ಪ್ರಸಿದ್ಧ ರಿಯಲ್ ಮಿ ಕಂಪನಿಯ ಬಹುನಿರೀಕ್ಷಿತ ರಿಯಲ್ ಮಿ 14 Pro ಸರಣಿಯು ಅಂತಿಮವಾಗಿ ಭಾರತದಲ್ಲಿ ಬಿಡುಗಡೆಯಾಗಿದೆ. ಇದು ಎರಡು ಮಾದರಿಗಳನ್ನು ಒಳಗೊಂಡಿದೆ: ರಿಯಲ್ ಮಿ 14 Pro ಮತ್ತು ರಿಯಲ್ ಮಿ 14 Pro+. ಈ ಫೋನ್‌ಗಳ ಪ್ರಮುಖ ಹೈಲೇಟ್ ಎಂದರೆ ಇದರಲ್ಲಿ ಬಣ್ಣ-ಬದಲಾಯಿಸುವ ತಂತ್ರಜ್ಞಾನ ನೀಡಲಾಗಿದೆ. ಅಂದರೆ ಈ ಫೋನಿನ ಪರ್ಲ್ ವೈಟ್ ರೂಪಾಂತರದಲ್ಲಿ ಕೋಲ್ಡ್ ಸೆನ್ಸಿಟಿವ್ ಬಣ್ಣ-ಬದಲಾವಣೆ ತಂತ್ರಜ್ಞಾನವನ್ನು ಬಳಸಿದೆ. ತಾಪಮಾನವು 16 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾದಾಗ, ಫೋನ್‌ನ ಹಿಂಭಾಗದ ಕವರ್ ಪರ್ಲ್ ವೈಟ್‌ನಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ. ತಾಪಮಾನವು ಹೆಚ್ಚಾದಾಗ ಹಿಂಭಾಗದ ಕವರ್ ಅದರ ಮೂಲ ಬಣ್ಣಕ್ಕೆ ಮರಳುತ್ತದೆ.
ವಿನ್ಯಾಸದ ಜೊತೆಗೆ, ರಿಯಲ್ ಮಿ 14 Pro ಸರಣಿಯು ಕ್ಯಾಮೆರಾ, ಬ್ಯಾಟರಿ ಮತ್ತು ಕಾರ್ಯಕ್ಷಮತೆಯು ಅದ್ಭುತವಾಗಿದೆ. ಇದರ ಬೆಲೆ, ಫೀಚರ್ಸ್ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ರಿಯಲ್ ಮಿ 14 Pro ಬೆಲೆ 8GB + 128GB ಮಾದರಿಗೆ 24,999 ರೂ. ಗಳಿಂದ ಪ್ರಾರಂಭವಾಗುತ್ತದೆ. ರಿಯಲ್ ಮಿ 14 Pro+ 256GB ಮಾದರಿಗೆ 29,999 ರೂ. ಗಳಿಂದ ಪ್ರಾರಂಭವಾಗುತ್ತದೆ. ರಿಯಲ್ ಮಿ 14 Pro+ ನಲ್ಲಿ ಬ್ಯಾಂಕ್ ಕೊಡುಗೆಯ ಮೂಲಕ Rs 4,000 ವರೆಗೆ ರಿಯಾಯಿತಿ ಮತ್ತು ರಿಯಲ್ ಮಿ 14 Pro ನಲ್ಲಿ Rs 2,000 ಬ್ಯಾಂಕ್ ರಿಯಾಯಿತಿಯನ್ನು ಪಡೆಯಬಹುದು. 14 Pro ರೂಪಾಂತರಗಳು ಜನವರಿ 23 ರಿಂದ 12 PM IST ಕ್ಕೆ ಫ್ಲಿಪ್‌ಕಾರ್ಟ್, ರಿಯಲ್ ಮಿ ವೆಬ್‌ಸೈಟ್, ರಿಟೇಲ್ ಸ್ಟೋರ್‌ಗಳ ಮೂಲಕ ಮಾರಾಟವಾಗಲಿದೆ.
