WhatsApp: ವಿಂಡೋಸ್ ವಾಟ್ಸ್​ಆ್ಯಪ್ ಬಳಕೆದಾರರಿಗೆ ಬರುತ್ತಿದೆ ಅಚ್ಚರಿ ಫೀಚರ್: ಹೊಸ ಅಪ್ಡೇಟ್​ನಲ್ಲಿ ಏನಿದೆ ನೋಡಿ

ವಾಟ್ಸ್​ಆ್ಯಪ್​ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮೆಸೇಜ್ ವಿಥ್ ಯುವರ್ ​ಸೆಲ್ಫ್ ಎಂಬ ಹೊಸ ಫೀಚರ್ ಕೆಲವೇ ದಿನಗಳಲ್ಲಿ ಸಿಗಲಿದೆ. ಹೀಗಿರುವಾಗ ಇದೇ ಆಯ್ಕೆ ವಿಂಡೋಸ್ ಬೇಟಾ ಆ್ಯಪ್​ನಲ್ಲಿ ಕಾಣಿಸಿಕೊಂಡಿದೆ.

WhatsApp: ವಿಂಡೋಸ್ ವಾಟ್ಸ್​ಆ್ಯಪ್ ಬಳಕೆದಾರರಿಗೆ ಬರುತ್ತಿದೆ ಅಚ್ಚರಿ ಫೀಚರ್: ಹೊಸ ಅಪ್ಡೇಟ್​ನಲ್ಲಿ ಏನಿದೆ ನೋಡಿ
whatsapp windows
Follow us
| Updated By: Vinay Bhat

Updated on:Dec 10, 2022 | 2:22 PM

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ವಿನೂತನವಾದ ಅಪ್ಡೇಟ್ ಮೂಲಕ ಸುದ್ದಿಯಾಗುತ್ತಲೇ ಇದೆ. ಈಗೀಗ ಒಮ್ಮೆಲೆ 4,5 ಹೊಸ ಹೊಸ ಆಯ್ಕೆಯನ್ನು ನೀಡುತ್ತಿರುವ ವಾಟ್ಸ್​ಆ್ಯಪ್​ನಲ್ಲಿ ಸಾಲು ಸಾಲು ಅಪ್ಡೇಟ್​ಗಳು ಬರಲು ತಯಾರಾಗಿ ನಿಂತಿದೆ. ಇತ್ತೀಚೆಗಷ್ಟೆ ವಾಟ್ಸ್​ಆ್ಯಪ್ ಶೀಘ್ರದಲ್ಲಿ ತನ್ನ ಆಂಡ್ರಾಯ್ಡ್ (Android) ಮತ್ತು ಐಒಎಸ್ ಬಳಕೆದಾರರಿಗೆ ಮೆಸೇಜ್ ವಿಥ್ ಯುವರ್ ಸೆಲ್ಫ್ ಎಂಬ ಆಯ್ಕೆಯನ್ನು ಅಭಿವೃದ್ದಿ ಪಡಿಸುತ್ತಿರುವ ಬಗ್ಗೆ ತಿಳಿಸಿತ್ತು. ಇದೀಗ ಇದೇ ಆಯ್ಕೆಯನ್ನು ವಿಂಡೋಸ್ ಬಳಕೆದಾರರಿಗೆ ನೀಡಲು ವಾಟ್ಸ್​ಆ್ಯಪ್ ಮುಂದಾಗಿದೆ. ಈ ಫೀಚರ್ ಮೂಲಕ ವಾಟ್ಸ್​ಆ್ಯಪ್​ನಲ್ಲಿ ನಿಮ್ಮ ನಂಬರ್​ಗೆ ನೀವೇ ಮೆಸೇಜ್ ಮಾಡಬಹುದು.

