Kannada News Technology Redmi Note 10 Pro Max A 108MP Camera smartphone has now received a price cut Check new price
Redmi Note 10 Pro Max: 108MP ಕ್ಯಾಮೆರಾದ ರೆಡ್ಮಿ ಸ್ಮಾರ್ಟ್‌ಫೋನ್ ಮೇಲೆ ಬಂಪರ್ ಡಿಸ್ಕೌಂಟ್: ಈ ಆಫರ್ ಮಿಸ್ ಮಾಡ್ಬೇಡಿ
108MP Camera smartphone: ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ ಸ್ಮಾರ್ಟ್ಫೊನ್ ಸದ್ಯ ಬಂಪರ್ ಆಫರ್ನಲ್ಲಿ ಲಭ್ಯವಾಗುತ್ತಿದೆ. ಆಕರ್ಷಕ ಕ್ಯಾಮೆರಾ, ಬಲಿಷ್ಠ ಬ್ಯಾಟರಿ, ಸ್ನಾಪ್ಡ್ರಾಗನ್ ಪ್ರೊಸೆಸರ್ನಿಂದ ಈ ಫೋನ್ ಕೂಡಿದೆ.
Redmi Note 10 Pro Max copy
Follow us on
ಭಾರತದಲ್ಲಿ ಕ್ಯಾಮೆರಾ ಫೋನ್ಗಳ ಹಾವಳಿ ಹೆಚ್ಚಾಗುತ್ತಿದೆ. ಈಗಂತು ಎಲ್ಲಿ ನೋಡಿದರೂ 108 ಮೆಗಾಫಿಕ್ಸೆಲ್ ಕ್ಯಾಮೆರಾ ಫೋನ್ಗಳದ್ದೇ (108MP Camera Phone) ಮಾತು. ಯಾಕೆಂದರೆ ಅಷ್ಟೊಂದು ಕಡಿಮೆ ಬೆಲೆಗೆ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನ್ ಬಿಡುಗಡೆ ಆಗುತ್ತಿದೆ. ಇತ್ತೀಚೆಗಷ್ಟೆ ಶವೋಮಿ ಕೂಡ ತನ್ನ ರೆಡ್ಮಿ ನೋಟ್ ಅಡಿಯಲ್ಲಿ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನನ್ನು ಅನಾವರಣ ಮಾಡಿತ್ತು. ಅದುವೇ ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ (Redmi Note 10 Pro Max). ಈ ಸ್ಮಾರ್ಟ್ಫೊನ್ ಸದ್ಯ ಬಂಪರ್ ಆಫರ್ನಲ್ಲಿ ಲಭ್ಯವಾಗುತ್ತಿದೆ. ಆಕರ್ಷಕ ಕ್ಯಾಮೆರಾ, ಬಲಿಷ್ಠ ಬ್ಯಾಟರಿ, ಸ್ನಾಪ್ಡ್ರಾಗನ್ ಪ್ರೊಸೆಸರ್ನಿಂದ ಈ ಫೋನ್ ಕೂಡಿದೆ. ಹಾಗಾದ್ರೆ ಈ ಫೋನಿಗೆ ಏನು ಆಫರ್ ಇದೆ?, ಇದರ ಬೆಲೆ, ಫೀಚರ್ಸ್ ಏನೇನು? ಎಂಬ ಮಾಹಿತಿ ನೋಡೋಣ.
ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್‌ನ 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಫೋನ್ 18,999 ರೂಪಾಯಿಗೆ ಬಿಡುಗಡೆ ಆಗಿತ್ತು. ಇದೀಗ ಈ ಫೋನ್ಗೆ 1,000 ರೂ. ಗಳ ರಿಯಾಯಿತಿ ಘೋಷಿಸಲಾಗಿದೆ. ಹೀಗಾಗಿ ಇದನ್ನು ನೀವು 17,999 ರೂ. ಗೆ ಖರೀದಿಸಬಹುದು.
ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.
ಆಕ್ಟಾ–ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732G SoC ಪ್ರೊಸೆಸರ್ ಅನ್ನು ಹೊಂದಿದೆ. ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಇನ್ನೂ ಈ ಫೋನಿನ ಪ್ರಮುಖ ಹೈಲೇಟ್ ಕ್ಯಾಮೆರಾ ಆಗಿದೆ. ಇದು ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು ಇದರಲ್ಲಿರುವ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸಾಮರ್ಥ್ಯದಿಂದ ಕೂಡಿದೆ. ಅದು ಸ್ಯಾಮ್‌ಸಂಗ್ ಐಸೊಸೆಲ್ GW3 ಸೆನ್ಸಾರ್ ಹೊಂದಿದೆ.
ಇದನ್ನೂ ಓದಿ
ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೂಪರ್ ಮ್ಯಾಕ್ರೋ ಶೂಟರ್ ಜೊತೆಗೆ 2x ಜೂಮ್, ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ–ವೈಡ್– ಆಂಗಲ್ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.
5,020mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ–ಫೈ, ಬ್ಲೂಟೂತ್, ಇನ್ಫ್ರಾರೆಡ್ (IR), USB ಟೈಪ್–ಸಿ, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿದಂತೆ ಪ್ರಮುಖ ಆಯ್ಕೆಗಳಿವೆ.