Samsung Galaxy: ಮಡಚಿದರೆ ಫೋನ್‌, ಬಿಡಿಸಿದರೆ ಸ್ಮಾರ್ಟ್​ಫೋನ್: ಇದು ಸ್ಯಾಮ್​ಸಂಗ್​ನ ಹೊಸ ಮೊಬೈಲ್

| Updated By: ಝಾಹಿರ್ ಯೂಸುಫ್

Updated on: Aug 12, 2021 | 7:47 PM

Samsung Galaxy Z Fold 3, Galaxy Z Flip 3: ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3 ಸ್ಮಾರ್ಟ್‌ಫೋನ್ 6.7 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಈ ಫೋನಿನಲ್ಲಿ Qualcomm Snapdragon 888 ಪ್ರೊಸೆಸರ್ ಅಳವಡಿಸಲಾಗಿದೆ.

Samsung Galaxy: ಮಡಚಿದರೆ ಫೋನ್‌, ಬಿಡಿಸಿದರೆ ಸ್ಮಾರ್ಟ್​ಫೋನ್: ಇದು ಸ್ಯಾಮ್​ಸಂಗ್​ನ ಹೊಸ ಮೊಬೈಲ್
Samsung Galaxy
Follow us on

ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಸ್ಯಾಮ್​ಸಂಗ್​ನ (Samsung Galaxy) ಮಡಚುವ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ. ಗ್ಯಾಲಕ್ಸಿ Z ಫೋಲ್ಡ್ 3 (Samsung Galaxy Z Fold 3), ಗ್ಯಾಲಕ್ಸಿ Z ಫ್ಲಿಪ್ 3 (Galaxy Z Flip 3) ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸಲಾಗಿದ್ದು, ಇದರ ಜೊತೆಗೆ ಗ್ಯಾಲಕ್ಸಿ ವಾಚ್ 4 ಸರಣಿಯ ಸ್ಮಾರ್ಟ್ ವಾಚ್‌ಗಳು ಮತ್ತು ಗ್ಯಾಲಕ್ಸಿ ಬಡ್ಸ್ 2 ಅನ್ನು ಸಹ ಸ್ಯಾಮ್‌ಸಂಗ್ ಅನ್‌ಪ್ಯಾಕ್ಡ್ 2021 ಸಮಾರಂಭದಲ್ಲಿ ಅನಾವರಣಗೊಳಿಸಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 3 ವಿಶೇಷತೆಗಳು ಮತ್ತು ಬೆಲೆ:
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 3 ಫೋಲ್ಡಬಲ್ ಸ್ಮಾರ್ಟ್‌ಫೋನ್​ನಲ್ಲಿ 7.6 ಇಂಚಿನ ಪ್ರೈಮರಿ QXGA + ಡೈನಾಮಿಕ್ ಸ್ಕ್ರೀನ್ ನೀಡಲಾಗಿದೆ. ಈ ಫೋನಿನಲ್ಲಿ Qualcomm Snapdragon 888 ಪ್ರೊಸೆಸರ್ ಅಳವಡಿಸಲಾಗಿದೆ. ಇದರ ಸ್ಕ್ರೀನ್ ರೆಸಲ್ಯೂಶನ್ 2,208 x 1,768 ಪಿಕ್ಸೆಲ್‌ಗಳು. ಹಾಗೆಯೇ ಇದರಲ್ಲಿರುವ ಸೆಕೆಂಡರಿ ಸ್ಕ್ರೀನ್ 6.23 ಇಂಚುಗಳನ್ನು ಹೊಂದಿದೆ. ಇದು 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದರಲ್ಲಿ 12 mp ಎರಡು ಕ್ಯಾಮೆರಾ ಹಾಗೂ 10mpಯ ಕ್ಯಾಮೆರಾವನ್ನು ಹಿಂಬದಿಯಲ್ಲಿ ನೀಡಲಾಗಿದೆ. ಹಾಗೆಯೇ 4mp ಯ ಮತ್ತೊಂದು ಕ್ಯಾಮೆರಾ ಮುಂಭಾಗದಲ್ಲಿದೆ. ಇನ್ನು 4,400mAh ಬ್ಯಾಟರಿಯನ್ನು ಇದರಲ್ಲಿ ನೀಡಲಾಗಿದೆ. ಫ್ಯಾಂಟಮ್ ಗ್ರೀನ್, ಫ್ಯಾಂಟಮ್ ಸಿಲ್ವರ್ ಮತ್ತು ಫ್ಯಾಂಟಮ್ ಬ್ಲಾಕ್ ಬಣ್ಣಗಳಲ್ಲಿ ಈ ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆಲೆಯನ್ನು 1,799.99 ಡಾಲರ್. ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 1,33,000 ರೂ. ಇರಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3 ವಿಶೇಷತೆಗಳು:
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3 ಸ್ಮಾರ್ಟ್‌ಫೋನ್ 6.7 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಈ ಫೋನಿನಲ್ಲಿ Qualcomm Snapdragon 888 ಪ್ರೊಸೆಸರ್ ಅಳವಡಿಸಲಾಗಿದೆ. ಇದು 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಫೋಟೋಗ್ರಫಿಗಾಗಿ, ಈ ಫೋನ್ 12 ಮೆಗಾಪಿಕ್ಸೆಲ್​ನ ಎರಡು ಪ್ರೈಮರಿ ಕ್ಯಾಮೆರಾ ಹಾಗೂ ಸೆಲ್ಫಿಗಾಗಿ 10 ಮೆಗಾಪಿಕ್ಸೆಲ್​ನ ಒಂದು ಕ್ಯಾಮೆರಾ ಇದರಲ್ಲಿದೆ. ಇನ್ನು 3,300mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ನೀಡಲಾಗಿದೆ. ಇದರ ಆರಂಭಿಕ ಬೆಲೆ 999.99 ಡಾಲರ್. ಅಂದರೆ ಭಾರತದಲ್ಲಿ ಸುಮಾರು 74,200 ರೂ.ನಲ್ಲಿ ಖರೀದಿಗೆ ಲಭ್ಯವಿರಲಿದೆ.

ಇದನ್ನೂ ಓದಿ: ಇಂಟರ್‌ನೆಟ್‌ ಸೇವೆಗೆ ಟಾಟಾ ಸಜ್ಜು: ನೆಟ್​ವರ್ಕ್ ಇಲ್ಲದೆಯೂ ಸಿಗಲಿದೆ ಅಂತರ್ಜಾಲ ಸೇವೆ

ಇದನ್ನೂ ಓದಿ: Health Tips : ಇದು ನಿಮಗೆ ಗೊತ್ತೇ? ಬೆಳ್ಳುಳ್ಳಿ ಸಿಪ್ಪೆಯಿಂದ ಸಿಗುತ್ತೆ ಹಲವು ಪ್ರಯೋಜನಗಳು

ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