ಬಜೆಟ್ ಪ್ರಿಯರ ಬೆಸ್ಟ್ ಫೋನ್ ರೆಡ್ಮಿ 13C ಸ್ಮಾರ್ಟ್ಫೋನ್ ಮಾರಾಟ ಭಾರತದಲ್ಲಿ ಆರಂಭ
Redmi 13C 4G first sale in India: ರೆಡ್ಮಿ 13C ಸ್ಮಾರ್ಟ್ಫೋನ್ ಭಾರತದಲ್ಲಿ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 4GB + 128GB ಗೆ ರೂ. 8999. ಈ ಫೋನ್ ಇದೀಗ Mi.com, ಅಮೆಜಾನ್ ಮತ್ತು ಶವೋಮಿಯ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಕಾಣುತ್ತಿದೆ. ಕಂಪನಿಯು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೂಲಕ ರೂ. 1,000 ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ.
ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ತನ್ನ ಸಬ್ಬ್ರ್ಯಾಂಡ್ ರೆಡ್ಮಿ ಅಡಿಯಲ್ಲಿ ವರ್ಷಾಂತ್ಯದ ವೇಳೆಗೆ ಒಂದರ ಹಿಂದೆ ಒಂದರಂತೆ ಆಕರ್ಷಕ ಬಜೆಟ್ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿದೆ. ಅದರಂತೆ ಕಳೆದ ವಾರ ಭಾರತದಲ್ಲಿ ರೆಡ್ಮಿ 13C 4G ಬಿಡುಗಡೆ ಆಗಿತ್ತು. ಈ ಹ್ಯಾಂಡ್‌ಸೆಟ್ ರೆಡ್ಮಿ 12C ಯ ಉತ್ತರಾಧಿಕಾರಿಯಾಗಿ. ದೊಡ್ಡ ಡಿಸ್ ಪ್ಲೇ, ಮೀಡಿಯಾಟೆಕ್ ಹಿಲಿಯೊ ಪ್ರೊಸೆಸರ್, 50MP ಪ್ರಾಥಮಿಕ ಕ್ಯಾಮೆರಾ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿರುವ ಈ ಫೋನ್ ಇದೀಗ ದೇಶದಲ್ಲಿ ಮಾರಾಟ ಕಾಣುತ್ತಿದೆ.
ಭಾರತದಲ್ಲಿ ರೆಡ್ಮಿ 13C 4G ಬೆಲೆ:
ರೆಡ್ಮಿ 13C ಸ್ಮಾರ್ಟ್ಫೋನ್ ಭಾರತದಲ್ಲಿ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 4GB + 128GB ಗೆ ರೂ. 8999, 6GB + 128GB ಗೆ ರೂ. 9,999 ಮತ್ತು 8GB + 256GB ಮಾದರಿಗೆ ರೂ. 11,499 ನಿಗದಿ ಮಾಡಲಾಗಿದೆ. ಈ ಫೋನ್ Mi.com, ಅಮೆಜಾನ್ ಮತ್ತು ಶವೋಮಿಯ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಕಾಣುತ್ತಿದೆ. ಕಂಪನಿಯು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೂಲಕ ರೂ. 1,000 ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ. ಕಪ್ಪು, ಹಸಿರು ಮತ್ತು ನೇರಳೆ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ A25 5G: ಬರುತ್ತಿದೆ ಸ್ಯಾಮ್ಸಂಗ್ ಕಂಪನಿ ಹೊಸ ಸ್ಮಾರ್ಟ್ಫೋನ್
ರೆಡ್ಮಿ 13C 4G ಫೀಚರ್ಸ್:
ಡಿಸ್‌ಪ್ಲೇ: 90Hz ರಿಫ್ರೆಶ್ ದರದೊಂದಿಗೆ 6.74-ಇಂಚಿನ HD+ ಡಿಸ್‌ಪ್ಲೇ, 1600 × 720 ಪಿಕ್ಸೆಲ್‌ಗಳ ರೆಸಲ್ಯೂಶನ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ, 600nits ಗರಿಷ್ಠ ಬ್ರೈಟ್ನೆಸ್ ಇದರ ಪ್ರಮುಖ ಹೈಲೇಟ್ಸ್.
ಪ್ರೊಸೆಸರ್: ಮೀಡಿಯಾಟೆಕ್ ಹಿಲಿಯೊ G85 SoC ಜೊತೆಗೆ Mali G52 GPUನೊಂದಿಗೆ ಬರುತ್ತದೆ.
RAM/ಸಂಗ್ರಹಣೆ: 8GB ವರೆಗೆ LPDDR4 RAM ಮತ್ತು 256GB UFS 2.2 ಸಂಗ್ರಹಣೆ, ಇದನ್ನು ಮೈಕ್ರೊ SD ಕಾರ್ಡ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ.
ಕ್ಯಾಮೆರಾಗಳು: ಟ್ರಿಪಲ್ ಕ್ಯಾಮೆರಾಗಳಿಂದ ಕೂಡಿದ್ದು 50MP ಪ್ರಾಥಮಿಕ ಕ್ಯಾಮೆರಾ, 2MP ಮ್ಯಾಕ್ರೋ ಲೆನ್ಸ್ ಮತ್ತು ಆಕ್ಸಿಲರಿ ಲೆನ್ಸ್ ನೀಡಲಾಗಿದೆ. ಮುಂಭಾಗದ ಕ್ಯಾಮೆರಾ 8MP ಶೂಟರ್ನಲ್ಲಿದೆ.
OS: ಆಂಡ್ರಾಯ್ಡ್ 13-ಆಧಾರಿತ MIUI 14 ನಲ್ಲಿ ರನ್ ಆಗುತ್ತದೆ.
ಬ್ಯಾಟರಿ: 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ.
ಸಂಪರ್ಕ: 5G/ 4G, ಡ್ಯುಯಲ್-ಸಿಮ್, ವೈಫೈ 802.11, ಬ್ಲೂಟೂತ್ 5.3, 3.5mm ಆಡಿಯೋ ಜ್ಯಾಕ್ ಮತ್ತು GPS, ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