AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Smartphone Tips 3: ಹೊಸ ಮೊಬೈಲ್ ಫೋನ್ ಖರೀದಿಸುವಾಗ ಎಲ್ಲರಂತೆ ನೀವು ಕೂಡ ಈ ತಪ್ಪು ಮಾಡದಿರಿ!

ಸ್ಮಾರ್ಟ್​ಫೋನ್​ ಟಿಪ್ಸ್​ 3: ನಿಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಸ್ಕ್ರೀನ್ ಡೆನ್ಸಿಟಿ ವ್ಯಾಲ್ಯೂವನ್ನು ಕಂಡುಕೊಳ್ಳುವುದು ಹೇಗೆ ಎಂಬ ಅಂಶವನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

Smartphone Tips 3: ಹೊಸ ಮೊಬೈಲ್ ಫೋನ್ ಖರೀದಿಸುವಾಗ ಎಲ್ಲರಂತೆ ನೀವು ಕೂಡ ಈ ತಪ್ಪು ಮಾಡದಿರಿ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Aug 16, 2021 | 3:39 PM

ಇಂದಿನ ದಿನಗಳಲ್ಲಿ ಮೊಬೈಲ್ (Mobile) ಎಂಬುದು ದೊಡ್ಡ ವಿಷಯವೇ ಅಲ್ಲ ಎಂದಾಗಿಬಿಟ್ಟಿದೆ. ಎಲ್ಲದರೂ ಸ್ಮಾರ್ಟ್​ಫೋನ್ (Smartphone) ಕಳೆದು ಹೋದಲ್ಲಿ, ಕಳುವಾದರೆ ಅದನ್ನು ಹುಡುಕುವ ಕೆಲಸಕ್ಕೆಲ್ಲ ಯಾರು ಹೋಗುವುದಿಲ್ಲ. ಮತ್ತೊಂದು ಹೊಸ ಫೋನನ್ನು ಖರೀದಿ ಮಾಡುತ್ತಾರೆ. ಯಾಕೆಂದರೆ ಈಗ ಕೈಗೆಟಕುವ ದರದಲ್ಲಿ ಮೊಬೈಲ್​ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಹಲವು ವರದಿಗಳ ಪ್ರಕಾರ ಹೆಚ್ಚಿನವರು ಯಾವುದೇ ಸ್ಮಾರ್ಟ್‌ಪೋನ್‌ ಖರಿದೀಸುವ ಮುನ್ನ ಆ ಸ್ಮಾರ್ಟ್‌ಪೋನಿನ ಡಿಸ್‌ಪ್ಲೇ (Display) ಎಷ್ಟು ಅಗಲ ಮತ್ತು ಉದ್ದ ಇದೆ ಎಂದು ನೋಡಿ ಪೋನ್ ಖರೀದಿಸುತ್ತಾರಂತೆ. ಇನ್ನು ಸ್ವಲ್ಪ ಹೆಚ್ಚು ತಿಳಿದವರಾದರೆ, ಆ ಪೋನಿನ ವೇಗ ಎಷ್ಟು, ಸಾಫ್ಟ್‌ವೇರ್ ಯಾವುದು ಎಂದೆಲ್ಲ ಚೆಕ್ ಮಾಡುತ್ತಾರಂತೆ. ಆದರೆ, ನಿಮಗೆ ಗೊತ್ತಾ? 100 ಜನ ಸ್ಮಾರ್ಟ್‌ಫೋನ್ ಖರೀದಿದಾರರಲ್ಲಿ 90 ಜನರಿಗೆ ತಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ಗುಣಮಟ್ಟ ಎಷ್ಟಿದೆ ಎಂಬುದೇ ತಿಳಿದಿರುವುದಿಲ್ಲ.

