈನ್‌ನಲ್ಲಿ ಏನು ಮಾಡುತ್ತಿದ್ದೀರಿ ಎಂಬುದನ್ನು ತಿಳಿಯುವುದು ತುಂಬಾನೆ ಸುಲಭ. ವಿಶೇಷವಾಗಿ, ನೀವು ಪ್ರಮುಖ ವ್ಯಕ್ತಿಯಾಗಿದ್ದರೆ, ಸರ್ಕಾರಿ ಸಂಸ್ಥೆಗಳು ನಿಮ್ಮ ಇರುವಿಕೆಯನ್ನು ತಿಳಿದುಕೊಳ್ಳಲು ಹೆಚ್ಚಿನ ಆಸಕ್ತಿ ವಹಿಸುತ್ತವೆ.  ಗ್ರಾಫೆನ್‌ಒಎಸ್‌ ಸ್ಮಾರ್ಟ್‌ಫೋನ್‌ (Smartphone) ಬಳಸಿ ಐಒಎಸ್ ಮತ್ತು ಆಂಡ್ರಾಯ್ಡ್ ಎರಡು ಕೂಡ ದುರ್ಬಲವಾಗಿದ್ದು, ಪ್ರತಿ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುವ ಐಒಎಸ್ ಮತ್ತು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂಗಳು ಅಸಂಖ್ಯಾತ ಪ್ರೋಗ್ರಾಮಿಂಗ್ ನ್ಯೂನತೆಗಳನ್ನು ಹೊಂದಿವೆ ಎಂದು ಈ ಹಿಂದೆ ವರದಿಯಾಗಿತ್ತು. ಇದರರ್ಥ ಐಮೆಸೇಜ್ ಅಥವಾ ವೆಬ್ ಬ್ರೌಸರ್‌ಗಳಂತಹ ಸಾಮಾನ್ಯ ಆ್ಯಪ್‌ಗಳು ಅಪಾಯಕಾರಿಯಾಗಿದ್ದು, ನಿಮ್ಮನ್ನು ಸುಲಭವಾಗಿ ಹ್ಯಾಕ್ ಮಾಡಬಹುದು.

ಇಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಹೆಚ್ಚಾಗಿ ಹ್ಯಾಕ್‌ಗೆ ಒಳಗಾಗುತ್ತಿರುವುದು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳಾಗಿವೆ. ಇವೇ ಹ್ಯಾಕರ್‌ಗಳು ಇಲ್ಲವೇ ಸೈಬರ್ ಅಪರಾಧಿಗಳ ಪಾಲಿನ ಟಾರ್ಗೆಟ್ ಗಳಾಗಿವೆ. ಇಲ್ಲಿ ಹ್ಯಾಕ್ ಮಾಡಲೆಂದೇ ಕೆಲವು ದೋಷಪೂರಿತ ಆ್ಯಪ್‌ಗಳನ್ನು ಸೃಷ್ಟಿಸಿರಲಾಗಿರುತ್ತದೆ. ಇಲ್ಲವೇ ಕೆಲವು ದೋಷಪೂರಿತ URL ಗಳೂ ಇದ್ದು, ಇವುಗಳ ಮೇಲೆ ಅಪ್ಪಿತಪ್ಪಿ ಒಂದು ಕ್ಲಿಕ್ ಮಾಡಿದರೆ ಸಾಕು, ಮೊಬೈಲ್‌ನಲ್ಲಿನ ಸಂಪೂರ್ಣ ಮಾಹಿತಿ ಹ್ಯಾಕರ್‌ಗಳ ಕಂಪ್ಯೂಟರ್ ಅನ್ನು ಸೇರಿರುತ್ತದೆ ಎಂದೇ ಅರ್ಥ. ಹಾಗಾದರೆ ಹ್ಯಾಕರ್​ಗಳಿಂದ ತಪ್ಪಿಸಿಕೊಳ್ಳಲು ನೀವು ಹೇಗೆ ಎಚ್ಚರವಾಗಿರಬೇಕು ಎಂಬುದಕ್ಕೆ ಒಂದಿಷ್ಟು ಸಲಹೆ ಇಲ್ಲಿ ನೀಡಲಾಗಿದೆ.

