Kannada News Technology Realme GT Neo 3 Thor Love and Thunder Edition now available via flipkart just rs 42999
ಭಾರತದಲ್ಲಿ ಭರ್ಜರಿ ಮಾರಾಟ ಆಗುತ್ತಿದೆ ರಿಯಲ್ ಮಿ GT ನಿಯೋ 3 ಥಾರ್ ಆಂಡ್ ಥಂಡರ್ ಎಡಿಷನ್
ರಿಯಲ್ ಮಿ GT ನಿಯೋ 3 ಥಾರ್ ಆಂಡ್ ಥಂಡರ್ ಎಡಿಷನ್ (Realme GT Neo 3 Thor) ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ (Flipkart) ಹಾಗೂ ಅಧಿಕೃತ ರಿಯಲ್ ಮಿ ತಾಣದ ಮೂಲಕ ಖರೀದಿಗೆ ಸಿಗುತ್ತಿದೆ. ಮಧ್ಯಮ ಬೆಲೆಯ ಈ ಫೋನ್ ಭರ್ಜರಿ ಬೇಡಿಕೆ ಸೃಷ್ಟಿಸಿದೆ.
Realme GT Neo 3 Thor
Follow us on
ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ವಿಭಿನ್ನ ಸ್ಮಾರ್ಟ್ಫೋನ್ಗಳನ್ನು (Smartphone) ಪರಿಚಯಿಸಿ ವಿಶೇಷ ಸ್ಥಾನ ಸಂಪಾದಿಸಿರುವ ರಿಯಲ್ ಮಿ ಕಂಪನಿ ಇತ್ತೀಚೆಗಷ್ಟೆ ಭಾರತದಲ್ಲಿ ರಿಯಲ್ ಮಿ GT ನಿಯೋ 3 ಥಾರ್ ಆಂಡ್ ಥಂಡರ್ ಎಡಿಷನ್ (Realme GT Neo 3 Thor) ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿತ್ತು. ಇದೀಗ ಈ ಫೋನ್ ಜನಪ್ರಿಯ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ (Flipkart) ಹಾಗೂ ಅಧಿಕೃತ ರಿಯಲ್ ಮಿ ತಾಣದ ಮೂಲಕ ಖರೀದಿಗೆ ಸಿಗುತ್ತಿದೆ. ಮಧ್ಯಮ ಬೆಲೆಯ ಈ ಫೋನ್ ಭರ್ಜರಿ ಬೇಡಿಕೆ ಸೃಷ್ಟಿಸಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ Dimensity 8100 ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಪಡೆದಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆ ಇದೆ ಎಂಬುದನ್ನು ನೋಡೋಣ.
ಭಾರತದಲ್ಲಿ ರಿಯಲ್‌ಮಿ GT ನಿಯೋ 3 ಥಾರ್ ಆಂಡ್ ಥಂಡರ್ ಎಡಿಷನ್ ಸ್ಮಾರ್ಟ್‌ಫೋನ್ ಒಂದು ಆಯ್ಕೆಯಲ್ಲಷ್ಟೇ ಇದೆ. ಇದರ 12 GB RAM ಮತ್ತು 256 GB ಇಂಟರ್ ಸ್ಟೋರೇಜ್ ರೂಪಾಂತರದ ಬೆಲೆ 42,999 ರೂ. ಆಗಿದೆ.
ಈ ಫೋನ್ 1,080 x 2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಫುಲ್ HD+ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಒಳಗೊಂಡಿದೆ.
ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 5G SoC ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 12 ನಲ್ಲಿ ರಿಯಲ್‌ಮಿ UI 3.0 ಜೊತೆಗೆ ರನ್ ಆಗುತ್ತದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್ ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಸನ್ಸಾರ್ ಬೆಂಬಲಿಸಲಿದೆ.
ಇದನ್ನೂ ಓದಿ
ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಜೊತೆಗೆ 119-ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್ S5K3P9 ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಈ ಸ್ಮಾರ್ಟ್‌ಫೋನ್ ಎರಡು ಬ್ಯಾಟರಿ ಮತ್ತು ಚಾರ್ಜಿಂಗ್ ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ 4,500mAh ಸಾಮರ್ಥ್ಯದ ಬ್ಯಾಟರಿ 150W ಅಲ್ಟ್ರಾಡಾರ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.
ಇನ್ನು 4500mAh ಸಾಮರ್ಥ್ಯದ ಬ್ಯಾಟರಿಯ 150W ಡಾರ್ಟ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS, NFC ಮತ್ತು USB ಟೈಪ್-C ಪೋರ್ಟ್ ಸೇರಿವೆ.