Realme anniversary sale: ರಿಯಲ್​ಮೀ ವಾರ್ಷಿಕ ಮಾರಾಟ ಉತ್ಸವ; ವಿವಿಧ ಉತ್ಪನ್ನಗಳ ಮೇಲೆ ಭರ್ಜರಿ ಕೊಡುಗೆ

| Updated By: Srinivas Mata

Updated on: Jun 04, 2021 | 10:16 PM

ರಿಯಲ್​ಮೀ ವಾರ್ಷಿಕ ಮಾರಾಟ ಉತ್ಸವದಲ್ಲಿ ವಿವಿಧ ಉತ್ಪನ್ನಗಳ ಮೇಲೆ ಕೊಡುಗೆಗಳನ್ನು ನೀಡುತ್ತಿದೆ. ಈ ಕೊಡುಗೆ ಜೂನ್ 8, 2021ರ ತನಕ ಇರುತ್ತದೆ.

Realme anniversary sale: ರಿಯಲ್​ಮೀ ವಾರ್ಷಿಕ ಮಾರಾಟ ಉತ್ಸವ; ವಿವಿಧ ಉತ್ಪನ್ನಗಳ ಮೇಲೆ ಭರ್ಜರಿ ಕೊಡುಗೆ
ಸಾಂದರ್ಭಿಕ ಚಿತ್ರ
Follow us on

ರಿಯಲ್​ಮೀ ಇಂಡಿಯಾ ಮೂರನೇ ವಾರ್ಷಿಕೋತ್ಸವ ಆಚರಿಸುತ್ತಿದೆ ಮತ್ತು ಕಂಪೆನಿಯಿಂದ ವಿವಿಧ ಉತ್ಪನ್ನಗಳ ಮೇಲೆ ಶೇಕಡಾ 40ರ ತನಕ ಕಡಿತ ಘೋಷಣೆ ಮಾಡಲಾಗಿದೆ. ರಿಯಲ್​ಮೀ ವಾರ್ಷಿಕೋತ್ಸವ ಮಾರಾಟ ಕಾರ್ಯಕ್ರಮದಲ್ಲಿ ಸ್ಮಾರ್ಟ್​ಫೋನ್​ಗಳು ತಾತ್ಕಾಲಿಕವಾಗಿ ಎಷ್ಟು ಕಡಿಮೆ ಬೆಲೆಗೆ ದೊರೆಯುತ್ತದೆ, ಇದರ ಜತೆಗೆ ಆಯ್ದ ಇ- ವ್ಯಾಲೆಟ್​ಗಳ ಮೂಲಕ ತಕ್ಷಣದ ರಿಯಾಯಿತಿಗಳು ಈ ಬಗ್ಗೆ ಗ್ರಾಹಕರು ತಿಳಿಯಬಹುದು. ಮುಖ್ಯವಾಗಿ ಹೊಸದಾಗಿ ಬಿಡುಗಡೆಯಾದ ರಿಯಲ್​ಮೀ X7 Max 5G ಮತ್ತು ಸ್ಮಾರ್ಟ್ ಟಿವಿ 4K ಕೂಡ ಈ ಆಫರ್​ನಲ್ಲಿ ದೊರೆಯುತ್ತಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇರುವ ಗ್ರಾಹಕರಿಗೆ ರೂ. 2000 ಕಡಿತ ದೊರೆಯುತ್ತದೆ. ಜೂನ್ 4ನೇ ತಾರೀಕಿನಂದು ಮಾರಾಟ ಕಾರ್ಯಕ್ರಮ ಶುರುವಾಗಿದ್ದು, ಜೂನ್ 8, 2021ರ ವರೆಗೆ ರಿಯಲ್​ಮೀ ಇ- ಸ್ಟೋರ್​ನಲ್ಲಿ ದೊರೆಯಲಿದೆ.

ರಿಯಲ್​ಮೀ X7 Max 5G ಸ್ಮಾರ್ಟ್ ಫೋನ್ ಅನ್ನು ರೂ. 26,999ಕ್ಕೆ ಮೇಲ್ಪಟ್ಟು ಖರೀದಿಸಬಹುದು. 8GB+ 128GB ಮಾಡೆಲ್ ಬರುತ್ತದೆ. ಇದರ ಜತೆಗೆ 12GB+256GB ಸಂಗ್ರಹ ಸಾಮರ್ಥ್ಯದ್ದು ಸಹ ಇದೆ. ಆದರೆ ಭಾರತದಲ್ಲಿ ನಂತರ ಸಿಗುತ್ತದೆ. ಫ್ಲಿಪ್​ಕಾರ್ಟ್​ನಲ್ಲೂ ಮಾರಾಟ ನಡೆಯುತ್ತಿದೆ. ಅಲ್ಲಿ ಫ್ಲಿಪ್​ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್​ಗೆ ಶೇಕಡಾ 5ರಷ್ಟು ರಿಯಾಯಿತಿ ಇದೆ. ಗ್ರಾಹಕರಿಗೆ ವಿನಿಮಯ ಆಫರ್ ರೂ. 14,600ರ ತನಕ ಸಿಗುತ್ತದೆ. ಈ ಫೋನ್​ನಲ್ಲಿ ಮೀಡಿಯಾಟೆಕ್​ನ ಡೈಮೆನ್ಸಿಟಿ 1200 SoC ಹಾಗೂ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ, 4500 mAh ಬ್ಯಾಟರಿ ಇದೆ.

ಇನ್ನು ರಿಯಲ್​ಮೀ ಸ್ಮಾರ್ಟ್ ಟೀವಿ 4K ಮೊದಲ ಮಾರಾಟ ಕೂಡ ಶುರುವಾಗುತ್ತದೆ. 43 ಇಮಚಿನ ಮಾಡೆಲ್​ಗೆ ರೂ. 29,999 ಇದ್ದರೆ, 50 ಇಂಚಿನ ಮಾಡೆಲ್​ಗೆ 39,999 ರೂಪಾಯಿ. ಇದು ಹೆಸರೇ ಹೇಳುವಂತೆ ಹೊಸ ಆಂಡ್ರಾಯಿಡ್ ಸ್ಮಾರ್ಟ್​ ಟೀವಿ ಮಾಡೆಲ್ ಅಲ್ಟ್ರಾ ಎಚ್​ಡಿ ರೆಸಲ್ಯೂಷನ್ ಜತೆಗೆ ಬರುತ್ತದೆ. ಇನ್ನು ವಾರ್ಷಿಕ ಮಾರಾಟದ ವೇಳೆ ರಿಲಯಲ್​ಮೀ X7 Pro 5G (8GB + 128GB) ರೂ. 28,499ಕ್ಕೆ ಸಿಗುತ್ತಿದೆ. ಅದರ ಮೂಲ ಬೆಲೆ ರೂ. 29,999 ಇದೆ. ಇನ್ನು ರಿಯಲ್​ಮೀ X3 ಸೂಪರ್​ಝೂಮ್ (12GB + 256GB) ರೂ. 26,999ಕ್ಕೆ ಖರೀದಿಗೆ ಇದೆ. ಅದರ ಬೆಲೆ ರೂ. 32,999. ಇನ್ನು X7 Pro 5Gಯಲ್ಲಿ ಡೈಮೆನ್ಸಿಟಿ 1000 SoC, 64-ಮೆಗಾಪಿಕ್ಸೆಲ್ ಕ್ವಾಡ್ ಹಿಂಬದಿ ಕ್ಯಾಮೆರಾಗಳು ಮತ್ತು 120Hz ಡಿಸ್​ಪ್ಲೇ ಇದೆ. X3 ಸೂಪರ್​ಝೂಮ್, ಮತ್ತೊಂದು ಕಡೆ 120Hz ಡಿಸ್​ಪ್ಲೇ, ಸ್ನ್ಯಾಪ್​ಡ್ರ್ಯಾಗನ್ 855+ SoC, ಮತ್ತು 64-ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮೆರಾದೊಂದಿಗೆ ಬರುತ್ತದೆ.

ಹೊಸ ರಿಯಲ್​ಮೀ Narzo 30A (3GB + 32GB) ರೂ. 8,499ಕ್ಕೆ ಸಿಗುತ್ತಿದೆ (MRP ರೂ 8,999) ಮತ್ತು Narzo 30 Pro 5G (6GB + 64GB) ರೂ. 15,999ಕ್ಕೇ ಸಿಗುತ್ತಿದೆ. ಅದರ ಮೂಲ ಬೆಲೆ ರೂ. 16,999. ರಿಯಲ್​ಮೀಯಿಂದ ರಿಯಲ್​ಮೀ ಬಡ್ಸ್ ಏರ್​ ಪ್ರೋ ಮೇಲೆ 500 ರೂಪಾಯಿ ಆಫರ್​ ಇದೆ. ರಿಯಲ್​ಮೀ ಬಡ್ Q 20-ಗಂಟೆಗಳ ಬ್ಯಾಟರಿಯೊಂದಿಗೆ ಬರಲಿದ್ದು, ಅದು 1999 ರೂ. ಬದಲಿಗೆ ರೂ. 1,799ಕ್ಕೆ ಸಿಗುತ್ತಿದೆ. ಈ ವಾರದ ಆರಂಭದಲ್ಲಿ ರಿಯಲ್​ಮೀ ಕಡೆಯಿಂದ ರಿಯಲ್​ಮೀ GT 5G ಜಾಗತಿಕ ಬಿಡುಗಡೆ ಬಗ್ಗೆ ಘೋಷಿಸಲಾಯಿತು. ಅದು ಜೂನ್​ನಲ್ಲಿ ಬಿಡುಗಡೆ ಆಗುವ ಬಗ್ಗೆ ಹೇಳಲಾಯಿತು. ಇದರ ಜತೆಗೆ ಹೊಸ ರಿಯಲ್​ಮೀ GT ಕ್ಯಾಮೆರಾ ಫ್ಲ್ಯಾಗ್​ಶಿಪ್ ಫೋನ್ ಜುಲೈನಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: Poco M3: ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ 6 ಜಿಬಿ RAM, 6,000 mAh ಬ್ಯಾಟರಿ ಮೊಬೈಲ್ ಫೋನ್!

(Realme anniversary sales offer on various products. It will end on June 8th, 2021. Here is the complete details of the offer)

Published On - 10:16 pm, Fri, 4 June 21