ಹೌದು, ಇದು ನಿಜ. ಇತ್ತೀಚಿನ ಸ್ಮಾರ್ಟ್‌ಫೋನುಗಳಲ್ಲಿ ಹೆಚ್ಚು ಪ್ರಮುಖವಾದುದು ಅದರ ಡಿಸ್‌ಪ್ಲೇ. ಆ ಫೋನಿನ ಡಿಸ್‌ಪ್ಲೇಯಲ್ಲಿ ಏನಾದರೂ ಸ್ವಲ್ಪ ವ್ಯತ್ಯಾಸವಾದರೂ ಆ ಸ್ಮಾರ್ಟ್‌ಫೋನ್ ಉಪಯೋಗಕ್ಕೆ ಬರುವುದಿಲ್ಲ ಎನ್ನುವುದು ತಿಳಿದಿದೆ. ಆದರೂ, ಯಾವೋರ್ವರು ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಗುಣಮಟ್ಟ ಹೇಗಿದೆ ಎಂಬುದನ್ನು ಪರಿಶೀಲೀಸದೇ ಸ್ಮಾರ್ಟ್‌ಪೋನ್ ಖರೀದಿಸುತ್ತಿದ್ದಾರೆ ಎಂದರೆ, ಅವರು ಖಂಡಿತವಾಗಿಯೂ ಮೋಸ ಹೋಗುತ್ತಿದ್ದಾರೆ ಎಂದರ್ಥ.

ಈಗಿನ ಡಿಜಿಟಲ್ ಯುಗದಲ್ಲಿ ಅಸಂಖ್ಯ ಸಂಖ್ಯೆಯಲ್ಲಿ ಫೋನ್‌ಗಳು ಲಭ್ಯವಿದ್ದು ಅವುಗಳ ಡಿಸ್‌ಪ್ಲೇ ಬದಲಾಗುತ್ತಲೇ ಇರುತ್ತದೆ. ಡಿಸ್‌ಪ್ಲೇ ವಿಷಯಕ್ಕೆ ಬಂದಾಗ ಇದಕ್ಕೆ ಸಂಬಂಧಿಸಿದ ಹಲವಾರು ಅಂಶಗಳತ್ತ ಕೂಡ ಗಮನ ಹರಿಸಬೇಕಾಗಿದೆ. ಪಿಕ್ಸೆಲ್, ರೆಸಲ್ಯೂಶನ್, ಪಿಪಿಐ ಹೀಗೆಯೇ ಇನ್ನಷ್ಟು ಅಂಶಗಳು ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತವೆ. ಅಂತೆಯೇ ಫೋನ್ ಗುಣಮಟ್ಟ, ಬೆಲೆಯನ್ನು ಈ ಡಿಸ್‌ಪ್ಲೇಗಳು ಆಧರಿಸಿವೆ. ಹಾಗಾಗಿ, ನಿಮ್ಮ ಸ್ಕ್ರೀನ್ ಡೆನ್ಸಿಟಿ ವ್ಯಾಲ್ಯೂವನ್ನು ಕಂಡುಕೊಳ್ಳುವುದು ಹೇಗೆ ಎಂಬ ಅಂಶವನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಪಿಪಿಐ ಎಂದರೇನು?: ಪಿಪಿಐ ಎಂದರೆ ಪಿಕ್ಸೆಲ್ಸ್ ಪರ್ ಇಂಚ್. ಇಲೆಕ್ಟ್ರಾನಿಕ್ ಇಮೇಜ್ ಸಾಧನದಲ್ಲಿರುವ ಪಿಕ್ಸೆಲ್ ಡೆನ್ಸಿಟಿಯ ಅಳತೆಯನ್ನು ಇದು ಒಳಗೊಂಡಿದೆ. ಕಂಪ್ಯೂಟರ್ ಮಾನಿಟರ್ ಅಥವಾ ಟಿವಿ ಡಿಸ್‌ಪ್ಲೇ, ಕ್ಯಾಮೆರಾ ಅಥವಾ ಇಮೇಜ್ ಸ್ಕ್ಯಾನರ್‌ನಲ್ಲಿ ಪಿಪಿಐ ಯನ್ನು ಕಂಡುಕೊಳ್ಳಬಹುದು. ಡಿಸ್‌ಪ್ಲೇ ಸ್ಕ್ರೀನ್‌ನಲ್ಲಿರುವ ಪಾಯಿಂಟ್‌ಗಳ ತೀಕ್ಷ್ಣತೆಯ ಅಳತೆಯನ್ನು ಪಿಪಿಐ ಎಂದು ಸರಳವಾಗಿ ಅರ್ಥೈಸಿಕೊಳ್ಳಬಹುದಾಗಿದೆ.

