ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಏನಾದರು ಹೊಸತನವನ್ನು ಪ್ರಯತ್ನ ಮಾಡುವುದರಲ್ಲಿ ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಸಂಸ್ಥೆ ಎತ್ತಿದ ಕೈ. ಈಗಂತು ಅಪರೂಪಕ್ಕೆ ಮೊಬೈಲ್ಗಳನ್ನು ಪರಿಚಯಿಸುತ್ತಿರುವ ಶವೋಮಿ ಸಮಯ ತೆಗೆದುಕೊಂಡ ವಿಭಿನ್ನವಾದ ಮೊಬೈಲ್ನೊಂದಿಗೆ ಬರುತ್ತದೆ. ಅದರಂತೆ ಇದೀಗ ಶವೋಮಿ ತನ್ನ ರೆಡ್ಮಿ ಬ್ರ್ಯಾಂಡ್ ನಡಿಯಲ್ಲಿ ಭಾರತದಲ್ಲಿ ಹೊಸ ಪವರ್ಫುಲ್ ಮೊಬೈಲ್ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಅದುವೇ ರೆಡ್ಮಿ ನೋಟ್ 12 ಸರಣಿ (Redmi Note 12 series). ಇದರಲ್ಲಿ ರೆಡ್ಮಿ ನೋಟ್ 12, ರೆಡ್ಮಿ ನೋಟ್ 12 ಪ್ರೊ ಮತ್ತು ರೆಡ್ಮಿ ನೋಟ್ 12 ಪ್ರೊ+ (Redmi Note 12 Pro +) ಎಂಬ ಮೂರು ಸ್ಮಾರ್ಟ್ಫೋನ್ಗುಗಳಿವೆ. ಈ ಫೋನ್ಗಳು ಹೊಸ ವರ್ಷ 2023ಕ್ಕೆ ಭಾರತದಲ್ಲಿ ಅನಾವರಣಗೊಳ್ಳಲಿದೆ. ಅಲ್ಲದೆ ಇದು ಹೊಸ ವರ್ಷದ ಮೊದಲ ಸ್ಮಾರ್ಟ್‌ಫೋನ್ ಆಗಿರಲಿದೆ. ವಿಶೇಷ ಎಂದರೆ ಇದರಲ್ಲಿ ರೆಡ್ಮಿ ನೋಟ್ 12 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್ ಬರೋಬ್ಬರಿ 200 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಹೊಂದಿರಲಿದೆಯಂತೆ.
ಡಿಸ್ಪ್ಲೇ-ಪ್ರೊಸೆಸರ್
ಈ ಮೂರು ಸ್ಮಾರ್ಟ್ಫೋನ್ಗಳ ಪೈಕಿ ರೆಡ್ಮಿ ನೋಟ್ 12 ಪ್ರೊ+ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಇದು 2,400 x 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಬೆಂಬಲಿಸಲಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 1080 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೆ ಈ ಸರಣಿಯ ರೆಡ್ಮಿ ನೋಟ್ 12 ಪ್ರೊ ಕೂಡ ಇದೆ ಪ್ರೊಸೆಸರ್ ಹೊಂದಿದೆ. ಆದರೆ ರೆಡ್ಮಿ ನೋಟ್ 12 ಸ್ನಾಪ್ಡ್ರಾಗನ್ 4 Gen 1 ಪ್ರೊಸೆಸರ್ನಿಂದ ಕೆಲಸ ಮಾಡುತ್ತದೆ. ಉಳಿದಂತೆ ಮೂರು ಫೋನಿನ ಡಿಸ್ ಪ್ಲೇ ಒಂದೇರೀತಿಯಿದೆ.
Samsung Galaxy M04: ಗ್ಯಾಲಕ್ಸಿ M ಸರಣಿಯಲ್ಲಿ ಬಂದಿದೆ ಹೊಸ ಸ್ಮಾರ್ಟ್‌ಫೋನ್: ಬೆಲೆ ಕೇವಲ 8,499 ರೂಪಾಯಿ
ಕ್ಯಾಮೆರಾ:
ರೆಡ್ಮಿ ನೋಟ್ 12 ಪ್ರೊ+: ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 200 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಪಡೆದುಕೊಂಡಿದೆ, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ.
ರೆಡ್ಮಿ ನೋಟ್ 12 ಪ್ರೊ: ಇದುಕೂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಪಡೆದುಕೊಂಡಿದೆ, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ.
ರೆಡ್ಮಿ ನೋಟ್ 12: ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಪಡೆದುಕೊಂಡಿದೆ, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ನಿಂದ ಕೂಡಿದೆ. ಇದಲ್ಲದೆ 8ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ.
ಬ್ಯಾಟರಿ-ಬೆಲೆ:
ಈ ಮೂರು ಸ್ಮಾರ್ಟ್ಫೋನ್ಗಳು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರಲ್ಲಿ ನೋಟ್ 12 33W ವೇಗದ ಚಾರ್ಜಿಂಗ್, ನೋಟ್ 12 ಪ್ರೊ 67W ವೇಗದ ಚಾರ್ಜಿಂಗ್ ಹಾಗೂ ನೋಟ್ 12 ಪ್ರೊ+ 210W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ನೋಟ್ 12 ಪ್ರೊ+ ಕೇವಲ 9 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತಂತೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, ವೈಫೈ 6, GNSS, NFC, ಮತ್ತು USB ಟೈಪ್-ಸಿ ನೀಡಲಾಗಿದೆ.
ಈ ಫೋನುಗಳು ಈಗಾಗಲೇ ಚೀನಾದಲ್ಲಿ ಬಿಡುಗಡೆ ಆಗಿ ಧೂಳೆಬ್ಬಿಸುತ್ತುದೆ. ಭಾರತದಲ್ಲಿ ಈ ಫೋನಿನ ನಿಖರ ಬೆಲೆ ಬಹಿರಂಗವಾಗಿಲ್ಲ. ಆದರೆ, ಚೀನಾದಲ್ಲಿ ರೆಡ್ಮಿ ನೋಟ್ 12 5G ಆರಂಭಿಕ ಬೆಲೆ CNY 1,199, ಅಂದರೆ ಭಾರತದಲ್ಲಿ ಅಂದಾಜು 13,600ರೂ., ರೆಡ್ಮಿ ನೋಟ್ 12 ಪ್ರೊ 5G ಆರಂಭಿಕ ಬೆಲೆ CNY 1,699, ಅಂದರೆ ಭಾರತದಲ್ಲಿ ಅಂದಾಜು 19,300ರೂ., ರೆಡ್ಮಿ ನೋಟ್ 12 ಪ್ರೊ+ 5G ಆರಂಭಿಕ ಬೆಲೆ CNY 2,199, ಅಂದರೆ ಭಾರತದಲ್ಲಿ ಅಂದಾಜು 25,500ರೂ. ಎನ್ನಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Sun, 11 December 22