ಡಿಸ್‌ಪ್ಲೇ: 120Hz ರಿಫ್ರೆಶ್ ರೇಟ್‌ನೊಂದಿಗೆ 6.77-ಇಂಚಿನ FHD+ AMOLED ಡಿಸ್‌ಪ್ಲೇ, 2392 X 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ.
ಪ್ರೊಸೆಸರ್: ಗ್ರಾಫಿಕ್ಸ್‌ಗಾಗಿ ಮಾಲಿ G615 GPU ನೊಂದಿಗೆ ಜೋಡಿಸಲಾದ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಚಿಪ್‌ಸೆಟ್‌ನಿಂದ ಫೋನ್ ಚಾಲಿತವಾಗಿದೆ.
Tech Tips: ಇಂಟರ್‌ನೆಟ್ ಆನ್ ಆದ ನಂತರವೂ ವಾಟ್ಸ್ಆ್ಯಪ್ನಲ್ಲಿ ಯಾವುದೇ ಮೆಸೇಜ್ ಬಾರದಂತೆ ಮಾಡೋದು ಹೇಗೆ?
ಮೆಮೊರಿ: ಈ ಹ್ಯಾಂಡ್‌ಸೆಟ್ ಎರಡು ಕಾನ್ಫಿಗರೇಶನ್‌ಗಳಲ್ಲಿ ಬರುತ್ತದೆ: 8GB + 128GB ಮತ್ತು 8GB + 256GB ಆಯ್ಕೆಗಳು.
OS: ರಿಯಲ್ ಮಿ 14 Pro ಆಂಡ್ರಾಯ್ಡ್ 15 ಆಧಾರಿತ Realme UI 6 ಕಸ್ಟಮ್ ಸ್ಕಿನ್ ಮೇಲೆ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾಗಳು: 50MP ಸೋನಿ IMX882 ಪ್ರಾಥಮಿಕ ಕ್ಯಾಮೆರಾವನ್ನು f/1.8 ಅಪರ್ಚರ್ ಮತ್ತು OIS ಮತ್ತು ಸೆಕೆಂಡರಿ ಏಕವರ್ಣದ ಲೆನ್ಸ್‌ನೊಂದಿಗೆ ನೀಡಲಾಗಿದೆ. ಮುಂಭಾಗದಲ್ಲಿ 16MP ಸೆಲ್ಫಿ ಶೂಟರ್ ಇದೆ.
ಬ್ಯಾಟರಿ: 45W ವೇಗದ ಚಾರ್ಜಿಂಗ್‌ನೊಂದಿಗೆ 6000mAh ಬ್ಯಾಟರಿಯನ್ನು ಹೊಂದಿದೆ. ಹಾಗೆಯೆ 6000mm2 3D VC ಕೂಲಿಂಗ್ ಸಿಸ್ಟಮ್ ನೀಡಲಾಗಿದೆ.
ಡಿಸ್‌ಪ್ಲೇ: 120Hz ರಿಫ್ರೆಶ್ ದರ, 2800 X 1272 ಪಿಕ್ಸೆಲ್‌ಗಳ ರೆಸಲ್ಯೂಶನ್, 6.83-ಇಂಚಿನ FHD+ AMOLED ಡಿಸ್ಪ್ಲೇಯನ್ನು ಹೊಂದಿದೆ.
ಪ್ರೊಸೆಸರ್: ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s Gen 3 ಚಿಪ್‌ಸೆಟ್‌ನಿಂದ ಗ್ರಾಫಿಕ್ಸ್‌ಗಾಗಿ Adreno GPU ನೊಂದಿಗೆ ಜೋಡಿಸಲ್ಪಟ್ಟಿದೆ.
ಕ್ಯಾಮೆರಾಗಳು: 50MP ಸೋನಿ IMX8986 ಪ್ರಾಥಮಿಕ ಕ್ಯಾಮೆರಾ, 50MP Sony IMX882 3x ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಜೊತೆಗೆ 6x ಇನ್-ಸೆನ್ಸರ್ ಜೂಮ್ ಮತ್ತು 120x ಜೂಮ್ ಮತ್ತು 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 32MP ಲೆನ್ಸ್ ಇದೆ.
ಬ್ಯಾಟರಿ: 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