Galaxy M34 5G: ಫೋಟೋ ತೆಗೆಯುವಾಗ ಶೇಕ್ ಆದ್ರೂ ಏನಾಗಲ್ಲ: ಭಾರತದಲ್ಲಿ ಗ್ಯಾಲಕ್ಸಿ M34 5G ಫೋನ್ ಲಾಂಚ್

|

Updated on: Jul 07, 2023 | 3:04 PM

ಸ್ಯಾಮ್​ಸಂಗ್ ಕಂಪನಿ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಗ್ಯಾಲಕ್ಸಿ M34 5G (Galaxy M34 5G) ಫೋನನ್ನು ಬಿಡುಗಡೆ ಮಾಡಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಆಕರ್ಷಕ ಕ್ಯಾಮೆರಾ, ದೊಡ್ಡ ಬ್ಯಾಟರಿ ಲೈಫ್ ಸೇರಿದಂತೆ ಅನೇಕ ಆಯ್ಕೆಗಳಿಂದ ಆವೃತ್ತವಾಗಿದೆ.

Galaxy M34 5G: ಫೋಟೋ ತೆಗೆಯುವಾಗ ಶೇಕ್ ಆದ್ರೂ ಏನಾಗಲ್ಲ: ಭಾರತದಲ್ಲಿ ಗ್ಯಾಲಕ್ಸಿ M34 5G ಫೋನ್ ಲಾಂಚ್
Galaxy M34 5G
Follow us on

ಕಳೆದ ಕೆಲವು ತಿಂಗಳುಗಳಿಂದ ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಯಾಮ್​ಸಂಗ್ (Samsung) ಕಂಪನಿ ಒಂದರ ಹಿಂದೆ ಒಂದರಂತೆ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಈಗಾಲೇ ತನ್ನ ಅನ್​ಪ್ಯಾಕ್ಡ್ ಈವೆಂಟ್ ಅನ್ನು ಘೋಷಣೆ ಮಾಡಿದ್ದು, ಇದರಲ್ಲಿ ನೂತನವಾದ ಮಡಚುವ ಫೋನ್ (Foldable Phone) ರಿಲೀಸ್ ಮಾಡುವುದಾಗಿ ಹೇಳಿದೆ. ಇದರ ನಡುವೆ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಯಾಮ್​ಸಂಗ್ ಗ್ಯಾಲಕ್ಸಿ M34 5G (Galaxy M34 5G) ಫೋನನ್ನು ಬಿಡುಗಡೆ ಮಾಡಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಆಕರ್ಷಕ ಕ್ಯಾಮೆರಾ, ದೊಡ್ಡ ಬ್ಯಾಟರಿ ಲೈಫ್ ಸೇರಿದಂತೆ ಅನೇಕ ಆಯ್ಕೆಗಳಿಂದ ಆವೃತ್ತವಾಗಿದೆ. ಹಾಗಾದರೆ, ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ಸ್ಯಾಮ್​ಸಂಗ್ ಗ್ಯಾಲಕ್ಸಿ M34 5G ಸ್ಮಾರ್ಟ್​ಫೋನ್ ಎರಡು ವೇರಿಯೆಂಟ್​ನಲ್ಲಿ ಅನಾವರಣಗೊಂಡಿದೆ. ಇದರ 6GB RAM + 128GB ಸ್ಟೋರೇಜ್ ಆಯ್ಕೆಗೆ 16,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ ಇದರ 8GB RAM + 128GB ಸ್ಟೋರೇಜ್ ರೂಪಾಂತರಕ್ಕೆ 17,999 ರೂ. ಎನ್ನಲಾಗಿದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಜುಲೈ 15 ರಿಂದ ಖರೀಗೆ ಸಿಗಲಿದೆ. ಇದು ಸಿಲ್ವರ್, ಮಿಡ್​ನೈಟ್ ಬ್ಲೂ, ವಾಟರ್​ಫಾಲ್ ಬ್ಲೂ ಬಣ್ಣಗಳಲ್ಲಿ ಮಾರಾಟ ಕಾಣಲಿದೆ.

ಇದನ್ನೂ ಓದಿ
Nothing Phone 2: ನಥಿಂಗ್ ಫೋನ್ 2 ಭಾರತದ ಬೆಲೆ ಸೋರಿಕೆ: ಖರೀದಿಗೆ ಕ್ಯೂ ಗ್ಯಾರೆಂಟಿ
Power Bank: ಪವರ್ ಬ್ಯಾಂಕ್ ಮೂಲಕ ಪದೇ ಪದೇ ಮೊಬೈಲ್ ಚಾರ್ಜ್ ಮಾಡುವುದು ಎಷ್ಟು ಸುರಕ್ಷಿತ?: ಬಂದಿದೆ ಹೊಸ ಮಾಹಿತಿ
Itel P40+: ಬಜೆಟ್ ದರಕ್ಕೆ ಭರ್ಜರಿ ಬ್ಯಾಟರಿ ಜತೆಗೆ ಐಟೆಲ್ ಫೋನ್
Threads: ಟ್ವಿಟರ್​ಗೆ ಸ್ಪರ್ಧೆ ಒಡ್ಡಲು ಇನ್​ಸ್ಟಾಗ್ರಾಂ ಪರಿಚಯಿಸಿದೆ ಥ್ರೆಡ್ಸ್

Threads: ಇಷ್ಟವಿಲ್ಲವೆಂದು ಥ್ರೆಡ್ಸ್ ಪ್ರೊಫೈಲ್​​ ಡಿಲೀಟ್ ಮಾಡಲು ಸಾಧ್ಯವಿಲ್ಲ; ಹಾಗೆ ಮಾಡುವುದಾದರೆ ಏನು ಮಾಡಬೇಕು?

