ಕಳೆದ ವರ್ಷದಿಂದ ಕಡಿಮೆ ಬೆಲೆಗೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿರುವ ಪ್ರಸಿದ್ಧ ರಿಯಲ್ ಮಿ ಸಂಸ್ಥೆ ಇದೀಗ ಅಂಥಹದೆ ಹೊಸ ಫೋನೊಂದನ್ನು ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಹೊಸ ರಿಯಲ್ ಮಿ C65 (Realme C65) ಬಿಡುಗಡೆಯನ್ನು ದೃಢೀಕರಿಸಲಾಗಿದೆ. ರಿಯಲ್ ಮಿ ನ C ಸರಣಿಯ ಈ ಮುಂಬರುವ ಸ್ಮಾರ್ಟ್‌ಫೋನ್ ಏಪ್ರಿಲ್ 4 ರಂದು ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದರ ವಿನ್ಯಾಸಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಇದು ನೋಡಲು ಥೇಟ್ ಸ್ಯಾಮ್ಸಂಗ್ ಗ್ಯಾಲಕ್ಸಿ S22 ನಂತೆ ಕಾಣುತ್ತದೆ.
ಈ ಮೂಲಕ ಕಂಪನಿಯು ಬಜೆಟ್ ಶ್ರೇಣಿಯಲ್ಲಿ ಆಕರ್ಷಕ ವಿನ್ಯಾಸದ ಫೋನನ್ನು ಪ್ರಸ್ತುತಪಡಿಸಲು ಮುಂದಾಗಿದೆ. ಹಿಂಭಾಗದ ಪ್ಯಾನಲ್ ತುಂಬಾ ಬ್ರೈಟ್ ಇರುವಂತೆ ಕಾಣುತ್ತದೆ. ಈ ಫೋನ್ ಈಗಾಗಲೇ ಅನೇಕ ಪ್ರಮಾಣೀಕರಣ ಸೈಟ್‌ಗಳಲ್ಲಿ ಕಾಣಿಸಿಕೊಂಡಿದೆ. ಕಂಪನಿಯು ತನ್ನ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ ಲಾಂಚ್ ಅನ್ನು ಅಧಿಕೃತವಾಗಿ ಘೋಷಿಸಿದೆ.
ಆನ್ಲೈನ್ನಲ್ಲಿ ಜಿಯೋಗೆ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡುವುದು ಹೇಗೆ?
ರಿಯಲ್ ಮಿ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್ ರಿಯಲ್ ಮಿ C65 ಅನ್ನು ಏಪ್ರಿಲ್ 4 ರಂದು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಕಂಪನಿಯು ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದೆ. ಅಲ್ಲದೆ, ರಿಯಲ್ ಮಿ ಉಪಾಧ್ಯಕ್ಷ ಚೇಸ್ ಕ್ಸು ಕೂಡ ಫೋನ್‌ನ ಟೀಸರ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಫೋನ್ ರಿಯಲ್ ಮಿ C55 ನ ಉತ್ತರಾಧಿಕಾರಿಯಾಗಿದೆ.
Caught a glimpse of the radiant realme C65 just outside our office and it’s too captivating not to share! pic.twitter.com/ONVac2CbxK
— Chase (@ChaseXu_) March 28, 2024
ಡಿಸೈನ್ ಬಗ್ಗೆ ಮಾತನಾಡುತ್ತಾ, ಇದರಲ್ಲಿ ಫ್ಲಾಟ್ ಫ್ರೇಮ್ ಅನ್ನು ಕಾಣಬಹುದು. ಇದರ ವಾಲ್ಯೂಮ್ ಮತ್ತು ಪವರ್ ಬಟನ್‌ಗಳು ಬಲಭಾಗದಲ್ಲಿವೆ. ಪವರ್ ಬಟನ್‌ನಲ್ಲಿಯೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಒದಗಿಸಬಹುದು. ಟೀಸರ್ ಚಿತ್ರದಲ್ಲಿ ನೋಡಬಹುದಾದಂತೆ ಇದರ ಕ್ಯಾಮೆರಾ ಮಾಡ್ಯೂಲ್ ಆಯತಾಕಾರದಲ್ಲಿದೆ. ಇದು ಸ್ಯಾಮ್ಸಂಗ್ ಗ್ಯಾಲಕ್ಸಿ S22 ನಂತೆಯೇ ಕಾಣುತ್ತದೆ. ಕ್ಯಾಮೆರಾ ಜೊತೆಗೆ LED ಫ್ಲಾಷ್ ಕೂಡ ಇದೆ.
ವೈಫೈ ಪಾಸ್‌ವರ್ಡ್ ಮರೆತಿರುವಿರಾ? ಚಿಂತಿಸಬೇಕಾಗಿಲ್ಲ, ಈ ರೀತಿ ಕ್ಷಣಾರ್ಧದಲ್ಲಿ ತಿಳಿಯಿರಿ
ಬಣ್ಣಗಳ ರೂಪಾಂತರಗಳ ಬಗ್ಗೆ ಮಾತನಾಡುತ್ತಾ, ಈ ಫೋನ್ ವೈಲೆಟ್ ಮತ್ತು ಗ್ಯಾಲಕ್ಸಿ ಕಪ್ಪು ಬಣ್ಣದಲ್ಲಿ ಬರುತ್ತದೆ. ಕಂಪನಿಯು ಇದರ ಫೀಚರ್ಸ್ ಅನ್ನು ಇನ್ನೂ ದೃಢೀಕರಿಸಿಲ್ಲ. ಆದರೆ TUV ರೈನ್‌ಲ್ಯಾಂಡ್ ಪ್ರಕಾರ, ಇದು 45W ವೇಗದ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿರುತ್ತದೆ. ಈ ಫೋನ್‌ನ ಮುಖ್ಯ ಕ್ಯಾಮೆರಾ f/1.8 ದ್ಯುತಿರಂಧ್ರದೊಂದಿಗೆ 50MP ಆಗಿರುತ್ತದೆ. ಆಂಡ್ರಾಯ್ಡ್ 14 OS ನೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