ಅಗತ್ಯವಿದ್ದರಷ್ಟೇ ಮೈಕ್ರೊಫೋನ್, ಬ್ಲೂಟೂತ್ ಬಳಸಿ: ಗುಪ್ತ ಆ್ಯಪ್‌ ಮೂಲಕ ನಿಮ್ಮ ಸಂಭಾಷಣೆಗಳನ್ನು ಯಾರಾದರೂ ರಹಸ್ಯವಾಗಿ ಕೇಳುವುದನ್ನು ತಪ್ಪಿಸಲು ಸ್ಮಾರ್ಟ್‌ಫೋನ್‌ಗಳಲ್ಲಿ ಮೈಕ್ರೊಫೋನ್‌ ಬಳಸುವುದನ್ನು ಕಡಿಮೆ ಮಾಡಿ. ಅಷ್ಟೇ ಅಲ್ಲದೇ, ಅಗತ್ಯವಿಲ್ಲದಿದ್ದಾಗ ವೈಫೈ ಮತ್ತು ಬ್ಲೂಟೂತ್ ಆಫ್ ಮಾಡಬೇಕು. ಗೌಪ್ಯತೆಗೆ ಹೆಸರಾಗಿರುವ ಟಾರ್‌ ಬ್ರೌಸರ್ ಬಳಸುವುದು ಉತ್ತಮ.

ಮನೆಯಲ್ಲಿ ವೈ-ಫೈ ಬಳಸಬೇಡಿ: ಗೌಪ್ಯತೆ ಕಾಪಾಡಲು ಈ ಕ್ರಮ ಸ್ವಲ್ಪ ಹೆಚ್ಚು ಅನಿಸಬಹುದು. ಆದರೆ, ವಾಸ್ತವವಾಗಿ ಜನರು ಮನೆಯಲ್ಲಿ ವೈ-ಫೈ ಬಳಸಬಾರದು. ಅಂತರ್ಜಾಲಕ್ಕೆ ಸಂಪರ್ಕ ಸಾಧಿಸಲು ನಿಮ್ಮ ಸ್ಮಾರ್ಟ್‌ಫೋನ್‌ಗೆ ಈಥರ್ನೆಟ್ ಕೇಬಲ್ ಪ್ಲಗ್ ಮಾಡಿ. ಖ್ಯಾತ ಕಂಪ್ಯೂಟರ್ ಗುಪ್ತಚರ ಸಲಹೆಗಾರ ಸ್ನೋಡೆನ್ ಹೇಳುವ ಪ್ರಕಾರ “ನಾನು ಮನೆಯಲ್ಲಿ ವೈಫೈ ಬಳಸುವುದಿಲ್ಲ, ಏಕೆಂದರೆ ಪ್ರತಿ ವೈರ್‌ಲೆಸ್ ಅಕ್ಸೆಸ್‌ ಪಾಯಿಂಟ್‌ಗಳು ಜಾಗತಿಕ ನಕ್ಷೆಯಲ್ಲಿ ಯುನಿಕ್‌ ಐಡಿಗಳಾಗಿರುತ್ತವೆ. ನಾನು ಮನೆಯಲ್ಲಿ ಈಥರ್ನೆಟ್ ಬಳಸುತ್ತೇನೆ. ಫೈರ್‌ವಾಲ್‌ ಆಪ್‌ ಬಳಸಿ ಅಗತ್ಯವಿಲ್ಲದ ಯಾವುದೇ ಆಪ್‌ಗಳಿಗೆ ನೆಟ್‌ವರ್ಕ್ ಅನುಮತಿಗಳನ್ನು ನಿರಾಕರಿಸುತ್ತೇನೆ” ಎಂದು ಈ ಹಿಂದೆ ಹೇಳಿದ್ದರು.

ಆ್ಯಡ್‌ ಬ್ಲಾಕರ್‌, ಪಾಸವರ್ಡ್‌ ಮ್ಯಾನೇಜರ್‌ ಬಳಸಿ: ಗೌಪ್ಯತೆ ಕಾಪಾಡಲು ಪ್ರತಿಯೊಬ್ಬರೂ ಆ್ಯಡ್‌ ಬ್ಲಾಕರ್ ಮತ್ತು ಪಾಸ್‌ವರ್ಡ್ ಮ್ಯಾನೇಜರ್‌ ಬಳಸುವುದು ಅಗತ್ಯ. ಬ್ರೌಸರ್‌ನಲ್ಲಿ ಥರ್ಡ್‌ ಪಾರ್ಟಿ ಕುಕೀಗಳನ್ನು ನಿರ್ಬಂಧಿಸಬೇಕು. ಈ ಮೂರು ಹಂತಗಳನ್ನು ಪ್ರತಿಯೊಬ್ಬರೂ ಪರಿಗಣಿಸಬೇಕಾಗಿದೆ. ಏಕೆಂದರೆ ಇವು ಸರಳ, ವೆಚ್ಚರಹಿತವಾಗಿದ್ದು, ನಿಮ್ಮ ಫೋನ್‌ನ್ನು ವೇಗಗೊಳಿಸುವಾಗ ನಿಮ್ಮನ್ನು ರಕ್ಷಿಸುತ್ತವೆ.

ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್ ಬ್ರೌಸ್ ಮಾಡಿ: ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್‌ನೆಟ್‌ ಬ್ರೌಸ್ ಮಾಡದಿರುವುದು ಗೌಪ್ಯತೆ ಹೆಚ್ಚಿಸುವ ಮತ್ತು ಕಣ್ಗಾವಲು ತಪ್ಪಿಸುವುಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಇದರ ಬಗ್ಗೆಯೂ ಸ್ನೋಡೆನ್ ವಿವರಿಸಿದ್ದು, ನಾನು ಬ್ರೌಸರ್‌ನಲ್ಲಿ ಜಾವಾಸ್ಕ್ರಿಪ್ಟ್, ಟ್ರ್ಯಾಕಿಂಗ್ ಮತ್ತು ಫಿಂಗರ್‌ಪ್ರಿಂಟಿಂಗ್ ನಿಷ್ಕ್ರಿಯಗೊಳಿಸುತ್ತೇನೆ. ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್‌ ಬ್ರೌಸ್ ಮಾಡಲು ಕ್ಯೂಬ್ಸ್ ಓಎಸ್ ಬಳಸಿ ಎಂದು ಸಲಹೆ ನೀಡುತ್ತಾರೆ. ಇದು ಜಿಪಿಎಸ್ ಮತ್ತು ವೈಫೈ ಹೊಂದಿಲ್ಲ ಹಾಗೂ ವೊನಿಕ್ಸ್‌ನಿಂದ ಅಂತರ್‌ನಿರ್ಮಿತ ಹೊಂದಿದೆ ಎಂದು ಹೇಳಿದ್ದಾರೆ.

ಡೇಟಾ ಉಪಯೋಗ ಇದ್ದಕ್ಕಿದ್ದಂತೆ ಜಾಸ್ತಿಯಾದರೆ: ನೀವು ಅನ್ ಲಿಮಿಟೆಡ್ ಮೊಬೈಲ್ ಡೇಟಾವನ್ನು ಹೊಂದಿದ್ದರೂ ಕೆಲ ದಿನಗಳಿಂದ ಹೆಚ್ಚಿನ ಡೇಟಾ ಬಳಕೆಯಾಗಿ, ಡೇಟಾ ನಿಧಾನವಾಗುತ್ತಿದೆ ಎಂದನ್ನಿಸಿದರೆ ನಿಮ್ಮ ಫೋನ್‌ಗೆ ಯಾವುದೋ ವೈರಸ್ ದಾಳಿ ಮಾಡಿದೆ ಎಂದೇ ಅರ್ಥ. ಜೊತೆಗೆ ಆಗಾಗ ನೀವು ಬಳಸುತ್ತಿರುವ ಆ್ಯಪ್‌ಕ್ರ್ಯಾಶ್ ಆಗುವುದು ಇಲ್ಲವೇ ಒಂದು ನಿರ್ದಿಷ್ಠ ಆ್ಯಪ್ ಏನೇ ಪ್ರಯತ್ನಪಟ್ಟರೂ ಅಪ್ಡೇಟ್ ಆಗದೇ ಇರುವುದು ಸಹ ಮಾಲ್ವೇರ್ ಅಟ್ಯಾಕ್ ಆಗಿರುವ ಲಕ್ಷಣವನ್ನು ತೋರಿಸುತ್ತದೆ.

Smartphone Tips 3: ಹೊಸ ಮೊಬೈಲ್ ಫೋನ್ ಖರೀದಿಸುವಾಗ ಎಲ್ಲರಂತೆ ನೀವು ಕೂಡ ಈ ತಪ್ಪು ಮಾಡದಿರಿ!

Smartphone Tips 2: ನಿಮ್ಮ ಮೊಬೈಲ್​ನಲ್ಲಿ ಇಂಟರ್ನೆಟ್ ಉಳಿತಾಯ ಮತ್ತು ವೇಗ ಹೆಚ್ಚಿಸುವುದು ಹೇಗೆ? ಇಲ್ಲಿವೆ ಕೆಲವು ಸಲಹೆ

(Protect your smartphone from hackers and intruders here is the tips to secure your Android phone)

ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್