Redmi Note 12 Pro 4G: ಶಓಮಿ ರೆಡ್ಮಿ ಸ್ಮಾರ್ಟ್ಫೋನ್ ಸರಣಿಯಲ್ಲಿ ಬಂತು ಹೊಸ ರೆಡ್ಮಿ ನೋಟ್
ಆನ್ಲೈನ್ ಫ್ಲ್ಯಾಶ್ ಸೇಲ್ ಮೂಲಕ ಶಓಮಿ ರೆಡ್ಮಿ ಮತ್ತು ಎಂಐ ಫೋನ್ಗಳು ಭಾರತದಲ್ಲಿ ಗರಿಷ್ಠ ಸಂಖ್ಯೆಯ ಜನಪ್ರಿಯತೆ ಗಳಿಸಿದ್ದು, ಮಾರಾಟ ವೃದ್ಧಿಸಿಕೊಂಡಿದೆ. ಶಓಮಿ ಕಂಪನಿಯ ನೋಟ್ ಸರಣಿಯ ಬ್ರ್ಯಾಂಡ್ನಲ್ಲಿ ಹೊಸ ಶಓಮಿ ರೆಡ್ಮಿ ನೋಟ್ 12 Pro 4G ಫೋನ್ ಬಿಡುಗಡೆಯಾಗಿದ್ದು, ಅದರ ವಿಶೇಷತೆ, ವಿವರ ಇಲ್ಲಿದೆ.
ಶಓಮಿ ರೆಡ್ಮಿ ಮತ್ತು ಎಂಐ ಫೋನ್ಗಳಿಗೆ ಭಾರತದಲ್ಲಿ ಹೆಚ್ಚಿನ ಪ್ರಮಾಣದ ಮಾರುಕಟ್ಟೆಯಿದೆ. ಕಳೆದ ಎಂಟು ವರ್ಷಗಳಲ್ಲಿ ಶಓಮಿ ಕಂಪನಿ ಭಾರತದಲ್ಲಿ ವಿವಿಧ ಮಾದರಿಯ ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡಿದೆ. ಆನ್ಲೈನ್ ಫ್ಲ್ಯಾಶ್ ಸೇಲ್ ಮೂಲಕ ಶಓಮಿ ರೆಡ್ಮಿ ಮತ್ತು ಎಂಐ ಫೋನ್ಗಳು ಭಾರತದಲ್ಲಿ ಗರಿಷ್ಠ ಸಂಖ್ಯೆಯ ಜನಪ್ರಿಯತೆ ಗಳಿಸಿದ್ದು, ಮಾರಾಟ ವೃದ್ಧಿಸಿಕೊಂಡಿದೆ. ಶಓಮಿ ಕಂಪನಿಯ ನೋಟ್ ಸರಣಿಯ ಬ್ರ್ಯಾಂಡ್ನಲ್ಲಿ ಹೊಸ ಶಓಮಿ ರೆಡ್ಮಿ ನೋಟ್ 12 Pro 4G ಫೋನ್ ಬಿಡುಗಡೆಯಾಗಿದ್ದು, ಅದರ ವಿಶೇಷತೆ, ವಿವರ ಇಲ್ಲಿದೆ. ಶಓಮಿ ಹೊಸ ರೆಡ್ಮಿ ನೋಟ್ 12 Pro 4G ಫೋನ್ ಬಿಡುಗಡೆಯಾಗಿದ್ದು, 6.67 ಇಂಚಿನ HD+ (1,080×2,400 ಪಿಕ್ಸೆಲ್ಸ್) AMOLED ಡಿಸ್ಪ್ಲೇ ಹೊಂದಿದೆ. Android 12 ಆಧಾರಿತ MIUI 13 ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಸ್ನ್ಯಾಪ್ಡ್ರ್ಯಾಗನ್ 732G ಪ್ರೊಸೆಸರ್ ಬಳಸಿರುವ ರೆಡ್ಮಿ ನೋಟ್ 12 Pro 4Gಯಲ್ಲಿ 108 MP+ 8 MP+ 2 MP ಹಿಂಬದಿ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಜತೆಗೆ, 5,000mAh ಬ್ಯಾಟರಿ ಜತೆಗೆ 67W ಟರ್ಬೋ ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ.