Realme C53: ಭಾರತಕ್ಕೆ ಬಂತು 108MP ಕ್ಯಾಮೆರಾದ ಹೊಸ ರಿಯಲ್ ಮಿ C53 ಫೋನ್: ಬೆಲೆ ಕೇವಲ …

ರಿಯಲ್ ಮಿ C53 ಯಲ್ಲಿ ಬಲಿಷ್ಠವಾದ ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ, ಅತ್ಯುತ್ತಮ ಪ್ರೊಸೆಸರ್ ನೀಡಲಾಗಿದೆ. ಈ ಫೋನಿನ ಸಂಪೂರ್ಣ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

Realme C53: ಭಾರತಕ್ಕೆ ಬಂತು 108MP ಕ್ಯಾಮೆರಾದ ಹೊಸ ರಿಯಲ್ ಮಿ C53 ಫೋನ್: ಬೆಲೆ ಕೇವಲ ...
Realme C53

Updated on: Jul 20, 2023 | 11:39 AM

ಪ್ರಸಿದ್ಧ ರಿಯಲ್ ಮಿ (Realme) ಕಂಪನಿ ಭಾರತದಲ್ಲಿ ತನ್ನ C ಸರಣಿ ಅಡಿಯಲ್ಲಿ ಹೊಸ ರಿಯಲ್ ಮಿ C53 (Realme C53) ಸ್ಮಾರ್ಟ್​ಫೋನನ್ನು ಅನಾವರಣ ಮಾಡಿದೆ. ಇದರಲ್ಲಿ ಬರೋಬ್ಬರಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದೆ. ಅಚ್ಚರಿ ಎಂದರೆ ಈ ಫೋನಿನ ಬೆಲೆ ಕೇವಲ 9,999 ರೂ. ಆಗಿದೆ. ಇಷ್ಟು ಕಡಿಮೆ ಬೆಲೆಗೆ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಏಕೈಕ ಸ್ಮಾರ್ಟ್​ಫೋನ್ (Smartphone) ಇದಾಗಿದೆ. ಇದಿಷ್ಟೆ ಅಲ್ಲದೆ ರಿಯಲ್ ಮಿ C53 ಯಲ್ಲಿ ಬಲಿಷ್ಠವಾದ ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ, ಅತ್ಯುತ್ತಮ ಪ್ರೊಸೆಸರ್ ನೀಡಲಾಗಿದೆ. ಈ ಫೋನಿನ ಸಂಪೂರ್ಣ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?:

ರಿಯಲ್ ಮಿ C53 ಫೋನ್ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 4GB RAM + 128GB ಸ್ಟೋರೇಜ್ ರೂಪಾಂತರಕ್ಕೆ 9,999 ರೂ. ಇದೆ. ಅಂತೆಯೆ 6GB RAM + 64GB ಸ್ಟೋರೇಜ್ ಆಯ್ಕೆಗೆ 10,999 ರೂ. ನಿಗದಿ ಮಾಡಲಾಗಿದೆ. ಇದು ಚಾಂಪಿಯನ್ ಗೋಲ್ಡನ್ ಮತ್ತು ಚಾಂಪಿಯನ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಸಿಗಲಿದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮತ್ತು ರಿಯಲ್ ಮಿಯ ಅಧಿಕೃತ ವೆಬ್​ಸೈಟ್​ನಲ್ಲಿ ಇದೇ ಜುಲೈ 26 ರಿಂದ ಮಾರಾಟವಾಗಲಿದೆ.

ಇದನ್ನೂ ಓದಿ
Apple MacBook M3: ಬರುತ್ತಿದೆ ಹೊಸ ಸರಣಿಯ ಆ್ಯಪಲ್ ಮ್ಯಾಕ್​ಬುಕ್
Infinix GT 10 Pro: ನಥಿಂಗ್ ಫೋನ್ ವಿನ್ಯಾಸ ಕಾಪಿ ಮಾಡಿತೇ ಇನ್ಫಿನಿಕ್ಸ್ ಫೋನ್?
Honor MagicPad 13: ಆ್ಯಪಲ್ ಐಪ್ಯಾಡ್​ಗೆ ಸ್ಪರ್ಧೆ ಒಡ್ಡುತ್ತಿದೆ ಹೊಸ ಹಾನರ್ ಮ್ಯಾಜಿಕ್​ಪ್ಯಾಡ್
Lenovo Tab M10 5G: ಲೆನೋವೊ ಕಂಪನಿ ಪರಿಚಯಿಸಿದೆ ಹೊಸ ಟ್ಯಾಬ್, ಬೆಲೆ ಎಷ್ಟು ನೋಡಿ..

Realme C53: ಬೆಸ್ಟ್ ಪ್ರೈಸ್​ಗೆ ಬೆಸ್ಟ್ ಫೋನ್ ನೀಡುತ್ತಿದೆ ರಿಯಲ್​ಮಿ

ಫೀಚರ್ಸ್ ಏನಿದೆ?:

ಡ್ಯುಯಲ್ ಸಿಮ್ ಆಯ್ಕೆ ಹೊಂದಿರುವ ರಿಯಲ್ ಮಿ C53 ಆಂಡ್ರಾಯ್ಡ್ 13-ಆಧಾರಿತ ರಿಯಲ್ ಮಿ UI T ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 90Hz ರಿಫ್ರೆಶ್ ದರ, 90.3 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತ, 180Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 560 ನಿಟ್ಸ್ ಬ್ರೈಟ್‌ನೆಸ್‌ನೊಂದಿಗೆ 6.74-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ 12nm ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಜೊತೆಗೆ 6GB ಯ LPDDR4X RAM ಮತ್ತು ARM Mali-G57 GPU ಜೊತೆಗೆ ಸಂಯೋಜಿಸಲ್ಪಟ್ಟಿದೆ.

ಈ ಸ್ಮಾರ್ಟ್​ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು 108-ಮೆಗಾಪಿಕ್ಸೆಲ್ AI- ಬೆಂಬಲಿತ ಪ್ರಾಥಮಿಕ ಸಂವೇದಕವನ್ನು ಹೊಂದಿದೆ. ಮುಂಭಾಗ ಸೆಲ್ಫಿಗಳಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇದರಲ್ಲಿ ಮೈಕ್ರೋ SD ಕಾರ್ಡ್ ಮೂಲಕ (2TB ವರೆಗೆ) ವಿಸ್ತರಿಸಬಹುದಾದ. ಕ್ಯಾಮೆರಾದಲ್ಲಿ ಅನೇಕ ಮೋಡ್ ಆಯ್ಕೆಗಳನ್ನು ನೀಡಲಾಗಿದೆ.

ರಿಯಲ್ ಮಿ C53 ಸ್ಮಾರ್ಟ್​ಫೋನ್ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ. 18W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, GPS/AGPS, Wi-Fi, ಬ್ಲೂಟೂತ್ 5, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಸೇರಿವೆ. ಆನ್‌ಬೋರ್ಡ್ ಸಂವೇದಕಗಳಲ್ಲಿ ಅಕ್ಸೆಲೆರೊಮೀಟರ್, ಮ್ಯಾಗ್ನೆಟಿಕ್ ಸೆನ್ಸರ್, ಲೈಟ್ ಸೆನ್ಸಾರ್, ಗೈರೊ ಮೀಟರ್ ಸೆನ್ಸಾರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅಳವಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Follow Us