ಫೀಚರ್ಸ್ ಏನಿದೆ?:

ಗ್ಯಾಲಕ್ಸಿ M32 5G ಸ್ಮಾರ್ಟ್​ಫೋನ್ ಪೂರ್ಣ HD+ ಸ್ಕ್ರೀನ್ ರೆಸಲ್ಯೂಶನ್ ಮತ್ತು 120Hz ನ ರಿಫ್ರೆಶ್ ದರದೊಂದಿಗೆ 6.5-ಇಂಚಿನ AMOLED ಡಿಸ್ ಪ್ಲೇಯನ್ನು ಹೊಂದಿದೆ. ಈ ಫೋನಿನ ಮುಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಪಡೆದುಕೊಂಡಿದೆ. ಎಕ್ಸಿನೊಸ್ 1280 ಪ್ರೊಸೆಸರ್​ನಿಂದ ಚಾಲಿತವಾಗಿದೆ, ಇದು ಗ್ಯಾಲಕ್ಸಿ M33 5G, ಗ್ಯಾಲಕ್ಸಿ A53 5G ಮತ್ತು ಗ್ಯಾಲಕ್ಸಿ A33 5G ನಲ್ಲಿ ನೀಡಿದ ಚಿಪ್ ಆಗಿದೆ. ಆಂಡ್ರಾಯ್ಡ್ 13 ನಲ್ಲಿ ರನ್ ಆಗುತ್ತದೆ. ಇದರೊಂದಿಗೆ ನಾಲ್ಕು ವರ್ಷಗಳ OS ನವೀಕರಣಗಳು ಮತ್ತು ಐದು ವರ್ಷಗಳ ಭದ್ರತಾ ನವೀಕರಣಗಳ ಭರವಸೆ ನೀಡಿದೆ.

ಕ್ಯಾಮರಾ ವಿಚಾರಕ್ಕೆ ಬರುವುದಾದರೆ, ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. OIS ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಪ್ರಾಥಮಿಕ ಕ್ಯಾಮೆರಾ ನೀಡಲಾಗಿದೆ. 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಸಹ ಒಳಗೊಂಡಿದೆ. ಮುಂಭಾಗದಲ್ಲಿ, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 12-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಇದೆ.

ಈ ಸ್ಮಾರ್ಟ್‌ಫೋನ್ ಅನ್ನು ಮಾನ್‌ಸ್ಟರ್ ಶಾಟ್ 2.0 ಎಂಬುದಾಗಿ ಕರೆಯಲಾಗುತ್ತದೆ ಎಂದು ಸ್ಯಾಮ್‌ಸಂಗ್ ಹೇಳಿದೆ. ಅಂದರೆ ಬಳಕೆದಾರರಿಗೆ ಒಂದೇ ಟೇಕ್‌ನಲ್ಲಿ ಅನೇಕ ಫೋಟೋಗಳನ್ನು ಕ್ಲಿಕ್ ಮಾಡಲು ಇದು ಅನುಮತಿಸುತ್ತದೆ. ಈ ಮೂಲಕ ಇದರಲ್ಲಿ ಉತ್ತಮವಾದ ಫೋಟೋವನ್ನು ಆಯ್ಕೆ ಮಾಡಬಹುದು. ಇದರ ಜೊತೆಗೆ ಫೋಟೋ ತೆಗೆಯುವಾಗ ಅಥವಾ ವಿಡಿಯೋ ಮಾಡುವಾಗ ಕೈ ಶೇಕ್ ಆದರೂ ಅದ್ಭುತವಾಗಿ ಸೆರೆ ಹಿಡಿಯುತ್ತಂತೆ. ನೈಟೋಗ್ರಫಿ ಎಂಬ ವಿಶೇಷ ಆಯ್ಕೆ ಕೂಡ ನೀಡಲಾಗಿದ್ದು, ರಾತ್ರಿಯಲ್ಲಿ ಉತ್ತಮ ಫೋಟೋ ಕ್ಲಿಕ್ ಮಾಡಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G ಸ್ಮಾರ್ಟ್‌ಫೋನ್​ನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 6,000mAh ಸಾಮರ್ಥ್ಯದ ಬ್ಯಾಟರಿ ಇದೆ. ಇದು 25W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದುಕೊಂಡಿದೆ. ಉಳಿದಂತೆ 4G VoLTE, Wi-Fi 802.11 b/g/n/ac, ಬ್ಲೂಟೂತ್, ಇನ್ ಡಿಸ್ ಪ್ಲೇ ಫಿಂಗರ್​ಪ್ರಿಂಟ್ ಸೆನ್ಸಾರ್, ಯುಎಸ್​ಬಿ ಟೈಪ್ -C ಪೋರ್ಟ್ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:03 pm, Fri, 7 July 23