Kannada News Technology Samsung launched the all-new affordable Galaxy F13 in India just RS 11,499
Galaxy F13: 6000mAh ಬ್ಯಾಟರಿ, 50MP ಕ್ಯಾಮೆರಾ: ಕೇವಲ 11,499 ರೂ. ಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಬಿಡುಗಡೆ
Samsung Galaxy F13: ಸಮಯ ತೆಗೆದುಕೊಂಡ ಆಕರ್ಷಕ ಮೊಬೈಲ್ ಅನ್ನು ಸ್ಯಾಮ್‌ಸಂಗ್ ತಯಾರಿಸುತ್ತಿದೆ. ಇದೀಗ ದೇಶದಲ್ಲಿ ಸ್ಯಾಮ್‌ಸಂಗ್ ತನ್ನ ವಿಶೇಷ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಫ್13 (Samsung Galaxy F13) ಅನ್ನು ಲಾಂಚ್ ಮಾಡಿದೆ.
ಈ ಮೊದಲು ಎರಡು ವಾರಕ್ಕೆ ಒಂದು ಸ್ಮಾರ್ಟ್ಫೋನನ್ನು (Smartphone) ಭಾರತದ ಮಾರುಕಟ್ಟೆಗೆ ಪರಿಚಿಯಿಸುತ್ತಿದ್ದ ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ (Samsung) ಕಂಪನಿ ಈಗ ತಿಂಗಳಿಗೆ ಒಂದರಂತೆ ಮೊಬೈಲ್ ಅನ್ನು ಬಿಡುಗಡೆ ಮಾಡುತ್ತಿದೆ. ಸಮಯ ತೆಗೆದುಕೊಂಡ ಆಕರ್ಷಕ ಮೊಬೈಲ್ ಅನ್ನು ಸ್ಯಾಮ್ಸಂಗ್ತಯಾರಿಸುತ್ತಿದೆ. ಇದೀಗ ದೇಶದಲ್ಲಿ ಸ್ಯಾಮ್‌ಸಂಗ್ ತನ್ನ ವಿಶೇಷ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಫ್13 (Samsung Galaxy F13) ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಆಕರ್ಷಕ ಡಿಸ್ ಪ್ಲೇ ವಿನ್ಯಾಸ ಹಾಗೂ ಅತ್ಯುತ್ತಮವಾದ ಕಾರ್ಯಕ್ಷಮತೆಯನ್ನು ಹೊಂದಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಗಳನ್ನು ಅಳವಡಿಸಲಾಗಿದೆ?, ಆಫರ್ ಏನಿದೆ ಎಂಬುದನ್ನು ನೋಡೋಣ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್ ಭಾರತದಲ್ಲಿ ಒಟ್ಟು ಎರಡು ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಗೆ 11,999 ರೂ. ಬೆಲೆ ಹೊಂದಿದೆ. ಹಾಗೆಯೆ ಇದರ 4GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ 12,999 ರೂ. ನಿಗದಿ ಮಾಡಲಾಗಿದೆ.
ಇದೇ ಜೂನ್ 29 ರಿಂದ ತನ್ನ ಮೊದಲ ಸೇಲ್ ಆರಂಭಿಸಲಿದ್ದು ಸ್ಯಾಮ್‌ಸಂಗ್.ಕಾಮ್, ಫ್ಲಿಪ್‌ಕಾರ್ಟ್.ಕಾಮ್ ಮತ್ತು ಆಯ್ದ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಸಬಹುದು. ಲಾಂಚ್ ಆಫರ್ ಪ್ರಯುಕ್ತ ಐಸಿಐಸಿಐ ಬ್ಯಾಂಕ್ ಮೂಲಕ ಖರೀದಿಸುವವರು 1,000 ರೂ. ವರೆಗೆ ತ್ವರಿತ ರಿಯಾಯಿತಿ ಪಡೆಯಬಹುದು.
ಈ ಫೋನ್ 6.6 ಫುಲ್ ಹೆಚ್‌ಡಿ + LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಪಡೆದುಕೊಂಡಿದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಗೀರುಗಳಿಂದ ರಕ್ಷಣೆಯನ್ನು ಪಡೆಯಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಎಕ್ಸಿನೋಸ್ 850 ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಫೋನ್ RAM ಪ್ಲಸ್ ಟೆಕ್ನಾಲಜಿಯನ್ನು ಹೊಂದಿದ್ದು, ಹೆಚ್ಚಿನ RAM ಸಾಮರ್ಥ್ಯವನ್ನು ನೀಡಲು ಐಡಲ್ ಸ್ಟೋರೇಜ್ ಅನ್ನು ಬಳಸಲಿದೆ.
ಇದನ್ನೂ ಓದಿ
Realme 9 Pro Plus 5G: ರಿಯಲ್ ಮಿ 9 ಪ್ರೋ ಪ್ಲಸ್ ಖರೀದಿಗೆ ಕ್ಯೂ ನಿಂತ ಜನರು: ಕೇವಲ 7,000 ರೂ. ಗೆ ನಿಮ್ಮದಾಗಿಸಿ
POCO F4: ಕ್ಯಾಮೆರಾ ಪ್ರಿಯರೇ ಗಮನಿಸಿ: ಜಾಗತೀಕ ಮಾರುಕಟ್ಟೆಯಲ್ಲಿ ಇಂದು ರಿಲೀಸ್ ಆಗಲಿದೆ ಪೋಕೋ F4
OnePlus Nord 2T: ವಿದೇಶದಲ್ಲಿ ಧೂಳೆಬ್ಬಿಸಿದ ಈ ಸ್ಮಾರ್ಟ್‌ಫೋನ್ ಜುಲೈ 1ಕ್ಕೆ ಭಾರತದಲ್ಲಿ ರಿಲೀಸ್
TCS: ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಸಿಗಲಿದೆ ಚಿಪ್ ಆಧಾರಿತ ಇ- ಪಾಸ್ಪೋರ್ಟ್
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.
ದೀರ್ಘ ಸಮಯ ಬಾಳಿಕೆ ಬರುವ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲುಟೂತ್ v5.0, ವೈಫೈ, ಯುಎಸ್‌ಬಿ ಪೋರ್ಟ್, 3.5ಮಿ.ಮೀ ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ.