ರಿಯಲ್ ಮಿ GT 5 ಪ್ರೊ ಬಗ್ಗೆ ಹೊರಬಿತ್ತು ಅಚ್ಚರಿ ಸುದ್ದಿ: ಹೊಚ್ಚಹೊಸ ಬಲಿಷ್ಠ ಪ್ರೊಸೆಸರ್

|

Updated on: Oct 26, 2023 | 1:25 PM

Realme GT 5 Pro Officially Teased: Weibo ಪೋಸ್ಟ್‌ನಲ್ಲಿ, ರಿಯಲ್ ಮಿ 'Pro' ಪದದೊಂದಿಗೆ ಟೀಸರ್ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಅಲ್ಲದೆ ರಿಯಲ್ ಮಿ GT 5 ಪ್ರೊ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದೆ. ಜಿಟಿ 5 ಪ್ರೊ ಮಾದರಿಯು ಕ್ವಾಲ್ಕಾಮ್​ನ ಇತ್ತೀಚಿನ ಸ್ನಾಪ್‌ಡ್ರಾಗನ್ 8 Gen 3 SoC ಯೊಂದಿಗೆ ಬರಲಿದೆ

ರಿಯಲ್ ಮಿ GT 5 ಪ್ರೊ ಬಗ್ಗೆ ಹೊರಬಿತ್ತು ಅಚ್ಚರಿ ಸುದ್ದಿ: ಹೊಚ್ಚಹೊಸ ಬಲಿಷ್ಠ ಪ್ರೊಸೆಸರ್
Realme GT 5 Pro
Follow us on

ರಿಯಲ್ ಮಿ ಕಂಪನಿಯ ಬಹುನಿರೀಕ್ಷಿತ ಸ್ಮಾರ್ಟ್​ಫೋನ್ ರಿಯಲ್ ಮಿ GT 5 ಪ್ರೊ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ವರ್ಷದ ಆಗಸ್ಟ್‌ನಲ್ಲಿ ಚೀನಾದಲ್ಲಿ ಬಿಡುಗಡೆಯಾದ ರಿಯಲ್ ಮಿ ಜಿಟಿ 5 ಮಾದರಿಗೆ ಈ ಫೋನ್ ಸೇರ್ಪಡೆ ಆಗುವ ನಿರೀಕ್ಷೆಯಿದೆ. ಕಳೆದ ಎರಡು ತಿಂಗಳುಗಳಿಂದ ಜಿಟಿ 5 ಪ್ರೊ ಬಗ್ಗೆ ಒಂದೊಂದೆ ಮಾಹಿತಿ ಸೋರಿಕೆಯಾಗುತ್ತಿದೆ. ಇದೀಗ ಈ ಫೋನ್ ಪೆರಿಸ್ಕೋಪ್ ಕ್ಯಾಮೆರಾ ಮತ್ತು ಹೊಚ್ಚಹೊಸ ಆಕ್ಟಾ-ಕೋರ್ ಕ್ವಾಲ್ಕಾಮ್ ಚಿಪ್‌ಸೆಟ್‌ನೊಂದಿಗೆ ಬರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕಂಪನಿಯು ಅಧಿಕೃತವಾಗಿ ಈ ಹ್ಯಾಂಡ್‌ಸೆಟ್ ಬಗ್ಗೆ ಖಚಿತಪಡಿಸಿದೆ. ಆದರೆ, ಇನ್ನೂ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ.

Weibo ಪೋಸ್ಟ್‌ನಲ್ಲಿ, ರಿಯಲ್ ಮಿ ‘Pro’ ಪದದೊಂದಿಗೆ ಟೀಸರ್ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಅಲ್ಲದೆ ರಿಯಲ್ ಮಿ GT 5 ಪ್ರೊ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದೆ. ಜಿಟಿ 5 ಪ್ರೊ ಮಾದರಿಯು ಕ್ವಾಲ್ಕಾಮ್​ನ ಇತ್ತೀಚಿನ ಸ್ನಾಪ್‌ಡ್ರಾಗನ್ 8 Gen 3 SoC ಯೊಂದಿಗೆ ಬರಲಿದೆ ಎಂದು ರಿಯಲ್ ಮಿ ವೈಬೊದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದೆ. ಹಿಂದಿನ ವರದಿಗಳ ಪ್ರಕಾರ, ಈ ಫೋನ್ 24GB ವರೆಗೆ LPDDR5X RAM ಮತ್ತು 1TB ವರೆಗೆ UFS 4.0 ಅಂತರ್ಗತ ಸಂಗ್ರಹಣೆಯನ್ನು ಪಡೆಯುವ ನಿರೀಕ್ಷೆಯಿದೆ. ಇದು ಆಂಡ್ರಾಯ್ಡ್ 14-ಆಧಾರಿತ ರಿಯಲ್ ಮಿ UI 5.0 ನೊಂದಿಗೆ ರನ್ ಆಗುತ್ತದಂತೆ.

ಹೊಸ ಸ್ಮಾರ್ಟ್​ಫೋನ್ ಖರೀದಿಸುವಾಗ ಈ 3 ವಿಷಯಗಳನ್ನು ಪರಿಶೀಲಿಸಿ: SAR ಮೌಲ್ಯ ಮುಖ್ಯ

ಇದನ್ನೂ ಓದಿ
ರಿಯಲ್ ಮಿ ನಾರ್ಜೊ N53 ಹೊಸ ರೂಪಾಂತರ ಬಿಡುಗಡೆ: ಬೆಲೆ ಕೇವಲ 11,999 ರೂ.
ಇಂದು ಮಾರುಕಟ್ಟೆಗೆ ಅಪ್ಪಳಿಸಲಿದೆ ಶವೋಮಿ 14 ಸರಣಿ
ಮಕ್ಕಳ ಇನ್ಸ್​ಟಾಗ್ರಾಂ ವ್ಯಸನ; ಮೆಟಾ ವಿರುದ್ಧ ಅಮೆರಿಕದಲ್ಲಿ ಕಾನೂನು ಕ್ರಮ
ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಚಾಟ್ ಫಿಲ್ಟರ್ ಎಂಬ ಆಯ್ಕೆ: ಏನಿದು ನೋಡಿ

ಮುಂಬರುವ ರಿಯಲ್ ಮಿ ಫ್ಲ್ಯಾಗ್‌ಶಿಪ್ ಮಾದರಿಯು 2K ರೆಸಲ್ಯೂಶನ್‌ನೊಂದಿಗೆ BOE AMOLED ಡಿಸ್‌ಪ್ಲೇಯನ್ನು ಪಡೆದಿರುತ್ತದೆ. MySmartPrice ವರದಿಯ ಪ್ರಕಾರ, ರಿಯಲ್ ಮಿ GT 5 ಪ್ರೊ 144Hz ನ ರಿಫ್ರೆಶ್ ದರದೊಂದಿಗೆ 6.82-ಇಂಚಿನ ಪ್ಯಾನೆಲ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

ರಿಯಲ್ ಮಿ GT 5 ಪ್ರೊ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ ಸೋನಿ IMX9 1/1.4x ಪ್ರಾಥಮಿಕ ಸಂವೇದಕವನ್ನು ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 64-ಮೆಗಾಪಿಕ್ಸೆಲ್ OmniVision OV64B ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆಯಿದೆ ಎಂಬ ಮಾತಿದೆ.

ಅಲ್ಲದೆ ಈ ಫೋನ್ 100W ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,400mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಭದ್ರತೆಗಾಗಿ, ಹ್ಯಾಂಡ್‌ಸೆಟ್‌ನಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಅಳವಡಿಸಲಾಗಿದೆ ಎಂದು ಹೇಳಲಾಗುತ್ತದೆ. ಗಮನಾರ್ಹವಾಗಿ, ರಿಯಲ್ ಮಿ GT 5 ಅನ್ನು ಎರಡು ಬ್ಯಾಟರಿ ಮತ್ತು ಚಾರ್ಜಿಂಗ್ ಸಾಮರ್ಥ್ಯದ ರೂಪಾಂತರಗಳಲ್ಲಿ ನೀಡಲಾಗಿತ್ತು. ಇದು 150W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,240mAh ಬ್ಯಾಟರಿ ರೂಪಾಂತರ ಮತ್ತು 240W ವೇಗದ ಚಾರ್ಜಿಂಗ್‌ನೊಂದಿಗೆ 4,600mAh ಬ್ಯಾಟರಿ ರೂಪಾಂತರವಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