ಸ್ಮಾರ್ಟ್‌ಫೋನ್ ಬ್ರ್ಯಾಂಡ್ಗಳ ನೆಚ್ಚಿನ ತಾಣವಾಗಿರುವ ಭಾರತದಲ್ಲಿ ರಿಯಲ್ ಮಿ ಕಂಪೆನಿ ಎರಡು ಹೊಸ ಫೋನ್ ಅನ್ನು ಅನಾವರಣ ಮಾಡಲು ಸಜ್ಜಾಗಿದೆ. ರಿಯಲ್‌ಮಿ 8 ಸ್ಮಾರ್ಟ್‌ಫೋನ್ ಸರಣಿ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ಇದೀಗ ಅದೇ ಸರಣಿಯಲ್ಲಿ ನೂತನವಾಗಿ ರಿಯಲ್‌ಮಿ 8i ಮತ್ತು ರಿಯಲ್‌ಮಿ 8s 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇದೇ ಸೆಪ್ಟೆಂಬರ್ 9ರಂದು ಅಧಿಕೃತವಾಗಿ ವರ್ಚುವಲ್ ಕಾರ್ಯಕ್ರಮದ ಮೂಲಕ ಭಾರತೀಯ ಮಾರುಕಟ್ಟೆಗೆ ಹೊಸ ರಿಯಲ್‌ಮಿ 8i ಮತ್ತು ರಿಯಲ್‌ಮಿ 8s 5G ಸ್ಮಾರ್ಟ್‌ಫೋನ್‌ಗಳು ಲಗ್ಗೆಯಿಡಲಿವೆ.
ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ರಿಯಲ್‌ಮಿ 8i ಮತ್ತು ರಿಯಲ್‌ಮಿ 8s 5G ಸ್ಮಾರ್ಟ್‌ಫೋನ್‌ಗ ಆಕರ್ಷಕ ಫೀಚರ್ಸ್ನಿಂದ ಕೂಡಿದೆ. ರಿಯಲ್‌ಮಿ 8i ಸ್ಮಾರ್ಟ್‌ಫೋನ್ ಅಧಿಕ ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.59 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ರಿಯಲ್‌ಮಿ 8s 5G 6.50 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ.
Two more days to experience cutting-edge technology of the #realme8s5G.
Its #InfinitelyPowerful performance is almost here, brace yourself!
Launching at 12:30 PM, 9th September on our official channels.
Know more: https://t.co/mH1qQ1VrKM pic.twitter.com/mpUDeHWd0S
— realme (@realmeIndia) September 7, 2021
ಇನ್ನೂ ರಿಯಲ್‌ಮಿ 8i ಮೀಡಿಯಾ ಟೆಕ್ ಹಿಲಿಯೊ G96 SoC ಪ್ರೊಸೆಸರ್ ಅನ್ನು ಹೊಂದಿರಲಿದ್ದು, ಆಂಡ್ರಾಯ್ಡ್ 11 ಆಧಾರಿತ ಓಎಸ್ ಸಪೋರ್ಟ್ ಇರಲಿದೆ. ಈ ಫೋನ್ ಎರಡು ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆಯುವ ಸಾಧ್ಯತೆಗಳವೆ. ಅದೇ ರೀತಿ ರಿಯಲ್‌ಮಿ 8s 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 5 ಜಿ SoC ಪ್ರೊಸೆಸರ್ ಹೊಂದಿರಲಿದ್ದು, ಆಂಡ್ರಾಯ್ಡ್ 11 ಸಪೋರ್ಟ್ ಇರಲಿದೆ.
ರಿಯಲ್‌ಮಿ 8i ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿರಲಿದೆ. ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್, ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಹಾಗೂ ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿರಲಿದೆ. ಇನ್ನು ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಕ್ಯಾಮೆರಾ ಇರಲಿದೆ. ಅದೇ ರೀತಿ ರಿಯಲ್‌ಮಿ 8s 5G ಸ್ಮಾರ್ಟ್‌ಫೋನ್ ಮುಖ್ಯ ಕ್ಯಾಮೆರಾವು 64 ಮೆಗಾಪಿಕ್ಸಲ್ ಸೆನ್ಸಾರ್ ಪಡೆದಿರಲಿದ್ದು, ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಿದೆಯಂತೆ.
ಬ್ಯಾಟರಿ ವಿಚಾರಕ್ಕೆ ಬರುವುದಾದರೆ ರಿಯಲ್‌ಮಿ 8i ಮತ್ತು ರಿಯಲ್‌ಮಿ 8s 5G ಈ ಎರಡೂ ಸ್ಮಾರ್ಟ್‌ಫೋನ್‌ಗಳು 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿವೆ. ಇದಕ್ಕೆ ಪೂರಕವಾಗಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿರುವ ಸಾಧ್ಯತೆಗಳು ಸಹ ಇವೆ. ಆದರೆ, ಎಷ್ಟು ವೋಲ್ಟ್ ಆಗಿರಬಹುದೆಂದು ತಿಳಿದುಬಂದಿಲ್ಲ. ಅಂತೆಯೆ ಇದರ ಬೆಲೆ ಎಷ್ಟು ಎಂಬುದನ್ನೂ ಕಂಪೆನಿ ಬಹಿರಂಗ ಪಡಿಸಿಲ್ಲ.
Redmi 10 Prime: 6000mAh ಬ್ಯಾಟರಿ, 50MP ಕ್ಯಾಮೆರಾದ ರೆಡ್ಮಿ 10 ಪ್ರೈಮ್ ಈಗ ಖರೀದಿಗೆ ಲಭ್ಯ: ಅತಿ ಕಡಿಮೆ ಬೆಲೆ
WhatsApp: ವಾಟ್ಸ್ಆ್ಯಪ್ನಲ್ಲಿ ಬರಲಿದೆ ಒಂದಲ್ಲಾ ಎರಡಲ್ಲ 7 ಹೊಸ ಫೀಚರ್ಸ್: ಯಾವುದೆಲ್ಲ ಗೊತ್ತಾ?
(Realme 8i and Realme 8s 5G to Launch on 9 September in India Specifications leaked Ahead of Launch)