ವಾಟ್ಸ್​ಆ್ಯಪ್​ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮೆಸೇಜ್ ವಿಥ್ ಯುವರ್ ​ಸೆಲ್ಫ್ ಎಂಬ ಹೊಸ ಫೀಚರ್ ಕೆಲವೇ ದಿನಗಳಲ್ಲಿ ಸಿಗಲಿದೆ. ಹೀಗಿರುವಾಗ ಇದೇ ಆಯ್ಕೆ ವಿಂಡೋಸ್ ಬೇಟಾ ಆ್ಯಪ್​ನಲ್ಲಿ ಕಾಣಿಸಿಕೊಂಡಿದೆ. 2.2248.2.0 ಅಪ್ಡೇಟ್​ನಲ್ಲಿ ಈ ಆಯ್ಕೆ ಸಿಗಲಿದೆ. ವಾಟ್ಸ್​ಆ್ಯಪ್​ನಲ್ಲಿ ನಿಮಗೆ ನೀವೇ ಮೆಸೇಜ್ ಮಾಡಲು ಈಗಲು ಸಾಧ್ಯವಿದೆ. ಆದರೆ, ಅದು ಗ್ರೂಪ್ ಒಂದನ್ನು ರಚಿಸಿ ನೀವೊಬ್ಬರೆ ಆ ಗ್ರೂಪ್​ನ ಸದಸ್ಯರಾಗಿ ಮೆಸೇಜ್ ಮಾಡಬಹುದು. ಆದರೀಗ ವಾಟ್ಸ್​ಆ್ಯಪ್ ನೀಡಲಿರುವ ಈ ಹೊಸ ಆಯ್ಕೆಯಲ್ಲಿ ಕಾಂಟೆಕ್ಟ್​ ಲಿಸ್ಟ್​ನಲ್ಲಿ ಬೇರೆಯವರ ನಂಬರ್ ಜೊತೆ ನಿಮ್ಮ ನಂಬರ್ ಕೂಡ ಕಾಣಲಿದೆ. ಆ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಚಾಟ್ ಬಾಕ್ಸ್ ಕೂಡ ತೆರೆಯಲಿದ್ದು ಆಗ ನಿಮಗೆ ನೀವೇ ಮಸೇಜ್ ಮಾಡಬಹುದಾಗಿದೆ.

Realme 10 Pro: 108MP ಕ್ಯಾಮೆರಾ, 67W ಫಾಸ್ಟ್ ಚಾರ್ಜರ್: ರಿಯಲ್ ಮಿಯಿಂದ ಊಹಿಸಲಾಗದ ಬೆಲೆಗೆ ಸ್ಮಾರ್ಟ್​ಫೋನ್ ರಿಲೀಸ್

ಇದನ್ನೂ ಓದಿ
Image
Samsung Galaxy M04: ಗ್ಯಾಲಕ್ಸಿ M ಸರಣಿಯಲ್ಲಿ ಬಂದಿದೆ ಹೊಸ ಸ್ಮಾರ್ಟ್​ಫೋನ್: ಬೆಲೆ ಕೇವಲ 8,499 ರೂಪಾಯಿ
Image
Best Camera Phone: 20 ಸಾವಿರ ರೂ. ಒಳಗಡೆ ಬೊಂಬಾಟ್ ಕ್ಯಾಮೆರಾದ ಫೋನ್ ಹುಡುಕುತ್ತಿದ್ದರೆ ಇದುವೇ ಬೆಸ್ಟ್ ಆಯ್ಕೆ
Image
Shocking News: 6 ಲಕ್ಷ ಭಾರತೀಯರ ವೈಯಕ್ತಿಕ ಡೇಟಾ ಹ್ಯಾಕ್, ಮಾಲ್‌ವೇರ್‌ ಸಾಧನ ತಡೆಯಲು ಹೀಗೆ ಮಾಡಿ
Image
Twitter New Feature: ಟ್ವಿಟರ್​ನಲ್ಲೂ ಲಭ್ಯವಾಗಲಿದೆ ವಿವ್ಸ್ ಕೌಂಟ್; ಎಲಾನ್ ಮಸ್ಕ್ ಘೋಷಣೆ

ಸ್ಟೇಟಸ್​ನಲ್ಲಿ ವಾಯ್ಸ್ ಮೆಸೇಜ್ ಹಾಕಿ:

