ರಿಯಲ್ ಮಿ ಕಂಪನಿ ತನ್ನ ದ್ವಿತೀಯ ಅವಧಿಯಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬೊಂಬಾಟ್ ಫೋನುಗಳನ್ನು ಪರಿಚಯಿಸುತ್ತಿರುವ ರಿಯಲ್ ಮಿ ಇದೀಗ ತನ್ನ ನೂತನ ಬಹುನಿರೀಕ್ಷಿತ ರಿಯಲ್ ಮಿ ನಾರ್ಜೊ 60x (Realme Narzo 60x) ಸ್ಮಾರ್ಟ್ಫೋನ್ ಅನ್ನು ಅನಾವರಣ ಮಾಡುವುದಾಗಿ ಹೇಳಿದೆ. ಜೊತೆಗೆ ಬಿಡುಗಡೆ ದಿನಾಂಕವನ್ನು ಕೂಡ ಪ್ರಕಟ ಮಾಡಿದೆ. ರಿಯಲ್ ಮಿ ಭಾರತದಲ್ಲಿ ಸೆಪ್ಟೆಂಬರ್ 12 ರಂದು ಮಧ್ಯಾಹ್ನ 12 ಗಂಟೆಗೆ ನಾರ್ಜೊ 60x ಫೋನ್ ಬಿಡುಗಡೆಯನ್ನು ಖಚಿತಪಡಿಸಿದೆ.
ಹೊಚ್ಚ ಹೊಸ ರಿಯಲ್ ಮಿ ನಾರ್ಜೊ 60x ಫೋನ್ 5G ಬೆಂಬಲ ಪಡೆದುಕೊಂಡಿದ್ದು, 33W SUPERVOOC ವೇಗದ ಚಾರ್ಜಿಂಗ್ ಮೂಲಕ ಮಾರುಕಟ್ಟೆಗೆ ಪ್ರವೇಶಿಸಲಿದೆ. ಇದರೊಂದಿಗೆ, ಅದೇ ದಿನ ಬಡ್ಸ್ T300 ಬಿಡುಗಡೆಗೆ ಆಗಲಿದೆ ಎನ್ನಲಾಗಿದೆ. ಈ ಹೊಸ ಬಡ್ಸ್ ರಿಯಲ್ ಮಿ TWS 30dB ನಾಯ್ಸ್ ಕ್ಯಾನ್ಸಲೇಷನ್ ಮತ್ತು 12.4mm ಡೈನಾಮಿಕ್ ಬಾಸ್ ಡ್ರೈವರ್ ಅನ್ನು ಒಳಗೊಂಡಿರುತ್ತದೆ. ಬಡ್ಸ್ ಮತ್ತು ಹೊಸ ಸ್ಮಾರ್ಟ್ಫೋನ್ ಅಮೆಜಾನ್ನಲ್ಲಿ ಸೇಲ್ ಕಾಣಲಿದೆ.
ಡಿಸ್ ಪ್ಲೇ: ರಿಯಲ್ ಮಿ ನಾರ್ಜೊ 60x ಸ್ಮಾರ್ಟ್ಫೋನ್ ರಿಯಲ್ ಮಿ 11x 5Gಯ ಮರು ಬ್ರ್ಯಾಂಡ್ ಆಗಿದೆ ಎನ್ನಲಾಗಿದೆ. ಈ ಫೋನ್ ಪೂರ್ಣ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.74-ಇಂಚಿನ IPS LCD ಡಿಸ್ ಪ್ಲೇಯನ್ನು ನಿರೀಕ್ಷಿಸಬಹುದು.
ವಿವೋ ಕಂಪನಿಯ ಈ ಎರಡು ಸ್ಮಾರ್ಟ್ಫೋನ್ಗಳ ಬೆಲೆಯಲ್ಲಿ ದಿಢೀರ್ ಇಳಿಕೆ: ಬಜೆಟ್ ಬೆಲೆಗೆ ಲಭ್ಯ
ಕ್ಯಾಮೆರಾಗಳು: ಮುಂಭಾಗದಲ್ಲಿ, ಈ ಫೋನ್ 8MP ಸೆಲ್ಫೀ ಕ್ಯಾಮೆರಾ ಇರುವ ಪಂಚ್ ಹೋಲ್ ಅನ್ನು ಹೊಂದಿರಬಹುದು. ಹಿಂಬದಿಯ ಕ್ಯಾಮೆರಾಗಳು, 64MP ಪ್ರಾಥಮಿಕ ಕ್ಯಾಮೆರಾ ಮತ್ತು 2MP ಡೆಪ್ತ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ.
ಸಾಫ್ಟ್‌ವೇರ್: ಆಂಡ್ರಾಯ್ಡ್ 13 ಆಧರಿಸಿದ ರಿಯಲ್ ಮಿ UI 4.0 ಈ ಫೋನ್ ರನ್ ಆಗುತ್ತದೆ. ಸೆಕ್ಯುರಿಟಿಗಾಗಿ ಈ ಫೋನ್ನಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಆಯ್ಕೆ ನೀಡಲಾಗಿದೆ.
ಚಿಪ್ಸೆಟ್: ಈ ಫೋನಿನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 6100+ 5G ಚಿಪ್‌ಸೆಟ್ ಅಳವಡಿಸಲಾಗಿದೆ. 8GB RAM, 128GB ಸಂಗ್ರಹಣೆ ಮತ್ತು 5000mAh ಬ್ಯಾಟರಿಯನ್ನು ಸಹ ಒಳಗೊಂಡಿರುತ್ತವೆ. 33W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