ಡಿಪಿಐ ಎಂದರೇನು?: ಡಿಪಿಐ ಎಂದರೆ ಡಾಟ್ಸ್ ಪರ್ ಇಂಚ್. ಇದು ಸ್ಕ್ರೀನ್ ಮತ್ತು ಇನ್ ಪ್ರಿಂಟ್‌ ಇವೆರಡರಲ್ಲೂ ಇರುವ ಇಮೇಜ್‌ನ ರೆಸಲ್ಯೂಶನ್ ಅನ್ನು ಅಳತೆ ಮಾಡುತ್ತದೆ. ನೀವು ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಹೆಚ್ಚಿನ ಎಪಿಕೆ ಫೈಲ್‌ಗಳನ್ನು ಇಂಟರ್ನೆಟ್‌ನಲ್ಲಿ ಕಂಡಿರುತ್ತೀರಿ. ಈ ಎಪಿಕೆ ಫೈಲ್‌ಗಳನ್ನು ಬೇರೆ ಬೇರೆ ಅಂಶಗಳ ಮೂಲಕ ವರ್ಗೀಕರಿಸಲಾಗುತ್ತದೆ ಅಂದರೆ ಪ್ರೊಸೆಸರ್ ಪ್ರಕಾರಗಳು ಮತ್ತು ಡಿಪಿಐ ಮೌಲ್ಯಗಳು ಎಂದಾಗಿದೆ. ಇದು ಡಿವೈಸ್‌ನ ಡಿಸ್‌ಪ್ಲೇ ಡೆನ್ಸಿಟಿಯನ್ನು ಪ್ರತಿನಿಧಿಸುತ್ತಿದ್ದು ಇದರಿಂದ ಬಳಕೆದಾರರು ಸ್ಕ್ರೀನ್ ಮೇಲೆ ಯಾವ ಬಗೆಯ ಅಂಶ ಸರಿಹೊಂದುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ಡಿಪಿಐ ಮೌಲ್ಯ ತಿಳಿಯುವುದು ಹೇಗೆ?: ನಿಮ್ಮ ಫೋನ್‌ನ ಡಿಪಿಐ ಮೌಲ್ಯವನ್ನು ಕಂಡುಕೊಳ್ಳಲು, ನೀವು “ಡಿಸ್‌ಪ್ಲೇ ಇನ್‌ಫೋ” ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಈಗ ಡೆನ್ಸಿಟಿ ಕ್ಷೇತ್ರದತ್ತ ಗಮನಹರಿಸಿ ಮತ್ತು ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸೈಟ್‌ಗೆ ಹೋಗಿ. ನಂತರ ಮೊಬೈಲ್​ನ ಹೆಸರಿನಲ್ಲಿರುವ ಡಿಪಿಐ ಮೌಲ್ಯವನ್ನು ಪರಿಶೀಲಿಸಿಕೊಳ್ಳಬಹುದು.

ನಿಮ್ಮ ಫೋನ್‌ನ ಡಿಪಿಐ ಮೌಲ್ಯವನ್ನು ತಿಳಿದುಕೊಂಡ ನಂತರವಷ್ಟೇ ಸ್ಮಾರ್ಟ್‌ಪೋನ್ ಖರೀದಿಸಲು ಮುಂದಾಗಿ. ಸ್ಯಾಮ್‌ಸಂಗ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಈ ವಿಷಯದಲ್ಲಿ ಹೆಚ್ಚು ಸೂಕ್ತವಾಗಿವೆ ಎಂದು ಹೇಳಲಾಗುತ್ತದೆ.

Published On - 3:36 pm, Mon, 16 August 21

22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!