ಇನ್ನು ಸದ್ಯದಲ್ಲೇ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ವಾಯ್ಸ್ ಮೆಸೇಜ್ ಅನ್ನು ಹಂಚಿಕೊಳ್ಳಬಹುದಂತೆ. ವಾಯ್ಸ್ ನೋಟ್ ಅನ್ನು ಸ್ಟೇಟಸ್​ನಲ್ಲಿ ಹಂಚಿಕೊಳ್ಳಬಹುದಾದ ಆಯ್ಕೆ ಮೊದಲಿಗೆ ಐಒಎಸ್ ಬಳಕೆದಾರರಿಗೆ ಸಿಗಲಿದೆ. ಈವರೆಗೆ ಸ್ಟೇಟಸ್​ನಲ್ಲಿ ವಿಡಿಯೋ, ಫೋಟೋ, ಲಿಂಕ್​ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದು. ವಾಯ್ಸ್ ನೋಟ್ ಎಂಬ ಹೊಸ ಫೀಚರ್ ಬಂದರೆ ಬಳಕೆದಾರರು ಸ್ಟೇಟಸ್​ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್​ಗಳನ್ನು ಶೇರ್ ಮಾಡಬಹುದಾಗಿದೆ. 30 ಸೆಕೆಂಡ್​ಗಳ ಕಾಲ ಇದು ಇರಲಿದೆ. ಇದಕ್ಕಾಗಿ ಬರಹಗಳನ್ನು ಹಂಚಿಕೊಳ್ಳಬಹುದಾದ ಜಾಗದಲ್ಲಿ ಮೈಕ್ರೊ ಫೋನ್ ಆಯ್ಕೆಯನ್ನು ಕೂಡ ನೀಡಲಾಗಿದೆ. ಇಲ್ಲಿ ಮೈಕ್ರೊ ಫೋನ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾಯ್ಸ್ ಸ್ಟೇಟಸ್ ಶೇರ್ ಮಾಡಬಹುದು. ಇದು ಎಂಡ್-ಟು-ಎಂಡ್ ಎನ್​ಕ್ರಿಪ್ಟೆಡ್ ಆಗಿದೆ. ಸದ್ಯಕ್ಕೆ ಈ ಆಯ್ಕೆ ಐಒಎಸ್ ಬೇಟಾ ಬಳಕೆದಾರರಿಗೆ ಲಭ್ಯವಾಗುತ್ತಿದೆ.

ವೆಬ್ ಬಳಕೆದಾರರಿಗೆ ಸ್ಕ್ರೀನ್‌ ಲಾಕ್‌ ಫೀಚರ್:

ಡೆಸ್ಕ್​ಟಾಪ್‌ನಲ್ಲಿ ವಾಟ್ಸ್‌ಆ್ಯಪ್‌ ಬಳಸುವವರಿಗೆ ಸದ್ಯದಲ್ಲೇ ಸ್ಕ್ರೀನ್‌ ಲಾಕ್‌ ಎಂಬ ಹೊಸ ಆಯ್ಕೆ ನೀಡುವುದಾಗಿ ಘೋಷಿಸಿದೆ. ವಾಟ್ಸ್​ಆ್ಯಪ್ ಹಿಂದಿನಿಂದಲೂ ಬಳಕೆದಾರರ ಪ್ರೈವಸಿ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತದೆ. ಇದೀಗ ಭದ್ರತೆಯನ್ನು ಮತ್ತಷ್ಟು ಗಟ್ಟಿ ಮಾಡುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ವಾಟ್ಸ್‌ಆ್ಯಪ್‌ ವೆಬ್​ನಲ್ಲಿ ಬರುವ ಸ್ಕ್ರೀನ್‌ ಲಾಕ್‌ ಎಂಬ ಹೊಸ ಫೀಚರ್​ನಲ್ಲಿ ವಾಟ್ಸ್​ಆ್ಯಪ್ ಓಪನ್‌ ಮಾಡಿದ ಪ್ರತಿ ಬಾರಿ ಬಳಕೆದಾರರು ಪಾಸ್‌ವರ್ಡ್‌ ಹಾಕಬೇಕಾಗುತ್ತದೆ. ಬಳಕೆದಾರರು ತಮ್ಮ ಡೆಸ್ಕ್​​ಟಾಪ್‌ನಲ್ಲಿ ವಾಟ್ಸ್‌ಆ್ಯಪ್‌ ಬಳಸದೇ ಇದ್ದಾಗ ಬೇರೆಯವರು ಅನಧಿಕೃತವಾಗಿ ಬಳಸದಂತೆ ಇದು ರಕ್ಷಣೆ ನೀಡಲಿದೆ ಎಂದು ಕಂಪನಿ ತಿಳಿಸಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:17 pm, Sat, 10 December 22