
ಬೆಂಗಳೂರು (ನ. 01): ಮೊಬೈಲ್ ಪ್ರಿಯರು ಕಡಿಮೆ ಬೆಲೆಗೆ, ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ಸ್ಮಾರ್ಟ್‌ಫೋನ್‌ಗಳನ್ನು (Smartphones) ಖರೀದಿಸಲು ಕಾಯುತ್ತಿರುತ್ತಾರೆ. ಅಂತಹ ಒಂದು ಫೋನ್ ಬಿಡುಗಡೆಗೆ ಜನರು ಕಾಯುತ್ತಿರುತ್ತಾರೆ. ಪ್ರತಿ ತಿಂಗಳು, ಒಂದು ಕಂಪನಿಯು ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಇದೀಗ ಡಿಸೆಂಬರ್‌ನಲ್ಲಿ ಅನೇಕ ಕಂಪನಿಗಳ ಫೋನ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ. ಮುಖ್ಯವಾಗಿ ಮೊದಲ ವಾರವೇ ಮೂರು ಬಂಪರ್ ಬ್ರ್ಯಾಂಡ್ ತನ್ನ ನೂತನ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಲು ತಯಾರಾಗಿದೆ.
ಈ ಫೋನ್ ಡಿಸೆಂಬರ್ 2 ರಂದು ಬಿಡುಗಡೆಯಾಗಲಿದೆ. X300 200-ಮೆಗಾಪಿಕ್ಸೆಲ್ ಟೆಲಿಫೋಟೋ, 50-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಮತ್ತು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸಂವೇದಕವನ್ನು ಹೊಂದಿದೆ. ಇದು ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ವೈಡ್ ಆಂಗಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ.
ಈ ಫೋನ್ ಡಿಸೆಂಬರ್ 3 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಹೈಪರ್‌ಓಎಸ್‌ನೊಂದಿಗೆ ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ. 6000mAh ಬ್ಯಾಟರಿಯನ್ನು ಹೊಂದಿರುವ ಈ ಫೋನ್ ಹಿಂಭಾಗದಲ್ಲಿ 50MP ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 4GB RAM + 128GB ರೂಪಾಂತರದ ಬೆಲೆ ರೂ. 12,499, 6GB RAM + 128GB ಸಂಗ್ರಹಣೆಯ ಬೆಲೆ ರೂ. 13,999 ಆಗಿದೆ.
iQOO 15: ಐಕ್ಯೂಯಿಂದ ಬರೋಬ್ಬರಿ 7000mAh ಬ್ಯಾಟರಿಯ ಹೊಸ ಫೋನ್ ಬಿಡುಗಡೆ: ಬೆಲೆ 72,999 ರೂ.
ಈ ಫೋನ್ ಡಿಸೆಂಬರ್ 4 ರಂದು ಬಿಡುಗಡೆಯಾಗಲಿದೆ. ಇದು 7000mAh ಬ್ಯಾಟರಿಯೊಂದಿಗೆ ಮೀಡಿಯಾಟೆಕ್ ಡೈಮನ್ಸಿಟಿ 7400 Ultra 5G ಚಿಪ್‌ಸೆಟ್, 45W ವೇಗದ ಚಾರ್ಜ್, 144Hz ರಿಫ್ರೆಶ್ ದರ, 1000 nits ಪೀಕ್ ಬ್ರೈಟ್‌ನೆಸ್, 10GB ವರ್ಚುವಲ್ RAM ಹೊಂದಿರುವ 8GB RAM, ಕೂಲಿಂಗ್ ಸಿಸ್ಟಮ್ ಮತ್ತು 50-ಮೆಗಾಪಿಕ್ಸೆಲ್ AI ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